ರೈಲ್ವೆ ಟಿಕೆಟ್ ರದ್ದುಗೊಳಿಸಲು ಹೆಚ್ಚು ದರ ಕೊಡಬೇಕು!

ಕಾಯ್ದಿರಿಸಿದ ಟಿಕೆಟ್ ರದ್ದತಿ ಹಾಗೂ ಹಣ ಮರುಪಾವತಿಯಿಂದ ಆಗುತ್ತಿರುವ ನಷ್ಟವನ್ನು ತುಂಬಿಕೊಳ್ಳಲು, ಕಠಿಣ ನಿಯಮ ರೂಪಿಸಲಾಗುತ್ತಿದೆ ಎಂದು ರೈಲ್ವೆ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಕಠಿಣ ನಿಯಮದ ಜೊತೆ ದರ ಏರಿಕೆಯನ್ನು ಮಾಡಿದ್ದು, ಮುಂದಿನ ತಿಂಗಳಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಇನ್ನು ಮುಂದೆ, ಆಸನ ಕಾಯ್ದಿರಿಸಿದ (ಕನ್‌ಫರ್ಮಡ್) ಟಿಕೆಟ್ ಅನ್ನು ರೈಲು ಹೊರಟ ಎರಡು ಗಂಟೆ ಅವಧಿ ಬಳಿಕ ರದ್ದುಗೊಳಿಸಲು ಅವಕಾಶವಿಲ್ಲ. ಕಾಯ್ದಿರಿಸಿದ ಅಥವಾ ಆರ್ಎಸಿ ಟಿಕೆಟ್‌ಗಳನ್ನು ರೈಲು ಹೊರಟ ಮೂರು ಗಂಟಗಳ ನಂತರ ರದ್ದುಗೊಳಿಸಬಹುದಾಗಿದೆ.
ಯಾವುದು ಕಡಿತ : ಪ್ರಯಾಣಿಕರು ಖಾತರಿ ಟಿಕೆಟ್ ಅನ್ನು ಪ್ರಯಾಣಕ್ಕೆ 48 ಗಂಟೆಗಳ ಮುಂಚಿತವಾಗಿ ರದ್ದು ಪಡಿಸಿದರೆ, ರದ್ದತಿ ಶುಲ್ಕವನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಆದರೆ, ಉಳಿದ ಸಂಪೂರ್ಣ ಪ್ರಯಾಣ ದರ ಪ್ರಯಾಣಿಕರಿಗೆ ಮರುಪಾವತಿಸಲಾಗುತ್ತದೆ.
ರೈಲ್ವೆ ಪ್ರಯಾಣ ದರ ಏರಿಕೆ ಮಾಡದ ಸರ್ಕಾರ, ವಿವಿಧ ಶುಲ್ಕಗಳನ್ನು ಕಡಿತಗೊಳಿಸಿ ಮತ್ತು ಹೆಚ್ಚಿಸಿ ನಷ್ಟವನ್ನು ಪರೋಕ್ಷವಾಗಿ ಜನರ ಜೇಬಿನಿಂದಲೇ ವಸೂಲಿ ಮಾಡುತ್ತಿದೆ. ಪರಿಷ್ಕೃತ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ಹೆಚ್ಚಿಸಿರುವ ಶುಲ್ಕದ ದರಗಳು ಹೀಗಿವೆ
* ಎಸಿ ಮೊದಲ ದರ್ಜೆ ಹಾಗೂ ಎಕ್ಸಿಕ್ಯುಟಿವ್ : 70 ರಿಂದ 120 ರೂ.
* ದ್ವಿತೀಯ ಎಸಿ : 60 ರಿಂದ 100 ರೂ.
* ತೃತೀಯ ಎಸಿ, ಚೇರ್ ಕಾರ್ ಹಾಗೂ ಎಕಾನಮಿ ದರ್ಜೆ : 60 ರಿಂದ 90 ರೂ.
* ಸ್ಲೀಪರ್ ದರ್ಜೆ : 40 ರಿಂದ 60 ರೂ.
* ದ್ವಿತೀಯ ದರ್ಜೆ : 20 ರಿಂದ 30 ರೂ.











Click it and Unblock the Notifications