Driving Licence ಮೂಲಕ ಜೀವ ಉಳಿಸುವುದು ಹೇಗೆ?

ಏನಪ್ಪಾ ಅಂದರೆ Gift Your Organ Foundation ಎಂಬ ಸರಕಾರೇತರ ಸಂಸ್ಥೆ ಮತ್ತು ರಾಜ್ಯ ಸಾರಿಗೆ ಇಲಾಖೆಯು ಜಂಟಿ ಪ್ರಯತ್ನಕ್ಕೆ ಕೈಹಾಕಿದೆ. ನಿಮ್ಮ Driving Licenceನಲ್ಲಿ ನಿಮಗೆ ಸರ್ವಸಮ್ಮತವಿದ್ದರೆ 'ಯಸ್ ನಾನು ನನ್ನ ಅಂಗಾಗಗಳನ್ನು ದಾನ ಮಾಡುತ್ತೇನೆ' ಎಂದು ಘೋಷಿಸಿಕೊಳ್ಳಬಹುದು.
ಹೊಸದಾಗಿ Driving Licence ಮಾಡಿಸಿಕೊಳ್ಳುವವರು ಇದರ ಬಗ್ಗೆ ಆದ್ಯಗಮನ ಹರಿಸಬಹುದು. ವಾಹನ ಚಲಾಯಿಸುವಾಗ ಒಂದು ವೇಳೆ ಆಗಬಾರದ ಅನಾಹುತವೇನಾದರೂ ಆಗಿ ವಾಹನ ಸವಾರ ಮೃತಪಟ್ಟರೆ ತಕ್ಷಣ ಅವರ Driving Licence ಕಡೆ ಗಮನಹರಿಸಬಹುದು.
ಅದರಲ್ಲಿ Organ Donor ಎಂದಿದ್ದರೆ ತಕ್ಷಣ ಅವರ ದೇಹವನ್ನು ಸಮೀಪದ Organ Donation Hospitalಗೆ ಸ್ಥಳಾಂತರಿಸಬಹುದು. ಗೋಲ್ಡನ್ ಅವರ್ ನಲ್ಲಿ ಅವರ ಅಮೂಲ್ಯ ಅಂಗಾಂಗಗಳನ್ನು ವೈದ್ಯರು ಸಂಗ್ರಹಿಸಿಕೊಳ್ಳಬಹುದು.
ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಆರಂಭವಾದ ಈ ಅಭಿಯಾನಕ್ಕೆ ಯುವಜನತೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದುವರೆಗೂ ಸುಮಾರು 20 ಸಾವಿರ ಮಂದಿ ಅಂಗಾಂಗ ದಾನಕ್ಕೆ 'ಬಿಗ್ ಯಸ್' ಅಂದಿದ್ದಾರೆ.
Koramangala, Electronic City, Jayanagar ಮತ್ತು Indiranagar RTO ಕಚೇರಿಗಳಲ್ಲಿ ಈ ರೀತಿ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳಲು ಅವಕಾಶವಿದೆ. ನೀವೂ ಇದಕ್ಕೆ ಮನಸು ಮಾಡಬಹುದು.












Click it and Unblock the Notifications