ನಷ್ಟದಲ್ಲಿರುವ ಬಿಎಂಟಿಸಿಗೆ ಮತ್ತಷ್ಟು ಹೊಸ ಬಸ್!

bmtc
ಬೆಂಗಳೂರು, ಜು.9 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿರುವುದು ಬಯಲಾಗಿದ್ದರೂ ಸಂಸ್ಥೆ ತನ್ನ ಹೊಸ ಸಾಹಸಗಳನ್ನು ಕೈ ಬಿಟ್ಟಿಲ್ಲ. 2013-14ನೇ ವರ್ಷದಲ್ಲಿ 1,100 ಹೊಸ ಬಸ್ ಖರೀದಿಗೆ ಸಂಸ್ಥೆ ಒಪ್ಪಿಗೆ ನೀಡಿದೆ.

ಕಳೆದ ವಾರ ನಡೆದ ಬಿಎಂಟಿಸಿ ಅಧಿಕಾರಿಗಳ ಸಭೆಯಲ್ಲಿ 1,100 ಹೊಸ ಬಸ್ ಗಳನ್ನು 2013 ಮತ್ತು 14ನೇ ವರ್ಷದಲ್ಲಿ ಖರೀದಿಸಲು ಸಂಸ್ಥೆ ಅನುಮೋದನೆ ನೀಡಿದೆ. ರಾಜ್ಯ ಹಣಕಾಸು ಇಲಾಖೆಯ ಅನುಮತಿ ದೊರೆತರೆ ಶೀಘ್ರವೇ ಹೊಸ ಬಸ್ಸುಗಳು ರಸ್ತೆಗಿಳಿಯಲಿವೆ.

ಹೊಸ ಮಾರ್ಗಗಳು : ಸಂಸ್ಥೆ ಖರೀದಿಸಲಿರುವ ಸಾವಿರಕ್ಕೂ ಹೆಚ್ಚು ಬಸ್ ಗಳಲ್ಲಿ 500 ಬಸ್ ಗಳನ್ನು ಹೊಸ ಮಾರ್ಗದಲ್ಲಿ ಓಡಿಲಸಲು ಯೋಜನೆ ರೂಪಿಸಲಾಗಿದೆ. ಉಳಿದ 600ಬಸ್ ಗಳನ್ನು ಹಳೆ ಬಸ್ ಗಳಿರುವಡ ಡಿಪೋಗಳಿಗೆ ನೀಡಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಹಂತದಲ್ಲಿ 410 ಬಸ್ ಗಳನ್ನು ಖರೀದಿಸಲು ಸಂಸ್ಥೆ ಟೆಂಡರ್ ಕರೆಯಲು ಸಿದ್ಧತೆ ಪ್ರಾರಂಭಿಸಿದೆ. ಉಳಿದ ಬಸ್ ಗಳ ಖರೀದಿಗೆ ಮತ್ತೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ.

ಸಚಿವರು ಏನು ಹೇಳುತ್ತಾರೆ : ಬಸ್ ಖರೀದಿಗಳ ಬಗ್ಗೆ ಸಮರ್ಥನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್ಆರ್ ಟಿಸಿಗೂ ಹೊಸದಾಗಿ 1,300 ಬಸ್ ಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.

ನಷ್ಟಕ್ಕೆ ಬಿಜೆಪಿ ಹೊಣೆ : ಬಿಎಂಟಿಸಿ ಸಂಸ್ಥೆ ನಷ್ಟ ಅನುಭವಿಸುತ್ತಿರುವುದು ಸತ್ಯ ಎಂದಿರುವ ರಾಮಲಿಂಗಾ ರೆಡ್ಡಿ, ಹಿಂದಿನ ಬಿಜೆಪಿ ಸರ್ಕಾರ ಸಂಸ್ಥೆಯ ನಷ್ಟವನ್ನು ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. (ಬಿಎಂಟಿಸಿಗೆ ಎಷ್ಟು ನಷ್ಟವಾಗುತ್ತಿದೆ)

ಡಿಸೇಲ್ ದರ ಹೆಚ್ಚಳ, ನೌಕರರ ಭತ್ಯೆ ಮತ್ತು ಸಂಬಳ ಹೆಚ್ಚಿಸಿದ್ದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ. ಸಂಸ್ಥೆಯ ನಷ್ಟವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ನಷ್ಟದಲ್ಲಿರುವ ಸಂಸ್ಥೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮತ್ತಷ್ಟು ಬಸ್ ಗಳನ್ನು ಖರೀದಿಸುತ್ತಿದೆ. ಇದರ ಹೊರೆಯನ್ನು ಕಡಿಮೆ ಮಾಡಲು ಮತ್ತೊಮ್ಮೆ ಪ್ರಯಾಣದರ ಏರಿಸುವಂತಹ ಕಾರ್ಯಕ್ಕೆ ಮುಂದಾಗಬಹುದೇ? (ಒನ್ ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+