ಎಟಿಎಂಗಳಿಗೆ ಕನ್ನ: ಗಾಢ ನಿದ್ದೆಯಲ್ಲಿ ಬ್ಯಾಂಕ್, ಪೊಲೀಸ್

ATM break trick again bangalore police bankaers in deep sleep
ಬೆಂಗಳೂರು, ಜೂನ್ 21: ಪೊಲೀಸರು ಎಚ್ಚರಾ ಎಚ್ಚರ ಎಂದು ಬೊಡಕೊಳ್ಳುತ್ತೊಲೇ ಇದ್ದಾರೆ. ಜತೆಗೆ ಸುತ್ತಮುತ್ತ ಅನಾಮತ್ತಾಗಿ ಎಟಿಎಂಗಳನ್ನೇ ಸಲೀಸಾಗಿ ಎತ್ಹಾಕಿಕೊಂಡು ಹೋಗುತ್ತಿದ್ದಾರೆ. ಆದರೂ ಈ ಬ್ಯಾಂಕಿನವರು ಎಚ್ಚೆತ್ತುಕೊಂಡಿಲ್ಲ.

ಅಲ್ಲಾ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚಿನ್ನ ಮುತ್ತು ರತ್ನವನ್ನು ಬೀದಿ ಬದಿ ಮಾರಾಟ ಮಾಡುತ್ತಿದ್ದಂತೆ ಆಧುನಿಕ ಕಾಲದ ತಂತ್ರಜ್ಞಾನಕ್ಕೆ ತಕ್ಕಂತೆ ಬೀದಿ ಬದಿ ಗೂಡಂಗಡಿ ತೆಗೆದು ಲಕ್ಷಾಂತರ ರೂಪಾಯಿ ಹಣ ವಿಲೇವಾರಿಗೆ ಇಳಿದರೆ ಕಳ್ಳರ ಕಣ್ಣೂ ಕುಕ್ಕದೇ ಇರುತ್ತದಾ? ಅಥವಾ ಕೃಷ್ಣದೇವರಾಯನ ಕಾಲದ ಪ್ರಮಾಣಿಕತೆ ಇನ್ನೂ ಇದೆ ಅಂದುಕೊಂಡಿದ್ದಾರಾ!?

ಈ ಕಳ್ಳರು ಒಂದೊಂದೇ ಕಳ್ಳತನ ಮಾಡುತ್ತಾ ತಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬ್ಯಾಂಕಿನವರು!? ದುಡ್ಹೋಯ್ತು ಎಂದು ಬಾಯಿಬಡಿದುಕೊಂಡರೆ ಪಾಪ ಪೊಲೀಸರು ಏನು ಮಾಡಿಯಾರು?

ನೋಡಿ ಮೊಬೈಲು, ಸಿಸಿಟಿವಿ, ಅದೂ ಇದೂ ಇದ್ದರೆ ಸಲೀಸಾಗಿ ಸಿಕ್ಕಿಬೀಳುವುದು ಗ್ಯಾರಂಟಿ ಎಂದು ಕಳ್ಳರು ಅವುಗಳಿಗೆ ಆಸ್ಪದವನ್ನೇ ನೀಡದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.

ಎಟಿಎಂ ದೋಚುವ ತಾಜಾ ಪ್ರಕರಣಗಳಲ್ಲಿ ಕಳ್ಳರು ಆರಿಸಿಕೊಳ್ಳುತ್ತಿರುವುದು ಜನಸಂಚಾರ ವಿರಳವಾಗಿರುವ ನಗರದ ಔಟ್ ಸ್ಕರ್ಟ್ ಗಳಲ್ಲಿ. ಆದರೂ ಆ ಭಾಗಗಳಲ್ಲೇ ಬ್ಯಾಂಕಿನವರು ಯಾಮಾರುತ್ತಿರುವುದು. ಕಳ್ಳರು ಬ್ಯಾಂಕಿನವರನ್ನೇ ಅಲ್ಲ ಪೊಲೀಸರ ಮಾನವನ್ನೂ ಹರಾಜಿಗೆ ಹಾಕುತ್ತಿದ್ದಾರೆ. ಹೊರವಲಯಗಳಲ್ಲಿ ಪೊಲೀಸ್ ವ್ಯವಸ್ಥೆ ಹೇಗಿದೆ ಎಂದು ಕಳ್ಳರು ಅಣಕಿಸುವಂತಾಗಿದೆ.

