ಪಾಸ್‌ಪೋರ್ಟ್‌ ಪಡೆಯಲು ಹೊಸ ವ್ಯವಸ್ಥೆ

pass port
ನವದೆಹಲಿ, ಜೂ.21: ಪಾಸ್‌ಪೋರ್ಟ್ ವಿಲೇವಾರಿಯಲ್ಲಿ ಆಗುವ ವಿಳಂಬಕ್ಕೆ ಕಡಿವಾಣ ಹಾಕಲು ವಿದೇಶಾಂಗ ವ್ಯವಹಾರ ಸಚಿವಾಲಯ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಅನ್ವಯ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಸಂದರ್ಶನಕ್ಕಾಗಿ ದಿನ ನಿಗದಿಪಡಿಸುವ ಮೊದಲೇ ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಿದೆ.

ಹೊಸ ವ್ಯವಸ್ಥೆ ರಾಜ್ಯದ ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. ಈ ವ್ಯವಸ್ಥೆಯಿಂದಾಗಿ ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆ ಮತ್ತಷ್ಟು ತ್ವರಿತವಾಗಲಿದೆ.

ಯೋಜನೆ ಏಕೆ : ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸಿದ ಬಹುತೇಕ ಜನರು, ದಾಖಲೆಗಳ ಪರಿಶೀಲನೆಗಾಗಿ ನಿಗದಿಪಡಿಸಿದ ದಿನದಂದು ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿರಲಿಲ್ಲ. ಇದರಿಂದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಕೆಲಸ ಕಾರ್ಯಗಳು ವಿಳಂಬವಾಗುತ್ತಿತ್ತು.

ಇದರಿಂದಾಗಿ ತುರ್ತಾಗಿ ಪಾಸ್‌ಪೋರ್ಟ್ ಪಡೆಯಬೇಕೆನ್ನುವ ಜನರಿಗೆ ತೊಂದರೆ ಉಂಟಾಗಿತ್ತು. ಕಳೆದ ಒಂದು ವರ್ಷದ ಕಚೇರಿಗಳ ಕಾರ್ಯಾಚರಣೆ ಗಮನಿಸಿ, ಮೊದಲೇ ಹಣ ಪಾವತಿ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ.

ಅರ್ಜಿ ಸಲ್ಲಿಸಿದವರು ನಿಗದಿತ ಸಮಯಕ್ಕೆ ದಾಖಲೆಗಳ ಪರಿಶೀಲನೆಗಾಗಿ ಆಗಮಿಸಬೇಕು ಎಂಬ ಕಾರಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದ ಅನೇಕ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೊಂಡಿದೆ.

ಆನ್‌ಲೈನ್‌ ನಲ್ಲಿ ಪಾವತಿ : ಹೊಸ ವ್ಯವಸ್ಥೆಯ ಅನ್ವಯ ಜನರು ದಾಖಲೆಗಳ ಪರಿಶೀಲನೆಗಾಗಿ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕಾಗಿದೆ. www.passportindia.gov.in ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಚಲನ್ ತುಂಬಿ ಶುಲ್ಕ ಪಾವತಿಸಬೇಕು.

ದಾಖಲೆಗಳ ಪರಿಶೀಲನೆ ದಿನ ನಿಗದಿಪಡಿಸುವಾಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಬಳಸಿ ಅರ್ಜಿದಾರರು ಶುಲ್ಕ ಪಾವತಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಚಲನ್ ಆಯ್ಕೆಯನ್ನು ಬಳಸಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್‌ನಲ್ಲಿಯೂ ಹಣ ಪಾವತಿಸಬಹುದು. ಶುಲ್ಕ ಪಾವತಿಸಿದ್ದು ಖಚಿತವಾದ ಬಳಿಕ ಮಾತ್ರ, ದಿನಾಂಕ ನಿಗದಿಯಾಗುತ್ತದೆ.

ಅರ್ಜಿದಾರ ಆಯ್ಕೆ ಮಾಡುವಂತಿಲ್ಲ : ಹೊಸ ಯೋಜನೆಯಂತೆ ಅರ್ಜಿದಾರನು, ದಾಖಲೆಗಳ ಪರಿಶೀಲನೆಯ ಭೇಟಿಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತಿಲ್ಲ. ಬದಲಾಗಿ ಲಭ್ಯ ಇರುವ ದಿನಾಂಕ ಮತ್ತು ಸಮಯವನ್ನುವೆಬ್‌ಸೈಟ್‌ನಲ್ಲೇ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+