ಮಹಿಳೆಯರು ಇಂಟರ್ನೆಟ್‌ ಬಳಸುವುದು ಜಾಸ್ತಿಯಾಗ್ತಿದೆ

Women internet users increase: Google India Rajan Anandhan
ಮುಂಬೈ, ಜೂನ್ 21: ಭಾರತದ ಇಂಟರ್ನೆಟ್ ಲೋಕಕ್ಕೆ ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಒಟ್ಟಾರೆಯಾಗಿ ಭಾರತದಲ್ಲಿ ಅಂತರ್ಜಾಲ ಜಾಲಾಡುವವರ ದಿನೇ ದಿನೇ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಈಗೀಗ ಮಹಿಳೆಯರೂ ಇಂಟರ್ನೆಟ್ ನಲ್ಲಿ ಇಣುಕಿ ನೋಡುವುದು ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಂತರ್ಜಾಲ ಲೋಕದ ದಿಗ್ಗಜ Google ಸಂಸ್ಥೆಯೇ ಇದನ್ನು ತಿಳಿಸಿದೆ. ಭಾರತದಲ್ಲಿ 1.50 ಕೋಟಿ ಬಳಕೆದಾರರಲ್ಲಿ ಶೇ. 40ರಷ್ಟು ಮಂದಿ ಮಹಿಳೆಯರು ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾರೆ. ಅಂತರ್ಜಾಲ ಬಳಸುವ ಮಹಿಳೆಯರಲ್ಲಿ 24 ಲಕ್ಷ ಮಂದಿ ಮಹಿಳೆಯರು ನಿತ್ಯವೂ ಈ ಮೇಲ್‌, ಸಾಮಾಜಿಕ ಜಾಲತಾಣಗಳ ಬಳಕೆ, ಅಂತರ್ಜಾಲ ಶಾಂಪಿಂಗ್‌ ಮಾಡುತ್ತಾರೆ ಎಂದು ಭಾರತದ ಗೂಗಲ್‌ ಸಂಸ್ಥೆ ಸಮೀಕ್ಷೆಯಿಂದ ತಿಳಿದುಬಂದಿದೆ.

ಹೀಗೆ ಇಂಟರ್ನೆಟ್ ಲೋಕಕ್ಕೆ ಅಂಟಿಕೊಂಡವರು ಹೆಚ್ಚಾಗಿ ಶ್ರೀಮಂತ, ಮಧ್ಯಮ ವರ್ಗದವರು ಮತ್ತು ಯುವ ಮಹಿಳೆಯರು ಎಂಬುದು TNS Australia ಸಮೀಕ್ಷೆಯಿಂದ ತಿಳಿದುಬಂದಿದೆ.

ಸುಮಾರು 60 ಲಕ್ಷದಷ್ಟು ಮಹಿಳೆಯರು ನಿತ್ಯವೂ ಆನ್‌ ಲೈನ್‌ ನಲ್ಲೇ ಇದ್ದು ತಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಾರೆ. ಭಾರತದಲ್ಲಿ ಅಂತರ್ಜಾಲ ಸ್ಮಾರ್ಟ್‌ ಫೋನ್‌ಗಳು, ಸೈಬರ್‌ ಕೇಂದ್ರ, ಮನೆಗಳಲ್ಲಿ ಸುಲಭವಾಗಿ ಲಭ್ಯವಿದ್ದು ಬಳಕೆ ಹೆಚ್ಚಳಕ್ಕೆ ಹೇತುವಾಗಿದೆ ಎಂದು ಗೂಗಲ್‌ ಇಂಡಿಯಾದ ಆಡಳಿತ ನಿರ್ದೇಶಕ ರಾಜನ್‌ ಆನಂದನ್‌ ಹೇಳಿದ್ದಾರೆ.

ಅಂತರ್ಜಾಲದಲ್ಲಿ ಸಾಮಾಜಿಕ ಜಾಲ ತಾಣಗಳ ಬಳಕೆ ಅತ್ಯಧಿಕವಾಗಿದ್ದು, ಹಾಡುಗಳ ಡೌನ್‌ ಲೋಡ್‌, ಶಿಕ್ಷಣ ಸಂಬಂಧಿ ಮಾಹಿತಿ, ಉದ್ಯೋಗ, ವಿಡಿಯೋ ವೀಕ್ಷಿಸುವ ಅಭ್ಯಾಸ ಹೆಚ್ಚಿದೆ. ಮಹಿಳಾ ವರ್ಗದಲ್ಲಿ ಆಹಾರ, ಪಾನೀಯ, ಮಕ್ಕಳ ವಸ್ತುಗಳು, ಸೌಂದರ್ಯವರ್ಧಕಗಳ ಕುರಿತಂತೆ ಹುಡುಕಾಟ ಹೆಚ್ಚಿದೆ ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+