ತಾಜಾ ಆಗಿ ಬೆಂಗಳೂರಿನ ನಾಗಶೆಟ್ಟಿ ಹಳ್ಳಿ ಬಸ್ ಸ್ಟಾಂಡ್ ಬಳಿ ಕೆನರಾ ಬ್ಯಾಂಕ್, ಬಾಗಲೂರಿನಲ್ಲಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಎಟಿಎಂ ಯಂತ್ರವನ್ನೇ ಕದ್ದೊಯ್ದ ಘಟನೆ ಮಾಸುವ ಮುನ್ನವೇ ವಿದ್ಯಾರಣ್ಯಪುರ ಮತ್ತು ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಎರಡು ಕಡೆ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಣಕಳವಿಗೆ ವಿಫ‌ಲ ಯತ್ನ ನಡೆಸಿದ್ದಾರೆ.

ವಿದ್ಯಾರಣ್ಯಪುರದ ರಾಮಚಂದ್ರಪುರ ಮುಖ್ಯರಸ್ತೆಯಲ್ಲಿನ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಬುಧವಾರ ರಾತ್ರಿ 3 ಗಂಟೆ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಸಿಸಿ ಕ್ಯಾಮೆರಾಕ್ಕೆ ಕಪ್ಪು ಬಟ್ಟೆ ಹಾಕಿ ಎಟಿಎಂ ಯಂತ್ರ ಕತ್ತರಿಸಲು ಪ್ರಯತ್ನಿಸಿದ್ದಾರೆ. ಆದರೆ, ಯೂನಿಯನ್‌ ಬ್ಯಾಂಕ್‌ ಎಟಿಎಂ ಕೇಂದ್ರದ ಸೆಕ್ಯುರಿಟಿ ಗಾರ್ಡ್‌ ಈ ಶಬ್ದ ಕೇಳಿ ಎಚ್ಚೆತ್ತ ಕೂಡಲೇ ವಿಷಲ್ ಹಾಕಿದ್ದಾರೆ. ಇದನ್ನು ಕೇಳಿದ ದುಷ್ಕರ್ಮಿಗಳು ಪೊಲೀಸರೆಂದು ಭಾವಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆಯುವುದಕ್ಕೂ ಮುನ್ನ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರತ್‌ ಹಳ್ಳಿ ಸಮೀಪದ ಯುನೈಟೆಡ್‌ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ಕಳ್ಳರು ಲಗ್ಗೆಯಿಟ್ಟಿದ್ದಾರೆ. ಎಟಿಎಂ ಯಂತ್ರ ಕತ್ತರಿಸಲು ವಿಫ‌ಲ ಯತ್ನ ನಡೆಸಿದ್ದಾರೆ. ಇಲ್ಲೂ ಕೂಡ ಸಿಸಿ ಕ್ಯಾಮೆರಾಕ್ಕೆ ಕಪ್ಪು ಬಟ್ಟೆ ಹಾಕಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಧ್ಯ ರಾತ್ರಿ 12.30ಕ್ಕೆ ಸಿಸಿಟಿವಿ ಸ್ಥಗಿತಗೊಂಡಿದೆ. ಸಿಸಿ ಕ್ಯಾಮೆರಾಕ್ಕೆ ಎರಡೂ ಕಡೆಯೂ ಕಪ್ಪು ಬಟ್ಟೆ ಹಾಕಿರುವುದರಿಂದ ಆರೋಪಿಗಳ ಚಹರೆ ಸೆರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. Wake up Bankers, Police.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+