ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ದೌರ್ಜನ್ಯ, ಥಳಿತ

ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಬಳಿ ಮಂಗಳವಾರ ರಾತ್ರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ಡ್ಯೂಟಿ ಮುಗಿಸಿಕೊಂಡು ಬಸ್ಸಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಸಾರ್ವಜನಿಕರ ಸಮ್ಮುಖದಲ್ಲೆ ಐದಾರು ಮಂದಿ ಪೋಕರಿಗಳು ಮನಬಂದಂತೆ ಥಳಿಸುತ್ತಾ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆ.
ಇಷ್ಟಕ್ಕೂ ಆ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ ತಪ್ಪಾದರೂ ಏನು ಅಂದರೆ ಬೈಕಿನಲ್ಲಿ ಬಂದ ಇಬ್ಬರು ಪೋಕರಿಗಳು ಆಕೆಯನ್ನು ಕಂಡು ಅಶ್ಲೀಲವಾಗಿ ಮಾತನಾಡುತ್ತಾ, ರೇಗಿಸಿದ್ದಾರೆ. ರೋಸಿದ ಮಹಿಳೆ ಅದಕ್ಕೆ ಆಕ್ಷೇಪವೆತ್ತಿದ್ದಾರೆ. ಇಲಾಖೆಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಲು ಯತ್ನಿಸಿದ್ದಾರೆ. ಇದರಿಂದ ಕುಪಿತರಾದ ಯುವಕರು ಆಕೆಯ ಮೇಲೆ ಹಲ್ಲೆ ಮಾಡಿ, ಕೈಯಲ್ಲಿದ್ದ ಮೊಬೈಲ್ ಫೋನನ್ನು ಪೀಸ್ ಪೀಸ್ ಮಾಡಿದ್ದಾರೆ.
ಘಟನೆಯ ನಂತರ ಪೊಲೀಸರು ಆಕೆಯನ್ನು ಬಾತ್ರಾ ಹಾಸ್ಪಿಟಲ್ ಗೆ ಸೇರಿಸಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿದ್ದು, ಯುವಕರ ಜತೆ ಕೈಜೋಡಿಸಿದ ಇತರೆ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಂಧಿತರು ನವೀನ್ ಕುಮಾರ್, ರೋಹಿತ್ ಮತ್ತು ರವಿ ಎಂದು ತಿಳಿದುಬಂದಿದ್ದು, ರೌಡಿಶೀಟರುಗಳಾಗಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ರಕ್ಷಿಸಿಕೊಳ್ಳಲು ಟೆಲಿಫೋನ್ ಬೂತಿಗೆ ತೆರಳಿದರೂ ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು ಅಲ್ಲಿಯೂ ಆಕೆಯನ್ನು ಥಳಿಸಿದ್ದಾರೆ. ಇತ್ತೀಚೆಗೆ ದೆಹಲಿಯ ಮಹಿಳಾ ಪೊಲೀಸರ ಮೇಲೆ ನಡೆದಿರುವ ಮೂರನೆಯ ದೌರ್ಜನ್ಯ ಪ್ರಕರಣ ಇದಾಗಿದೆ.












Click it and Unblock the Notifications