ಕೆಂಗೇರಿ: 5 ತಿಂಗಳಿಂದ ಪಕ್ಕದ್ಮನೆ ಬಾಲಕಿ ಮೇಲೆ ರೇಪ್

ಆರೋಪಿಯ ಹೆಸರು ನಾಗೇಂದ್ರ ಎಂದು ತಿಳಿದುಬಂದಿದೆ. ನಾಗೇಂದ್ರ ತನ್ನ ಪಕ್ಕದ ಮನೆಯ 14 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.
ಆದರೆ ಇದು ಬಾಲಕಿಯ ಮನೆಯವರ ಗಮನಕ್ಕೆ ಇದುವರೆಗೂ ಬಂದಿರಲಿಲ್ಲ. ಆದರೆ ನಿನ್ನೆ ಮುಗ್ಧ ಬಾಲಕಿ ತನಗೆ ವಿಪರೀತ ಹೊಟ್ಟೆ ನೋವು ಬರುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದಾಳೆ. ಆಗ ಆತಂಕಗೊಂಡ ಆಕೆಯ ಪೋಷಕರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದಾರೆ.
ಇದರಿಂದ ಹೌಹಾರಿದ ಪೋಷಕರು ಹುಡುಗಿಯನ್ನು ತರಾಟೆಗೆ ತೆಗೆದುಕೊಂಡಾಗ ಆಕೆ ಆಳುತ್ತಾ, ಪಕ್ಕದ ಮನೆ ಯುವಕನ ಲೀಲೆಗಳನ್ನು ಬಿಚ್ಚಿಟ್ಟಿದ್ದಾಳೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ನಾಗೇಂದ್ರ ಈಗ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications