ಬೋಧ್ ಗಯಾ ಆಯ್ತು, ಮುಂದೆ ಮುಂಬೈ ಟಾರ್ಗೆಟ್: IM

After Bodh Gaya next target is Mumbai Indian Mujahideen on Twitter
ಮುಂಬೈ, ಜುಲೈ 10: ಇದೇ ವಾರಾಂತ್ಯ ಮುಂಬೈ ಮಹಾನಗರಿಗೆ ಮತ್ತೊಂದು ಮಹಾ ಸಂಕಷ್ಟ ಎದುರಾಗಲಿದೆಯಾ? ಭಯೋತ್ಪಾದಕರು ಮತ್ತೆ ಮುಂಬೈ ಮೇಲೆ ದಾಳಿ ನಡೆಸುತ್ತಾರಾ? ಹೌದು ಎನ್ನುತ್ತಿದೆ ಇಂಡಿಯನ್ ಮುಜಾಹಿದ್ದೀನ್ !

ಭಯೋತ್ಪಾದಕ ಸಂಘಟನೆ, ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಕಳೆದ ವಾರ ಬೋಧ್ ಗಯಾದಲ್ಲಿ ನಡೆದ ಸರಣಿ ಸ್ಫೋಟವನ್ನು ತಾನೇ ನಡೆಸಿದ್ದು ಎಂದು ಒಪ್ಪಿಕೊಂಡಿದೆ. ಮತ್ತು ಮುಂದಿನ ಟಾರ್ಗೆಟ್ ಮುಂಬೈ ಮಹಾನಗರಿ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.

ಟ್ವಿಟ್ಟರ್ ಮೂಲಕ ಈ ಸಂದೇಶ ಹೊರಡಿಸಿರುವ @IndianMujahidin, ಬಿಹಾರದ ಬೋಧ್ ಗಯಾದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಹೊಣೆ ಹೊತ್ತಿದೆ. ಜುಲೈ 7ರಂದು ಈ ಸಂಬಂಧ Twitter ಸಂದೇಶ ಹೊರಬಿದ್ದಿದೆ. ಅದರಲ್ಲಿ '9 ಧಮಾಕೆಗಳನ್ನು ನಾವೇ ಮಾಡಿರುವುದು' - 9 Dhamake Humne Karay ಎಂದು ಹೇಳಿಕೊಂಡಿದೆ.

ಮತ್ತೊಂದು ಟ್ವಿಟ್ಟರ್ ಸಂದೇಶ ಜುಲೈ 6ರಂದು ಬಂದಿದೆ. ಅಂದರೆ ಬೋಧ್ ಗಯಾ ಸರಣಿ ಸ್ಫೋಟಕ್ಕೆ ಒಂದು ದಿನ ಮುಂಚಿತವಾಗಿ. 'ನಮ್ಮ ಮುಂದಿನ ಟಾರ್ಗೆಟ್ ಮುಂಬೈ. ನಿಮಗೆ ಸಾಧ್ಯವಾದರೆ ಅದನ್ನು ತಪ್ಪಿಸಿ. ಇನ್ನು ಏಳು ದಿನಗಳಷ್ಟೇ ಅದಕ್ಕೆ ಬಾಕಿಯಿದೆ' (Hamara Agla Target Mumbai Hai. Rock Sago Toh Rock Lo, 7 days Left) ಎಂಬ ಸಂದೇಶ ನೀಡಿದೆ.

National Investigation Agency (NIA) ಹೇಳುವಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಈ Twitter ಖಾತೆಯನ್ನು ಕೆನಡಾದಲ್ಲಿ ಸೃಷ್ಟಿಸಲಾಗಿದೆ. NIA ಈ ಕುರಿತು ಹೆಚ್ಚಿನ ತನಿಖೆಗೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+