ಅಪ್ರಾಪ್ತೆ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

rape
ಬೆಂಗಳೂರು, ಜು.12 : ನಗರದ ಕೆಂಗೇರಿಯಲ್ಲಿ ಅಪ್ರಾಪೆ ಮೇಲೆ ಅತ್ಯಾಚಾರ ನಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಶ್ರೀರಾಂಪುರದಲ್ಲಿ ನಡೆದಿದೆ. ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂಪುರದ ನಿವಾಸಿ ಅರುಣ್ (32) ತನ್ನ ಮನೆಯ ಮೇಲೆ ಬಾಡಿಗೆಗೆ ಇದ್ದ ಕುಟುಂಬದ, 15ರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಗರ್ಭಿಣಿ ಆದಾಗ ಘಟನೆ ಬೆಳಕಿಗೆ ಬಂದಿದೆ.

ಅರುಣ್ ನಿಂದ ಅತ್ಯಾಚಾರಕ್ಕೆ ಒಳಗಾಗಿ, ಎರಡು ತಿಂಗಳ ಗರ್ಭವತಿಯಾಗಿದ್ದ ಬಾಲಕಿ ಭಯದಿಂದ, ಮನೆ ತೊರೆದು ಹೊಸೂರಿಗೆ ಪರಾರಿಯಾಗಿದ್ದಳು. ಪೋಷಕರ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ಬಾಲಕಿಯನ್ನು ಪೋಷಕರಿಗೆ ತಂದು ಒಪ್ಪಿಸಿದ್ದಾರೆ.

ಎರಡು ಮನೆಯ ಮಾಲೀಕ : ಆರೋಪಿ ಅರುಣ್ ಅವರಿಗೆ ಶ್ರೀರಾಂಪುರದ ಕ್ರಿಶ್ಚಿಯನ್‌ ಕಾಲೋನಿಯಲ್ಲಿ ಎರಡು ಅಂತಸ್ತಿನ ಮನೆಯಿದೆ. ಮೊದಲ ಅಂತಸ್ತಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಟ್ಟಿಗೆ ಅರುಣ್‌ ವಾಸವಾಗಿದ್ದಾರೆ.

ಎರಡನೇ ಅಂತಸ್ತಿನ ಮನೆಗೆ ಶೋಷಿತ ಬಾಲಕಿಯ ಕುಟುಂಬ 9 ತಿಂಗಳ ಹಿಂದೆ ಬಂದು ನೆಲೆಸಿತ್ತು. ಬಾಲಕಿ ತಂದೆ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಂಪುರ ಬಳಿ ಖಾಸಗಿ ಶಾಲೆಯಲ್ಲಿ ಬಾಲಕಿ 10ನೇ ತರಗತಿ ಓದುತ್ತಿದ್ದಳು.

ಸೋಮವಾರರಿಂದ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಹುಡುಕಾಟ ನಡೆಸಿದರೂ ಆಕೆಯ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಆದ್ದರಿಂದ ಅವರು, ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.(ಕೆಂಗೇರಿ: 5 ತಿಂಗಳಿಂದ ಪಕ್ಕದ್ಮನೆ ಬಾಲಕಿ ಮೇಲೆ ರೇಪ್ )

ಮಂಗಳವಾರ ತಾಯಿಯ ಮೊಬೈಲ್‌ಗೆ ವಿದ್ಯಾರ್ಥಿನಿ ಕರೆ ಮಾಡಿದರೂ, ಮಾತನಾಡದೆ ಕರೆ ಕಟ್ ಮಾಡಿದ್ದಳು. ತತಕ್ಷಣವೇ ಮಗಳು ಕರೆ ಮಾಡಿರುವ ವಿಚಾರವನ್ನು ಪೊಲೀಸರ ಗಮನಕ್ಕೆ ಪೋಷಕರು ತಂದಿದ್ದರು.

ಮೊಬೈಲ್‌ ಕರೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಹೊಸೂರು ಬಳಿ ಬಸ್‌ ನಿಲ್ದಾಣದಲ್ಲಿ ಬಾಲಕಿ ಇರುವುದು ಪತ್ತೆ ಮಾಡಿ ಕರೆತಂದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬಾಲಕಿ ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾಳೆ ಇದರಿಂದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ನಿಮ್ಹಾನ್ಸ್‌ಗೆ ದಾಖಲು : ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಬಾಲಕಿಯನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರು ಆಕೆಗೆ ಚಿಕಿತ್ಸೆ ಮತ್ತು ಕೌನ್ಸೆಲಿಂಗ್‌ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+