ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಹಾರಂಗಿ-ಚಿಕ್ಲಿಹೊಳೆಯಲ್ಲಿ ಜಲನರ್ತನ

By ಎಲ್ಕೆ ಕೊಡಗು
|
Google Oneindia Kannada News

ಮಡಿಕೇರಿ, ಜು. 5 : ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯಗಳು ಭರ್ತಿಯಾಗಿದ್ದು, ಇಲ್ಲಿಂದ ಹೊರಕ್ಕೆ ಭೋರ್ಗರೆದು ಧುಮುಕುತ್ತಿರುವ ದೃಶ್ಯವನ್ನು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಕಳೆದುಕೊಂಡಿದ್ದ ಕಳೆ ಮಡಿಕೇರಿಗೆ ಮರಳಿ ಮತ್ತೆ ಬಂದಂತಾಗಿದೆ.

ಹಾರಂಗಿ ಜಲಾಶಯ ಭರ್ತಿಯಾಗಿ ಒಂದು ವಾರ ಕಳೆದಿದ್ದು, ಜಲಾಶಯದಿಂದ 22,400 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಧೋ ಧೋ ಮಳೆ ಸುರಿಯುತ್ತಿದ್ದರೂ ಪ್ರವಾಸಿಗರ ಪ್ರವಾಹಕ್ಕೆ ಧಕ್ಕೆಯುಂಟಾಗಿಲ್ಲ. ತುಂಬುತ್ತಿರುವ ಜಲಾಶಯಗಳನ್ನೇ ನೋಡಲು ಜನರು ಮುಗಿಬಿದ್ದು ಬರುತ್ತಿದ್ದಾರೆ.

ಚಿಕ್ಲಿಹೊಳೆ ಜಲಾಶಯ : ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು, ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಅತೀ ಚಿಕ್ಕದಾದ ಜಲಾಶಯ ಇದಾಗಿದೆ. ಜಲಾಶಯ ತುಂಬಿರುವುದರಿಂದ ಹೆಚ್ಚುವರಿ ನೀರು ಅರ್ಧ ಚಂದ್ರಾಕೃತಿಯ ತಡೆಗೋಡೆಯ ಮೇಲಿಂದ ಧುಮ್ಮಿಕ್ಕುತ್ತಿದೆ.

ಚಂದ್ರಾಕೃತಿಯ ತಡೆಗೋಡೆಯ ಮೇಲೆ ಧುಮ್ಮಿಕ್ಕುತ್ತಿರುವ ದೃಶ್ಯ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ. ಯಾವುದೇ ಕ್ರೆಸ್ಟ್‌ಗೇಟ್‌ಗಳನ್ನು ಹೊಂದಿರದೆ ಜಲಾಶಯದಲ್ಲಿ ದೊಡ್ಡ ತೂಬನ್ನು ನಿರ್ಮಿಸಲಾಗಿದೆ. ಗರಿಷ್ಠ 72.6 ಮೀಟರ್ ಎತ್ತರದ ಜಲಾಶಯದಲ್ಲಿ 0.18 ಟಿಎಂಸಿ ನೀರು ಸಂಗ್ರಹವಾಗಿದೆ. [ಮಡಿಕೇರಿ ಮಳೆಯ ಮತ್ತಷ್ಟು ಚಿತ್ರಗಳು]

ಕೊಡಗಿನಲ್ಲಿ 1189 ಮಿ.ಮೀ ಮಳೆ

ಕೊಡಗಿನಲ್ಲಿ 1189 ಮಿ.ಮೀ ಮಳೆ

ಕೊಡಗಿನಲ್ಲಿ ಮಳೆ ಮುಂದುವರೆದಿದ್ದು ಭಾಗಮಂಡಲ ಸೇರಿದಂತೆ ಹಲವೆಡೆ ಜಲಾವೃತವಾಗಿದ್ದು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಶುಕ್ರವಾರ ಜಿಲ್ಲೆಯಲ್ಲಿ ಸರಾಸರಿ 124.96 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 35.36 ಮಿ.ಮೀ. ಮಳೆಯಾಗಿತ್ತು.

ಕಳೆದ ವರ್ಷಕ್ಕಿಂತ ಅಧಿಕ ಮಳೆ

ಕಳೆದ ವರ್ಷಕ್ಕಿಂತ ಅಧಿಕ ಮಳೆ

ಜನವರಿಯಿಂದ ಇಲ್ಲಿಯವರೆಗಿನ 1189.61 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 622.99 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ

ಮಡಿಕೇರಿ ತಾಲ್ಲೂಕಿನಲ್ಲಿ

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 164.4 ಮಿ.ಮೀ. ಕಳೆದ ವರ್ಷ ಇದೇ ದಿನ 46.1 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1718.59 ಮಿ.ಮೀ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 861.67 ಮಿ.ಮೀ. ಮಳೆಯಾಗಿತ್ತು.

ವೀರಾಜಪೇಟೆ ತಾಲ್ಲೂಕಿನಲ್ಲಿ

ವೀರಾಜಪೇಟೆ ತಾಲ್ಲೂಕಿನಲ್ಲಿ

ವೀರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 105.08 ಮಿ.ಮೀ. ಕಳೆದ ವರ್ಷ ಇದೇ ದಿನ 36.05 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 930.91 ಮಿ.ಮೀ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 533.68 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ

ಸೋಮವಾರಪೇಟೆ ತಾಲ್ಲೂಕಿನಲ್ಲಿ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 105.4 ಮಿ.ಮೀ. ಕಳೆದ ವರ್ಷ ಇದೇ ದಿನ 23.93 ಮಿ.ಮೀ. ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿಯವರೆಗಿನ 919.32 ಮಿ.ಮೀ. ಮಳೆ ಬಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 473.63 ಮಿ.ಮೀ ಮಳೆಯಾಗಿತ್ತು.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 2,857.52 ಅಡಿಗಳಿದೆ. ಕಳೆದ ವರ್ಷ ಇದೇ ದಿನ 2,817.38 ಅಡಿ ನೀರು ಸಂಗ್ರಹವಾಗಿತ್ತು. ಹಾರಂಗಿಯಲ್ಲಿ ಇಂದಿನ ನೀರಿನ ಒಳ ಹರಿವು 9740 ಕ್ಯೂಸೆಕ್ ಇದ್ದು, 6200 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

English summary
Rain continues to batter Madikeri district. Coorg district has received more rain than previous year. Harangi dam is full and attracting travellers. Virajpet and Somawarpet taluks too have received extensive rain this monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X