ಸ್ಪರ್ಧೆಯಲ್ಲಿ ಭಾಗವಹಿಸಿ, ಭರ್ಜರಿ ಬಹುಮಾನ ಗೆಲ್ಲಿರಿ
ಐಐಟಿ ಗೌಹಾತಿ ತನ್ನ 15ನೇ ವಾರ್ಷಿಕೋತ್ಸವ ಟೆಕ್ನೋ-ಮ್ಯಾನೇಜ್ಮೆಂಟ್ ಫೆಸ್ಟಿವಲ್ - ಟೆಕ್ನಿಕ್ 2013 ಆಯೋಜಿಸಲು ಸಜ್ಜಾಗಿದೆ. ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ನಡೆಸಲಾಗುತ್ತಿರುವ ನಡೆಸಲಾಗುತ್ತಿರುವ ಟೆಕ್ನಿಕ್ ಆಗಸ್ಟ್ 29ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದ್ದು, ಹಲವಾರು ಸ್ಫೂರ್ತಿಯುವ ಉಪನ್ಯಾಸ, ಗುಣಮಟ್ಟದ ಕಾರ್ಯಾಗಾರ, ಸಾಮಾಜಿಕ ಚಟುವಟಿಕೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸವಾಲೊಡ್ಡುವ ಸ್ಪರ್ಧೆಗಳನ್ನು ನಡೆಸುತ್ತಿದೆ.
ಐಐಟಿಜಿಯ ಔದ್ಯೋಗಿಕ ಅಭಿವೃದ್ಧಿ ಘಟಕದ ಸಹಯೋಗದೊಂದಿಗೆ ಕಾರ್ಪೊರೇಟ್ ಮಾದರಿಯಲ್ಲಿ ಟೆಕ್ನಿಕ್ ಹಲವಾರು ಮ್ಯಾನೇಜ್ಮೆಂಟ್ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಅಂತಹ ಕೆಲವು ಕಾರ್ಯಕ್ರಮಗಳು ಕೆಳಗಿನಂತಿವೆ.

ಬ್ರೇನ್ ಚೈಲ್ಡ್ : ಈ ಬಿಸಿನೆಸ್ ಯೋಜನಾ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತಮ್ಮ ಬಿಸಿನೆಸ್ ಯೋಜನೆಯನ್ನು ತೀರ್ಪುಗಾರರ ಮುಂದೆ ಇಡಬೇಕು. ತೀರ್ಪುಗಾರರ ಮಂಡಳಿಯಲ್ಲಿ ಇಂಡಿಯನ್ ಏಂಜೆಲ್ ನೆಟ್ವರ್ಕ್, ಜೆಮಿನಿ ನ್ಯೂ ಮೀಡಿಯಾ ವೆಂಚರ್ಸ್, ನಿರ್ವಾಣ ವೆಂಚರ್ಸ್ ಅಡ್ವೈಸರ್ಸ್ ಮತ್ತು ಮುಂಬೈ ಏಂಜೆಲ್ಸ್ ಇವೆ. ಜೂನ್ 15ರೊಳಗೆ ತಮ್ಮ ಬಿಸಿನೆಸ್ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಈ ಸ್ಪರ್ಧೆಯ ಬಹುಮಾನದ ಮೊತ್ತ 50 ಸಾವಿರ ರು.
ದಿ ಕೇಸ್ ಸ್ಟಡಿ : ಸ್ಪರ್ಧಾಳುಗಳು ತಮ್ಮ ನೈಪುಣ್ಯತೆಯನ್ನು ಸದೃಢಪಡಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶ. ಕೊನೆಯ ದಿನಾಂಕ 30 ಜೂನ್ ಮತ್ತು ಬಹುಮಾನದ ಮೊತ್ತ 38 ಸಾವಿರ ರು. ಸ್ಟ್ರಾಟೆಜೆಮ್ - ಇಲ್ಲಿ ನೀಡಲಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು. ಪ್ರಾಡಕ್ಟ್ ಲಾಂಚ್ - ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದು. ಬ್ಲ್ಯೂ ಚಿಪ್ಸ್ - ಇದು ವರ್ಚುವಲ್ ಸ್ಟಾಕ್ ಮಾರ್ಕೆಟ್ ಆಟವಾಗಿದೆ. ಪೋಸ್ಟರ್‌ಮೇನಿಯಾ - ಇಲ್ಲಿ ಸ್ಪರ್ಧಾಳುಗಳು ಒಂದು ಉತ್ಪನ್ನವನ್ನು ಅತ್ಯಾಕರ್ಷಕ ಪೋಸ್ಟರ್ ಮುಖಾಂತರ ಜಾಹೀರಾತು ಮಾಡಬೇಕು.
ವೆಂಚರ್ ಕ್ಯಾಪಿಟಲಿಸ್ಟ್, ಹೂಡಿಕೆದಾರರು ಮತ್ತು ಉದ್ಯಮಿಗಳು ಈ ಎಲ್ಲ ಸ್ಪರ್ಧೆಗಳ ನಿರ್ಣಾಯಕರಾಗಿರುತ್ತಾರೆ. ಅವರು ತಮ್ಮ ಅನುಭವ, ಜ್ಞಾನಗಳ ಮುಖಾಂತರ ಎಲ್ಲ ಸ್ಪರ್ಧೆಗಳಿಗೆ ಹೆಚ್ಚಿನ ಮೌಲ್ಯವನ್ನು ತುಂಬಲಿದ್ದಾರೆ. ಸ್ಪರ್ಧೆಯ ಅಂತಿಮ ಹಂತ ತಲುಪುವ ಸ್ಪರ್ಧಾಳುಗಳಿಗೆ ತಮ್ಮ ಉತ್ಪನ್ನ ಅಥವಾ ತಮ್ಮ ಕಲ್ಪನೆಯನ್ನು ಲಾಂಚ್ ಮಾಡಬಹುದು ಅಥವಾ ಸಾಕಾರಗೊಳಿಸುವ ಅವಕಾಶವಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವವರು www.techniche.org ವೆಬ್ ಸೈಟಿಗೆ ಲಾಗಿನ್ ಆಗಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 8876406180 ಅಥವಾ +91 8011241189. ಈಮೇಲ್ ವಿಳಾಸ : [email protected]












Click it and Unblock the Notifications