ಚಿತ್ರಗಳಲ್ಲಿ : ಹೌರಾದಲ್ಲಿ ನೀರಿನ ಜೊತೆ ಜೀವನ
ಕೋಲ್ಕತ್ತಾ, ಜು.1: ಮುಂಗಾರು ಮಳೆ ತನ್ನ ಆರ್ಭಟವನ್ನು ಬಂಗಾಳದ ಕಡೆಗೆ ತಿರುಗಿಸಿದೆ, ಹೌರಾದಲ್ಲಿ ನೀರಿನಲ್ಲೇ ಮನೆ ಕಟ್ಟಿದ್ದಂತೆ ಕಾಣುತ್ತದೆ. ರಸ್ತೆಗಳೆಲ್ಲ ಸಂಪೂರ್ಣ ಜಲಮಯ. ನಿಧಾನಗತಿಯಿಂದ ವಾಹನಗಳು ಚಲಿಸುತ್ತಿರುವುದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್
ಭಾನುವಾರ ಈ ಭಾಗಗಳಲ್ಲಿ ಕಾಣಿಸಿಕೊಂಡ ಮಳೆ, ಸೋಮವಾರವೂ ತನ್ನ ನರ್ತನ ಮುಂದುವರೆಸಿದೆ. ಆದರೆ, ಬೆಂಗಾಳಿಗಳು ತಮ್ಮ ನಿತ್ಯ ಜೀವನ ಎಂದಿನಂತೆ ಸಾಗಿಸಿದ್ದಾರೆ.
ಅಹಮದಾಬಾದ್ : ಮೋಟರ್ ಸೈಕಲ್ ಸ್ಟಂಟ್ ನೋಡಲು ಖುಷಿ ಕೊಡುತ್ತದೆ ಜೊತೆಗೆ ನೋಡುಗರ ಎದೆಬಡಿತ ಹೆಚ್ಚಿಸುತ್ತಿದೆ. ಶತಮಾನದಷ್ಟು ಇತಿಹಾಸವುಳ್ಳ ರಥ ಯಾತ್ರೆ ಅಂಗವಾಗಿ ನಡೆದ ಬೈಕ್ ಸ್ಟಂಟ್ ಆಟದ ಚಿತ್ರ ಇಲ್ಲಿದೆ.
ಬ್ರೆಜಿಲ್ ನಲ್ಲಿ ನಡೆದ ಕಾಫೆಡೆರೇಷನ್ ಕಪ್ ಫೈನಲ್ ನಲ್ಲಿ ಸ್ಪೇನ್ ತಂಡದ ವಿರುದ್ಧ ಮೂರು ಗೋಲು ಹೊಡೆದು ಬ್ರೆಜಿಲ್ ಕಪ್ ಎತ್ತಿದೆ. ಜೊತೆಗೆ ಗೋಲ್ಡನ್ ಬೂಟ್ ಸ್ಪೇನಿನ ಫರ್ನಾಂಡೋ ಟೊರೆಸ್, ಬೆಳ್ಳಿ ಶೂ ಬ್ರೆಜಿಲ್ಲಿನ ಫ್ರೆಡ್ ಹಾಗೂ ಕಂಚಿನ ಬೂಟೂ ನೇಮಾರ್ ಪಾಲಾಗಿದೆ.
ಮುಂಬೈ ಹಾಗೂ ಅಹಮದಾಬಾದಿನಲ್ಲಿ ಭಾನುವಾರ ಮಳೆ ಜೊತೆ ಮಕ್ಕಳ ಆಟ ಜೋರಾಗಿದೆ. ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದ ಮಕ್ಕಳು ಅಚ್ಯುತ್ ಪಲವ್ ವರ್ಕ್ ಶಾಪ್ ನಲ್ಲಿ ಚಿತ್ತಾರ ಮೂಡಿಸಿದ್ದಾರೆ. ಮಲೆಯಾಳಂ ಚಿತ್ರರಂಗ ಪ್ರತಿಷ್ಠಿತ ಅಮ್ಮ ಮೀಟಿಂಗ್ ಚಿತ್ರ, ನರ ಹಂತಕ ಚಿರತೆ, ಆತ್ಮೀಯ ಗಜರಾಜನ ಮರಣ, ಮುಂಬೈನ ವಾಯುಸೇನೆ ವಿಂಗ್ ಕಮ್ಯಾಂಡರ್ ಕ್ಯಾಸ್ಟಲಿನೋ ದುರ್ಮರಣ ಮುಂತಾದ ಚಿತ್ರಗಳು ಇಂದಿನ ಚಿತ್ರಸುರಳಿಯಲ್ಲಿದೆ ತಪ್ಪದೇ ನೋಡಿ

ಮನೆಯಲ್ಲಿ ಮಳೆ ನೀರು
ಹೌರಾದಲ್ಲಿ ನೀರಿನಲ್ಲೇ ಮನೆ ಕಟ್ಟಿದ್ದಂತೆ ಕಾಣುತ್ತದೆ. ರೈಲ್ವೆ ನಿಲ್ದಾಣದ ಬಳಿಯ ಮನೆಗಳಿಗೆ ನೀರು ನುಗ್ಗಿದೆ.

