ರೈನ್ ಡ್ಯಾನ್ಸ್: ಹದಿಹರೆಯದ 2 ಬಾಲಕಿಯರ ಹತ್ಯೆ

ನೂರ್ ಬಾಸ್ರಾ (15) ಮತ್ತು ನೂರ್ ಷೀಜಾ (16) ಮೃತಪಟ್ಟ ದುರ್ದೈವಿ ಸೋದರಿಯರು. ಐದು ಮಂದಿ ಆಯುಧಧಾರಿಗಳು ಆ ಮುಗ್ಧ ಮನಸ್ಸುಗಳನ್ನು ಹೊಸಕಿಹಾಕಿವೆ. 'ಮಿರರ್' ಪತ್ರಿಕೆಯ ವರದಿ ಪ್ರಕಾರ ಸಹೋದರ ಜೋಡಿಯ ತಾಯಿ ನೋಷೆರಾರ ಮೇಲೆಯೂ ಪಾತಕಿಗಳು ಗುಂಡಿನ ಮಳೆಗೆರೆದಿದ್ದಾರೆ.
ಪತ್ರಿಕಾ ವರದಿಗಳ ಪ್ರಕಾರ ನೂರ್ ಸಹೋದರಿಯರ ಮಲ ಅಣ್ಣ ಕುಟುಂಬದ ಪ್ರತಿಷ್ಠೆಯನ್ನು ಕಾಪಾಡಲು ಅವರ ಹತ್ಯೆಗೆ ವೀಳ್ಯಕೊಟ್ಟಿದ್ದ ಎನ್ನಲಾಗಿದೆ.
ಬುಡಕಟ್ಟು ಜನಾಂಗವಿರುವ ಗಿಲ್ ಗಿಟ್ ಪ್ರದೇಶದಲ್ಲಿ ಆರು ತಿಂಗಳ ಹಿಂದೆ ಮಳೆ ಬರುತ್ತಿದ್ದಾಗ ನೂರ್ ಸಹೋದರಿಯರು ಮಳೆಯಲ್ಲಿ ತೊಯ್ದು ತೊಪ್ಪೆಯಾಗಿದ್ದರು. ಅದನ್ನು ಯಾರೋ ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಆ ವಿಡಿಯೋ ಭಾರಿ ವಿವಾದವೆಬ್ಬಿಸಿತ್ತು.
ಬಾಲಕಿಯ ಸ್ವಚ್ಚಂದ ಮಳೆಯಾಟಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಕೆರಳಿದ ಸೋದರ ಖುಟೋರ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ. ಪ್ರಮುಖ ಆರೋಪಿ ಖುಟೋರ್ ಮತ್ತು ಹತ್ಯೆಗೈದ 5 ಆರೋಪಿಗಳು ಈಗ ಪರಾರಿಯಾಗಿದ್ದಾರೆ.












Click it and Unblock the Notifications