ನೋಯ್ಡಾ ವಿದ್ಯಾರ್ಥಿಗಳಿಂದ 'ಮಸ್ತ್' ಬೈಕ್

ನೋಯ್ಡಾ, ಜೂ.28: ವಿದ್ಯಾರ್ಥಿ ದೆಸೆಯಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಮುಖ್ಯ ಎನಿಸುವಷ್ಟರಲ್ಲಿ ಕೋರ್ಸ್ ಮುಗಿದಿರುತ್ತದೆ. ಆದರೆ, ಡಿಪ್ಲೋಮಾ, ಬಿಇ, ಬಿ.ಟೆಕ್ ವಿದ್ಯಾರ್ಥಿಗಳಿಗೆ ಫೈನಲ್ ಇಯರ್ ಪ್ರಾಜೆಕ್ಟ್ ಮಾತ್ರ ಸದಾ ನೆನಪಿನಲ್ಲಿರುತ್ತದೆ. ಈ ಪೈಕಿ ಹಲವರ ಪ್ರಾಜೆಕ್ಟ್ ಗಳು ದೇಶಕ್ಕೆ ಹೊಸ ಉತ್ಪನ್ನ ಹಾಗೂ ಮಾರ್ಗಗಳನ್ನು ನೀಡುವಂತಿರುತ್ತದೆ. ಸೂಕ್ತ ಮಾರ್ಗದರ್ಶನ ಸಬ್ಸಿಡಿ ಸಿಕ್ಕರೆ ದೇಶಿ ಉತ್ಪನ್ನಗಳನ್ನು ಹೆಚ್ಚಿಸಿ ಪ್ರಗತಿಗೆ ಕಾರಣವಾಗಬಲ್ಲದು.

ಈ ಪೀಠಿಕೆಯೊಂದಿಗೆ ಗ್ರೇಟರ್ ನೋಯ್ಡಾದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(GNIOT)ಯ ಮೆಕ್ಯಾನಿಕಲ್ ವಿಭಾಗ ವಿದ್ಯಾರ್ಥಿಗಳು ನಿರ್ಮಿಸಿದ ವಿನೂತನ ಬೈಕ್ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತೇವೆ. ಪರಿಸರ ಸ್ನೇಹಿ ಬೈಕ್ ಹೈಬ್ರಿಡ್, ಡುಯಲ್ ಬೈಕ್ ಎಂದೆಲ್ಲ ಕರೆಯಬಹುದು. ಬಿಟೆಕ್ ವಿದ್ಯಾರ್ಥಿಗಳು ಇಂಧನ ಮಿತವ್ಯಯಿ ಹಾಗೂ ಎಲೆಕ್ಟ್ರಿಕ್ ಮಾದರಿ ಬೈಕ್ ವಿನ್ಯಾಸಗೊಳಿಸಿ ಇತ್ತೀಚೆಗೆ ಪ್ರದರ್ಶಿಸಿದರು.

ಬಿ.ಟೆಕ್ ವಿಭಾಗದ ಮುಖ್ಯಸ್ಥ ಎಸ್.ಕೆ ಅರೋರಾ ಅವರ ಮಾರ್ಗದರ್ಶನದಲ್ಲಿ ಈ ಮೋಟರ್ ಸೈಕಲ್ ಅನ್ನು ಪರಿಸರ ಸ್ನೇಹಿಯಾಗಿ ಪರಿವರ್ತಿಸಲಾಗಿದೆ. ಬೈಕಿನ ಚೈನಿನಿಂದ ಪವರ್ ಪಡೆದು 12 V 20 h ಬ್ಯಾಟರಿಗೆ ಶಕ್ತಿ ತುಂಬುತ್ತದೆ. ಬೈಕ್ ಚಾಲನೆ ಸಮಯದಲ್ಲಿ ಬ್ಯಾಟರಿ ಸದಾ ಚಾಲ್ತಿಯಲ್ಲಿರಲಿದೆ. ಅಗತ್ಯ ಬಿದ್ದಾಗ ಮಾತ್ರ ಪೆಟ್ರೋಲ್ ಇಂಜಿನ್ ಬಳಕೆ ಮಾಡಬಹುದಾಗಿದೆ. ಈ ಬೈಕ್ ಚಿತ್ರಗಳು ನಿಮಗಾಗಿ

