ವೇಶ್ಯಾವಾಟಿಕೆ: ಬೆಳ್ಳಿತೆರೆ ಪರದೆಕಳಚಿ 5 ನಟಿಯರ ಅರೆಸ್ಟ್

Mumbai 5 Television and film actresses held in IAS call-girl racket
ಮುಂಬೈ, ಜೂನ್ 21: ಇದು ನಿಜಕ್ಕೂ ಆಘಾತಕಾರಿಯೇ. ಗೌರವಾನ್ವಿತ ಐಎಎಸ್ ಅಧಿಕಾರಿ ಕೃಪಾಪೋಷಿತ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಕಿರುತೆರೆ ಮತ್ತು ಬೆಳ್ಳಿತೆರೆಯ ಪರದೆಗಳನ್ನು ಕಳಚಿ 5 ನಟಿಯರನ್ನು ಬಂಧಿಸಿದ್ದಾರೆ.

ಲೋಖಂಡವಾಲಾ ಬಡಾವಣೆಯಲ್ಲಿ IAS ಅಧಿಕಾರಿಯ ಮನೆಯಲ್ಲಿ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದ್ದ high profile ವೇಶ್ಯಾವಾಟಿಕೆ ಇದು. ಬಂಧಿತ ಯುವತಿಯರು high profileನವರೇ ಆಗಿದ್ದು ಕಿರುತೆರೆ ಮತ್ತು ಬೆಳ್ಳಿತೆರೆಯ ಸೋಗಿನಲ್ಲಿ ದಂಧೆ ನಡೆಸುತ್ತಿದ್ದರು.

ಪೊಲೀಸರ ವಿಚಾರಣೆಯಿಂದ ತಿಳಿದುಬಂದಿರುವ ಅಂಶವೆಂದರೆ ಬಂಧಿತ ಐದೂ ನಟಿಯರು ಖ್ಯಾತ ತಾರಾಮಣಿಗಳು. Saas Bahu ಧಾರವಾಹಿಯಲ್ಲಿನ ಕೆಲವು ಪಾತ್ರಧಾರಿಗಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ಇನ್ನು ಕೆಲವರು ಭೋಜ್ ಪುರಿ ಮತ್ತು ಸಿ ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದವರು ಎಂದು ತಿಳಿದುಬಂದಿದೆ.

ಲೋಖಂಡವಾಲಾದ Meera Towersನ B 1402 ಫ್ಲಾಟ್ ಐಎಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು, ಇದೇ ವೇಶ್ಯಾವಾಟಿಕೆಯ ಅಡ್ಡೆಯಾಗಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸರು ಹೊರಹಾಕಿದ್ದಾರೆ.

ಇಮ್ತಿಯಾಜ್ ಖಾನ್ ಎಂಬ ವಿಟಪುರುಷ ವೇಶ್ಯಾವಾಟಿಕೆಯ ಸೂತ್ರಧಾರನಾಗಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೇ ವಾಸಿಸುವ ಅಪಾರ್ಟ ಮೆಂಟಿನಲ್ಲಿ ಯಾರದೇ ಕಣ್ನಿಗೆ ಬೀಳದೆ ರಾಜಾರೋಶವಾಗಿ ಕಾಳ್ ಗರ್ಲ್ಸ್ ಸರಬರಾಜು ದಂಧೆಯಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+