2 ವರ್ಷ ಜೈಲಿನಲ್ಲಿದ್ದರೆ ಶಾಸಕ, ಸಂಸದ ಸ್ಥಾನ ಅನರ್ಹ!

supreme court
ನವದೆಹಲಿ, ಜು.10 : ದೇಶದ ರಾಜಕಾರಣಿಗಳಿಗೆ ಶಾಕ್ ನೀಡುವಂತಹ ಆದೇಶವೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ. ಯಾವುದೇ ಶಾಸಕ ಅಥವ ಸಂಸದ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರೆ, ಅವರ ಸ್ಥಾನವನ್ನು ರದ್ದುಗೊಳಿಸಬಹುದು ಎಂದು ಕೋರ್ಟ್ ಆದೇಶ ನೀಡಿದೆ.

ಬುಧವಾರ ಆದೇಶ ಹೊರಡಿಸಿರುವ ಸುಪ್ರೀಂಕೋರ್ಟ್, ದೇಶದ ಯಾವುದೇ ರಾಜ್ಯದ ಶಾಸಕ ಅಥವ ಸಂಸದರ ವಿರುದ್ಧದ ಅಪರಾಧ ಪ್ರಕರಣ ಸಾಬೀತಾಗಿ, ಅವರು ಎರಡು ವರ್ಷಗಳ ಶಿಕ್ಷೆ ಅನುಭವಿಸಿದರೆ, ಅವರ ಸದಸ್ವತ್ವ ರದ್ದಾಗಲಿದೆ ಎಂದು ಹೇಳಿದೆ.

ಈ ತೀರ್ಪು ಇಂದಿನಿಂದಲೇ ಜಾರಿಯಾಗಬೇಕು. ಎರಡು ವರ್ಷದ ಶಿಕ್ಷೆ ಇಂದಿಗೆ ಪೂರ್ಣಗೊಳ್ಳುತ್ತಿದ್ದರೂ, ಅವರಿಗೂ ಈ ತೀರ್ಪು ಅನ್ವಯಿಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಎರಡು ವರ್ಷ ಶಿಕ್ಷೆ ಅನುಭವಿಸಿದರೆ, ಶಾಸಕ ಅಥವ ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಇಷ್ಟು ದಿನ ಏನಿತ್ತು : ಅಪರಾಧ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದಾರೆ ಎಂಬ ಆರೋಪ ಸಾಬೀತಾಗಿದ್ದರೆ, ಸುಪ್ರೀಂಕೋರ್ಟ್ ಅನುಮತಿ ಪಡೆದು ಅಂತಹವರನ್ನು ಸ್ಥಾನದಿಂದ ಅನರ್ಹಗೊಳಿಸಬಹುದಾಗಿತ್ತು. ಆದರೆ, ಇಂದಿನ ಸುಪ್ರೀಂಕೋರ್ಟ್ ಆದೇಶದಿಂದ ಎರಡು ವರ್ಷ ಶಿಕ್ಷೆ ಅನುಭವಿಸಿದರೆ, ಅವರು ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ.

ಯಾವುದೇ ಕೋರ್ಟ್‌ನಲ್ಲಿ ಶಾಸಕ ಹಾಗೂ ಸಂಸದರ ವಿರುದ್ಧದ ಆರೋಪಗಳು ಸಾಬೀತಾದ ದಿನದಿಂದಲೇ ಅಭ್ಯರ್ಥಿಗಳ ಸದಸ್ಯತ್ವ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಿರಾಸೆ ಉಂಟಾಗಿದೆ.

ಚುನಾವಣೆಗೆ ಸ್ಪರ್ಧಿಸುವಂತಿಲ್ಲ : ಶಾಸಕರು ಮತ್ತು ಸಂಸದರ ವಿರುದ್ದದ ಆರೋಪಗಳು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವರು, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇದರಿಂದ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳ ವರ್ತನೆಗೆ ಕಡಿವಾಣ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+