ಮೋದಿ-ಗಾಂಧಿ ಇಬ್ರೂ ಬೇಡ, ಜಯಾ ಪ್ರಧಾನಿಯಾಗಲಿ

NRIs want Jayalalithaa as PM not Narendra Modi or Rahul Gandhi
ಚೆನ್ನೈ, ಜೂನ್ 26: ಇತ್ಲಾಗೆ ನರೇಂದ್ರ ಮೋದಿಯೂ ಬೇಡ ಅತ್ಲಾಗೆ ರಾಹುಲ್ ಗಾಂಧಿಯೂ ಬೇಡ; ನಮ್ಮ ಜಯಲಲಿತಾ ಅವರೇ ದೇಶದ ಪ್ರಧಾನ ಮಂತ್ರಿಯಾಗಲಿ ಎಂದು ಒಂದು ವರ್ಗ ಬಯಸುತ್ತಿದೆ.

ಹೀಗೆ ನರೇಂದ್ರ ಮೋದಿ ಅವರ ಗುಡ್ ಫ್ರೆಂಡ್ ಜಯಲಲಿತಾ ಬಗ್ಗೆ ಪ್ರೀತಿ ತೋರಿರುವವರು ಅನಿವಾಸಿ ಭಾರತೀಯರು (NRIs). ಅನಿವಾಸಿ ಭಾರತೀಯರು ತಮ್ಮ ತಮ್ಮಲ್ಲೇ ನಡೆಸಿರುವ ಸಮೀಕ್ಷೆಯ ಪ್ರಕಾರ ಅವರಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೇ ಪ್ರಧಾನಿ ಹುದ್ದೆಗೆ ಹೆಚ್ಚು ಅರ್ಹರಂತೆ.

ಕೊಲ್ಲಿ ರಾಷ್ಟ್ರಗಳು, ಆಸ್ಟ್ರೇಲಿಯಾ, ಕೆನಡಾ, ಯುಕೆ, ಸಿಂಗಾಪುರ, ಮಲೇಷ್ಯಾ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಭಾರತದಲ್ಲಿರುವ ಸುಮಾರು 500ಕ್ಕೂ ಹೆಚ್ಚು ಎನ್ನಾರೈಗಳನ್ನು ಸಮೀಕ್ಷೆ ಮೂಲಕ ಕೇಳಿದಾಗ ಅವರೆಲ್ಲ ಏಕಾಭಿಪ್ರಾಯವಾಗಿ ಪ್ರಧಾನಿ ಹುದ್ದೆಗೆ Jayalalithaa the Best ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಕೆಯಲ್ಲಿರುವ ನಾಯಕತ್ವ, ಆಡಳಿತ ಮತ್ತು ಉತ್ತರದಾಯಿತ್ವ ಗುಣಗಳು ಅನಿವಾಸಿ ಭಾರತೀಯರನ್ನು ಅಪಾರವಾಗಿ ಸೆಳೆದಿದ್ದು, ಅದರಿಂದಾಗಿ ಜಯಾ ಮೇಲೆ ಅವರ ವಿಶ್ವಾಸ ಹೆಚ್ಚಾಗಿದೆಯಂತೆ.

ದುಬೈನ ಮಾನವ ಸಂಪನ್ಮೂಲ ಸಂಸ್ಥೆಯೊಂದರ ಮುಖ್ಯಸ್ಥ ಎನ್ನಾರೈ ಪೊನ್ ಮೊಹಾದೀನ್ ಪಿಟ್ಚೈ ಈ ವಿಷಯವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಈಮೇಲ್, ಮೊಬೈಲುಗಳ ಮೂಲಕ ಈ ಸಮೀಕ್ಷೆ ನಡೆಸಲಾಗಿದ್ದು, ಶೇ. 86ರಷ್ಟು ಮಂದಿ ಜಯಾಗೆ ಜೈ ಅಂದಿದ್ದಾರೆ.

ಆದರೆ ಮನಮೋಹನ್ ಸಿಂಗ್ ಅವರಲ್ಲಿ ಮೇಲಿನ ಯಾವುದೇ ಗುಣಲಕ್ಷಣಗಳು ಕಂಡುಬರುವುದಿಲ್ಲ. ಹಾಗಾಗಿ ಅವರು ತಮಗೆ ಇಷ್ಟವಿಲ್ಲ ಎಂದು ಹಾಲಿ ಪ್ರಧಾನಿಯ ಬಗ್ಗೆ ಅವರು ಷರಾ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+