ಮೂವತ್ತು ಟಿಟಿಎಂಸಿ ನಿರ್ಮಿಸಲಿದೆ ಬಿಎಂಟಿಸಿ

ಟಿಟಿಎಂಸಿ ನಿರ್ಮಾಣದ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಬಿಎಂಟಿಸಿ ಸದ್ಯ ಟಿಟಿಎಂಸಿಗಳ ಬಾಡಿಗೆಯಿಂದ 14 ಕೋಟಿ ವಾರ್ಷಿಕ ಆದಾಯ ಪಡೆಯುತ್ತಿದೆ ಎಂದರು.
ನಗರದ ಕೆಲವು ಟಿಟಿಎಂಸಿಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅವುಗಳು ಪೂರ್ಣಗೊಂಡರೆ, ವಾರ್ಷಿಕ ಆದಾಯ ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಆದ್ದರಿಂದ ಹೆಚ್ಚಿನ ಟಿಟಿಎಂಸಿ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಸರ್ಕಾರ ಬೊಕ್ಕಸ ಮತ್ತು ಸಂಸ್ಥೆಯ ಆದಾಯ ಸಂಗ್ರಹಣೆಗಾಗಿ, ನಗರದಲ್ಲಿ 15 ಟಿಟಿಎಂಸಿಗಳನ್ನು ತಕ್ಷಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಜಯನಗರ 4ನೇ ಟಿ ಬ್ಲಾಕ್ ಮತ್ತು ಕತ್ರಿಗುಪ್ಪೆಯಲ್ಲಿ ಟಿಟಿಎಂಸಿ ನಿರ್ಮಿಸಲು ಯೋಜನೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.
ಜಯನಗರ ಟಿಟಿಎಂಸಿಯಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಗಳನ್ನು ನಿಲುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. 15 ಬಸ್ ಫ್ಲಾಟ್ ಫಾರಂಗಳು ಮತ್ತು 10 ಪಾರ್ಕಿಂಗ್ ಸ್ಥಳವಕಾಶವನ್ನು ಟಿಟಿಎಂಸಿ ಹೊಂದಿರುವಂತೆ ನೀಲನಕ್ಷೆ ತಯಾರಿಸಲಾಗುತ್ತಿದೆ ಎಂದರು.
ಜಯನಗರ ಟಿಟಿಎಂಸಿಯಲ್ಲಿ ಹೈಪರ್ ಮಾರ್ಕೆಟ್, ಮಲ್ಟಿಫೆಕ್ಸ್, ಹೋಟೆಲ್ ಸೇರಿದಂತೆ ವಿವಿಧ ವಾಣಿಜ್ಯ ಕಟ್ಟಡಗಳಿಗಾಗಿ ಸ್ಥಳವಕಾಶ ಒದಗಿಸಲಾಗುತ್ತದೆ. ಸುಮಾರು 140 ಕೋಟಿ ರೂ. ಜಯನಗರ ಟಿಟಿಎಂಸಿ ನಿರ್ಮಾಣಕ್ಕೆ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಕತ್ರಿಗುಪ್ಪೆ ಟಿಟಿಎಂಸಿ ನಿರ್ಮಾಣದ ಯೋಜನೆಯೂ ಸಿದ್ಧಗೊಂಡಿದೆ. ಸ್ಥಳವನ್ನು ಗುರುತಿಸಿ ಸರ್ಕಾರ ಒಪ್ಪಿಗೆ ಪಡೆದು, ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ. ಇಲ್ಲಿ ಕೇವಲ ಬಿಎಂಟಿಸಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.












Click it and Unblock the Notifications