ಮನಿ ಲಾಂಡ್ರಿಂಗ್ : 22 ಬ್ಯಾಂಕುಗಳಿಗೆ ದಂಡ ಹಾಕಿದ ಆರ್ಬಿಐ

Money laundering: 22 banks fined Rs 49.5 crore by RBI
ನವದೆಹಲಿ, ಜು.15: ಕಾನೂನು ಬಾಹಿರವಾಗಿ ಹವಾಲ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 22 ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆರ್ ಬಿಐ ಸೋಮವಾರ 49.5 ಕೋಟಿ ರು. ಭಾರಿ ಮೊತ್ತದ ದಂಡವನ್ನು ವಿಧಿಸಿದೆ. ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮಂಗಳವಾರ ಐಸಿಐಸಿಐ, ಏಕ್ಸಿಸ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕು ಗಳಿಗೆ ನೋಟಿಸ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಷ್ಟ್ರೀಕೃತ ಬ್ಯಾಂಕ್ ಗಳಾದ ಎಸ್ ಬಿಐ, ಯಸ್ ಬ್ಯಾಂಕ್, ಕೊಲ್ಕತ್ತಾ ಮಹೀಂದ್ರ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಿಟಿ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ ಇನ್ನೂ ಮುಂದೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತೆಯೂ ಆರ್ ಬಿಐ ಸೂಚಿಸಿದೆ.

ಎಸ್ ಬಿಐ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯಾ ಓವರ್ ಸೀಸ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕಿಗೆ ತಲಾ 3 ಕೋಟಿ ರು. ದಂಡ ವಿಧಿಸಿದೆ.

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಲಕ್ಷ್ಮೀ ವಿಲಾಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಕಾಶ್ಮೀರ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕುಗಳಿಗೆ ಆರ್ ಬಿಐ ತಲಾ 2.5 ಕೋಟಿ ರು. ದಂಡ ವಿಧಿಸಿದೆ.

ಯಸ್ ಬ್ಯಾಂಕ್, ವಿಜಯಾಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಧನಲಕ್ಷ್ಮಿ ಬ್ಯಾಂಕ್ ಗಳಿಗೆ ತಲಾ 2 ಕೋಟಿ ರೂ. ದಂಡ ವಿಧಿಸಿದ್ದು, ಇದೇ ಆರೋಪ ಎದುರಿಸುತ್ತಿರುವ ಸಿಟಿ ಬ್ಯಾಂಕ್, ಸ್ಟ್ಯಾಂಡರ್ಡ್ ಚಾಟೆರ್ಡ್ ಬ್ಯಾಂಕ್‌ಗಳಿಗೂ ದಂಡ ವಿಧಿಸಲಾಗಿದ್ದು, ಮುಂದೆ ಇದೇ ರೀತಿಯ ಮನಿಲ್ಯಾಂಡರಿ ಪ್ರಕರಣಗಳು ದೃಢಪಟ್ಟಲ್ಲಿ ಆರ್ಥಿಕ ಕಾನೂನು ನೀತಿಯ ಅಡಿಯಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಮನಿಲಾಂಡ್ರಿಂಗ್ ಎಂದರೇನು? : ಕಾಳಧನಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಿಂದ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಸುಮಾರು 23 ಬ್ಯಾಂಕ್ ಹಾಗೂ ವಿಮೆ ಕಂಪನಿಗಳಲ್ಲಿ ಮನಿ ಲಾಂಡ್ರಿಂಗ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ತನಿಖೆಯಿಂದ ಹೊರ ಬಿದ್ದ ಬ್ಯಾಂಕುಗಳ ಹೆಸರುಗಳು ಇಂತಿದೆ: ಎಸ್ ಬಿಐ, ಎಲ್ ಐಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ರಿಲಯನ್ಸ್ ಲೈಫ್, ಟಾಟಾ ಎಐಎ, ಯೆಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ದೇನಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಡಿಸಿಬಿ ಬ್ಯಾಂಕ್ ಹಾಗೂ ಬಿರ್ಲಾ ಸನ್ ಲೈಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+