ತಾಯಿಯ ಶವದ ಜೊತೆ ಮೂರು ದಿನ ಕಳೆದ ಕಂದಮ್ಮ!

ಕೌಟುಂಬಿಕ ಕಲಹದಿಂದಾಗಿ ಚಿಕ್ಕಬೇಗೂರಿನ ನಿವಾಸಿ ಶಿಲ್ಪಾ ಮತ್ತು ಮುರಳಿ ದಂಪತಿಯ ನಡುವೆ ಜಗಳ ಪ್ರಾರಂಭವಾಗಿದೆ. ಜಗಳದಿಂದ ಬೇಸತ್ತು ಪತಿ ಮನೆ ಬಿಟ್ಟು ತೆರಳಿದ್ದಾನೆ. ಇದರಿಂದ ಮನನೊಂದ ಶಿಲ್ಪಾ (28) ಮಗವನ್ನು ಬಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಬಿಟ್ಟು ಹೋದ ಪತಿ ಮೂರುದಿಗಳು ಕಳೆದರೂ ಮನಗೆ ಆಗಮಿಸಿಲ್ಲ. ಮನೆಯಯಲ್ಲಿ ಬೇರೆ ಯಾರು ಇಲ್ಲದ ಕಾರಣ, ಒಂದೂವರೆ ವರ್ಷದ ಮಗು ತಾಯಿಯ ಶವದ ಜೊತೆ ಮೂರು ದಿನ ಕಳೆದಿದೆ. ಹಸಿವಿನಿಂದ ಮಗು ನಿತ್ರಾಣಗೊಂಡಿತ್ತು.
ಮಂಗಳವಾರ ಬೆಳಗ್ಗೆ ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮನೆಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶಿಲ್ಪಾ ಶವ ಪತ್ತೆಯಾಗಿದೆ. ನಿತ್ರಾಣಗೊಂಡಿದ್ದ ಮಗು ಬದುಕಿರುವ ವಿಷಯ ತಿಳಿದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂರು ವರ್ಷದ ದಾಂಪತ್ಯ : ಶಿಲ್ಪಾ ಮತ್ತು ಮುರಳಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಿಲ್ಪಾ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮುರಳಿ ಹೇರ್ ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದರು.
ಸದ್ದಗುಂಟೆ ಪಾಳ್ಯದಲ್ಲಿ ವಾಸಿಸುತ್ತಿದ್ದ ಇವರು ಎಂಟು ತಿಂಗಳ ಹಿಂದೆ ಚಿಕ್ಕಬೇಗೂರಿಗೆ ಬಂದು ನೆಲೆಸಿದ್ದರು. ಮೂರು ದಿನಗಳ ಹಿಂದೆ ದಂಪತಿಗಳ ನಡುವೆ ಜಗಳ ನಡೆದು, ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿಲ್ಪಾ ಪೋಷಕರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ. ಪರಾರಿಯಾಗಿರುವ ಶಿಲ್ಪಾಳ ಪತಿ ಮುರಳಿಗಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ವರದಕ್ಷಿಣೆ ಕಿರುಕುಳ ದೂರು : ಶಿಲ್ಪಾಳಿಗೆ ಮುರಳಿ ನಿರಂತರವಾಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಿಲ್ಪಾಳ ತಾಯಿ ಸುಜಾತ ಪೊಲೀಸರಿಗೆ ದೂರು ನೀಡಿದ್ದಾರೆ.


Click it and Unblock the Notifications