ಮೋಟರ್ ಸೈಕಲ್ ಸ್ಟಂಟ್
ಅಹಮದಾಬಾದ್ : ಮೋಟರ್ ಸೈಕಲ್ ಸ್ಟಂಟ್ ನೋಡಲು ಖುಷಿ ಕೊಡುತ್ತದೆ ಜೊತೆಗೆ ನೋಡುಗರ ಎದೆಬಡಿತ ಹೆಚ್ಚಿಸುತ್ತಿದೆ. ಶತಮಾನದಷ್ಟು ಇತಿಹಾಸವುಳ್ಳ ರಥ ಯಾತ್ರೆ ಅಂಗವಾಗಿ ನಡೆದ ಬೈಕ್ ಸ್ಟಂತ್ ಆಟದ ಚಿತ್ರ

ಮಳೆ ಬಣ್ಣ ಬಣ್ಣದ ದಿರಿಸು
ಅಹಮದಾಬಾದ್: ಮಳೆಯನ್ನು ಆನಂದಿಸುತ್ತಾ ಕೊಡೆ ಹಂಚಿಕೊಂಡು ಸಾಗುತ್ತಿರುವ ಯುವತಿಯರು

ಈ ಸಾವು ನ್ಯಾಯವೇ?
ಮುಂಬೈ: ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜ್ಲಿ ಹೆಸರಿನ ಆನೆ ಅಸುನೀಗಿದ ದುಃಖ ತಡೆಯಲಾರದೆ ಅಳುತ್ತಿರುವ ಮಾವುತ ಪಡೆಯ ಕುಟುಂಬ

ಬಣ್ಣ ಬಣ್ಣದ ಕೊಡೆ
ಮುಂಬೈ: ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದ ಮಕ್ಕಳು ಅಚ್ಯುತ್ ಪಲವ್ ವರ್ಕ್ ಶಾಪ್ ನಲ್ಲಿ ಚಿತ್ತಾರ ಮೂಡಿಸಿದ್ದಾರೆ.

ನರಹಂತಕ ಚಿರತೆ
ನವ್ಸರಿ: ಸೆರೆ ಸಿಕ್ಕ ನರಹಂತಕ ಚಿರತೆ ಬೋನಿನಲ್ಲೂ ಆರ್ಭಟ ಮುಂದುವರೆಸಿದೆ. ಗುಜರಾತಿನ ನವ್ಸರಿ ಜಿಲ್ಲೆಯ ಅನೇಕ ಗ್ರಾಮಸ್ಥರಿಗೆ ಚಿರತೆ ದುಃಸ್ವಪ್ನವಾಗಿ ಕಾಡಿತ್ತು.

ಅಮ್ಮ ಮೀಟಿಂಗ್
ಕೊಚ್ಚಿ: ಅಸೋಸಿಯೇಟೆಡ್ ಆಫ್ ಮಲೆಯಾಳಂ ಮೂವಿ ಆರ್ಟಿಸ್(AMMA) ಸಾರ್ವತ್ರಿಕ 19ನೇ ಸಭೆಗೆ ಬಂದ ಕವಿಯೂರು ಪೊನ್ನಮ್ಮ, ಕಾವ್ಯ ಮಾಧವನ್ ಇನ್ನಿತರ ಕಲಾವಿದರು.

ಚಿನ್ನ, ಬೆಳ್ಳಿ, ಕಂಚಿನ ಬೂಟು
ಗೋಲ್ಡನ್ ಬೂಟ್ ಸ್ಪೇನಿನ ಫರ್ನಾಂಡೋ ಟೊರೆಸ್, ಬೆಳ್ಳಿ ಶೂ ಬ್ರೆಜಿಲ್ಲಿನ ಫ್ರೆಡ್ ಹಾಗೂ ಕಂಚಿನ ಬೂಟೂ ನೇಮಾರ್ ಪಾಲಾಗಿದೆ.

ಪರಿಸರ ಸ್ನೇಹಿ ಕಾರು
ಗುವಾಹಟಿ: ನಿರ್ಮಿತ ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ಕಾರು ಕಣಕ್ ಗೊಗಯ್

ಕೋಲ್ಕತ್ತಾದಲ್ಲಿ ಭಾರಿ ಮಳೆ
ಮುಂಗಾರು ಮಳೆ ತನ್ನ ಆರ್ಭಟವನ್ನು ಬಂಗಾಳದ ಕಡೆಗೆ ತಿರುಗಿಸಿದೆ

ನೀರಿನ ನಡುವೆ ಕಾರು
ಕೋಲ್ಕತ್ತಾ : ಭಾನುವಾರ ಈ ಭಾಗಗಳಲ್ಲಿ ಕಾಣಿಸಿಕೊಂಡ ಮಳೆ, ಸೋಮವಾರವೂ ತನ್ನ ನರ್ತನ ಮುಂದುವರೆಸಿದೆ. ಆದರೆ, ಬೆಂಗಾಳಿಗಳು ತಮ್ಮ ನಿತ್ಯ ಜೀವನ ಎಂದಿನಂತೆ ಸಾಗಿಸಿದ್ದಾರೆ.












Click it and Unblock the Notifications