ವಿದ್ಯಾರ್ಥಿಗಳ ಕನಸಿನ ಬೈಕ್

ವಿದ್ಯಾರ್ಥಿಗಳ ಕನಸಿನ ಬೈಕ್

ಹೆಚ್ಚು ಇಂಧನ ಬಳಕೆ ಮಾಡಬೇಕಾದ ಸಂದರ್ಭದಲ್ಲಿ ಪೆಟ್ರೋಲ್ ಇಂಜಿನ್ ಆಫ್ ಆಗುತ್ತದೆ. ಎಲೆಕ್ಟ್ರಿಕ್ ಮೋಟರ್ ಕಾರ್ಯ ನಿರ್ವಹಿಸುತ್ತದೆ ಹೀಗಾಗಿ ಇಂಧನ ಉಳಿತಾಯ ಮಾಡಬಹುದು.ಹೀಗಾಗಿ ಶೇ 12 ರಿಂದ 15 ರಷ್ಟು ಪೆಟ್ರೋಲ್ ಉಳಿತಾಯ ಮಾಡಬಹುದು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಬೈಕುಗಳಿಗೆ ಮಾನ್ಯತೆ ಸಿಕ್ಕು ರಸ್ತೆಗಿಳಿಯುವ ಹೊತ್ತಿಗೆ ಇಂಧನ ಕ್ಷಮತೆ, ಉಳಿತಾಯ ಮಟ್ಟ ಇನ್ನಷ್ಟು ಹೆಚ್ಚಿಸಲು ಚಿಂತಿಸಲಾಗಿದೆ ಎಂದು GNIOT ವಿದ್ಯಾರ್ಥಿಗಳು ಒನ್ ಇಂಡಿಯಾ ದೆಹಲಿ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ವಿದ್ಯಾರ್ಥಿಗಳ ಕನಸಿನ ಬೈಕ್

ವಿದ್ಯಾರ್ಥಿಗಳ ಕನಸಿನ ಬೈಕ್

GNIOT ವಿದ್ಯಾರ್ಥಿಯೊಬ್ಬರು ಬೈಕ್ ಬಗ್ಗೆ ವಿವರಣೆ ನೀಡುತ್ತಿದ್ದಾರೆ

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

GNIOT ವಿದ್ಯಾರ್ಥಿಯೊಬ್ಬರು ಬೈಕ್ ಬಗ್ಗೆ ವಿವರಣೆ

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

ಗ್ರೇಟರ್ ನೋಯ್ಡಾ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

ಸೆಮಿನಾರ್ ನಲ್ಲಿ ಪ್ರಾತ್ಯಕ್ಷಿಕೆ

GNOIT ವಿದ್ಯಾರ್ಥಿಯಿಂದ ಇಂಜಿನ್ ಬಗ್ಗೆ ವಿವರಣೆ

GNIOT ವಿದ್ಯಾರ್ಥಿಗಳ ತಂಡ

GNIOT ವಿದ್ಯಾರ್ಥಿಗಳ ತಂಡ

GNIOT ವಿದ್ಯಾರ್ಥಿ ಪ್ರಾಜೆಕ್ಟ್ ತಂಡ

 ಮೆಕ್ಯಾನಿಕಲ್ ವಿದ್ಯಾರ್ಥಿಗಳು

ಮೆಕ್ಯಾನಿಕಲ್ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ತಂಡ ಮನೀಶ್ ಪಾಂಡೆ, ಅಕಾಶ್ ರಸ್ಟೋಗಿ, ಅಕ್ರಮ್ ರಾಜಾ ಅನ್ಸಾರಿ, ರುಪಾಯಿ ಗುಪ್ತಾ, ಗುರುದೇವ್ ಸಿಂಗ್, ಗೌತಮ್ ರಾಯ್ ಹಾಗೂ ಅನುಜು ತ್ರಿಪಾಠಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+