ಮಗನ ಪ್ರಿಯತಮೆ ಜತೆ ಜೆಡಿಎಸ್ ಶಾಸಕನ ಚಕ್ಕಂದ

ಈ ಸಂಬಂಧ ಬಾಧಿತ ಮಹಿಳೆ, ಅಂಗಾಮಲಿಯ ಮಂಜಪ್ರಾದ ನಿವಾಸಿ ಭಾನುವಾರ ನೀಡಿರುವ ದೂರಿನನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ. ತನ್ನ ಮಗನೊಂದಿಗೆ ವಿವಾಹ ಮಾಡಿಸುವುದಾಗಿ ಹೇಳಿದ ಶಾಸಕ ಜೋಸ್ ತೆಥಾಯಿಲ್ ಕಳೆದ ಒಂದು ವರ್ಷದಿಂದ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆಕೆ ದೂರಿದ್ದಾರೆ.
ಇದನ್ನು ದೃಢೀಕರಿಸಲು ಶಾಸಕ ಜೋಸ್ ತೆಥಾಯಿಲ್ ತನ್ನ ಜತೆ ನಡೆಸಿರುವ ಚಕ್ಕಂದದ ವಿಡಿಯೋ ಕ್ಲಿಪಿಂಗುಗಳನ್ನು ಆಕೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮೊದಲು ನಾನು ಶಾಸಕನ ಪುತ್ರ ಜತೆ ಗಾಢವಾದ ಪ್ರೇಮ ಬೆಳೆಸಿಕೊಂಡಿದ್ದೆ. ಅವನೂ ಅದಕ್ಕೆ ಸ್ಪಂದಿಸಿದ್ದ. ಆದರೆ ಅಪ್ಪ-ಮಗ ಇಬ್ಬರೂ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಬಾಧಿತ ಮಹಿಳೆ ಅಲವತ್ತುಕೊಂಡಿದ್ದಾರೆ.
ಆದರೆ ಆದರ್ಶ್ ಬಗ್ಗೆ ನನಗೆ ಡೌಟು ಬಂದಾಗ ವೆಬ್ ಕ್ಯಾಮ್ ಬಳಸಿ, ಅವನ ಅಪ್ಪನ ಜತೆಗಿನ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಶಾಸಕರ ಪುತ್ರ ಆದರ್ಶ್ ಪ್ರಸ್ತುತ ಮುಂಬೈನಲ್ಲಿ ಕೆಲಸದಲ್ಲಿದ್ದಾರೆ.












Click it and Unblock the Notifications