ಎಸ್ಸೈ ಪುತ್ರಿಯ ರೇಪ್: ದೈಹಿಕ ತರಬೇತುದಾರನ ಸೆರೆ

ಆರೋಪಿಯು ಅತ್ಯಾಚಾರ ಘಟನೆಯನ್ನು ಎಂಎಂಎಸ್ ಮಾಡಿ, ಪ್ರಕರಣವನ್ನು ಬಯಲು ಮಾಡಿದರೆ ವಿಡಿಯೋವನ್ನು ಅಶ್ಲೀಲ ವೆಬ್ ಸೈಟುಗಳಿಗೆ ಬಿಡುಗಡೆಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದ ಎಂದು ತಿಳಿದುಬಂದಿದೆ.
ಬಾಧಿತ ಪೊಲೀಸ್ ಅಧಿಕಾರಿಯ ಪುತ್ರಿ ಗರ್ಭಿಣಿಯಾದಾಗಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಬಾಧಿತ ಯುವತಿ ಉದ್ಯೋಗಕ್ಕಾಗಿ ಅಲೆದಾಟ ನಡೆಸಿದ್ದಾಗ ಆರೋಪಿಯ ಪರಿಚಯವಾಗಿದೆ. ಅದಾದನಂತರ ಆರೋಪಿಯು ಯುವತಿಯನ್ನು ತನ್ನ ಮನೆಗೆ ಕರೆದೊಯ್ದು ಮತ್ತುಬರಿಸುವ ಔಷಧ ಬೆರೆತ ಲಘು ಪಾನೀಯ ನೀಡಿದ್ದಾನೆ.
ಅದಾಗುತ್ತಿದ್ದಂತೆ ಯುವತಿ ಪ್ರಜ್ಞೆ ತಪ್ಪಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಕಾರ್ಯದಲ್ಲಿ ಇನ್ನೂ ಮೂವರು ಆತನಿಗೆ ಸಹಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಪೊಲೀಸರು ಆರೋಪಿ ದೈಹಿಕ ತರಬೇತುದಾರನನ್ನು ಬಂಧಿಸಿದ್ದು, ಆತನ ಸಹಚರರಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications