ಡಾನ್ಸ್ ಬಾರ್ : ಸುಪ್ರೀಂಗೆ ಮಹಾರಾಷ್ಟ್ರ ಸೆಡ್ಡು

Dance bars : Maharashtra not to obey SC order
ಮುಂಬೈ, ಜು. 17 : ಮಹಾರಾಷ್ಟ್ರದಲ್ಲಿ ಡಾನ್ಸ್ ಬಾರ್‌ಗಳನ್ನು ತೆರೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ಡಾನ್ಸ್ ಬಾರ್ ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಹೇಳಿರುವ ಮಹಾರಾಷ್ಟ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸೆಡ್ಡು ಹೊಡೆದಿದೆ.

2005ರಲ್ಲಿ ಡಾನ್ಸ್ ಬಾರ್‌ಗಳನ್ನು ಬಂದ್ ಮಾಡಬೇಕೆಂದು ರಾಜ್ಯ ಸರಕಾರ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ, ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಆದೇಶವನ್ನು ಜು. 16ರಂದು ಎತ್ತಿಹಿಡಿದು ಡಾನ್ಸ್ ಬಾರುಗಳಿಗೆ ಅನುಮತಿ ನೀಡಿದೆ.

ಮಹಾರಾಷ್ಟ್ರ ಸರಕಾರದ ಗೃಹ ಸಚಿವ ಆರ್.ಆರ್. ಪಾಟೀಲ್ ಅವರು, ಯಾವುದೇ ಕಾರಣಕ್ಕೂ ಡಾನ್ಸ್ ಬಾರ್‌ಗಳು ತೆರೆಯಲು ಅವಕಾಶ ನೀಡುವುದಿಲ್ಲ. ಈ ಕುರಿತಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದ್ದಾರೆ.

ಡಾನ್ಸ್ ಬಾರ್ ಮುಚ್ಚಬೇಕೆಂಬ ಸರಕಾರದ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎರಡೂ ಸದನಗಳ ಸದಸ್ಯರ ಸಮಿತಿ ರಚಿಸಿ ಕಾನೂನು ತಜ್ಞರಿಂದ ಸಲಹೆ ಪಡೆದ ನಂತರ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಆರ್ ಆರ್ ಪಾಟೀಲ್ ಅವರು ಸದನಕ್ಕೆ ತಿಳಿಸಿದ್ದಾರೆ.

ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಹಾಕುತ್ತೇವೆ ಅಥವಾ ಅಗತ್ಯ ಬಿದ್ದರೆ ಬಾಂಬೆ ಪೊಲೀಸ್ ಆಕ್ಟನ್ನು ತಿದ್ದುಪಡಿ ಮಾಡಿಯಾದರೂ ಡಾನ್ಸ್ ಬಾರುಗಳು ತೆರೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ವಾದಿಸಿದ್ದಾರೆ.

ಬಾರ್ ಡಾನ್ಸರುಗಳು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸಿಹಿ ಹಂಚಿಕೊಳ್ಳುವ ಮೂಲಕ ಸ್ವಾಗತಿಸಿದ್ದಾರೆ. ಆದರೆ, ಮಹಾರಾಷ್ಟ್ರ ಸರಕಾರದ ಧೋರಣೆ ಅವರ ಮೇಲೆ ಮತ್ತೆ ಕರಿನೆರಳು ಬೀಳುವಂತೆ ಮಾಡಿದೆ. 2005ರಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಡಾನ್ಸ್ ಬಾರ್ ಬಂದ್ ಮಾಡಬೇಕೆಂಬ ಮಸೂದೆಯನ್ನು ತಿರಸ್ಕರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+