ಸೇನೆಯಲ್ಲೂ ಉದ್ಯೋಗ ಕಡಿತ: ಸಾವಿರಾರು ಸೈನಿಕರು ಮನೆಗೆ

britain-soldiers-numbers-slashed-lowest-in-200-years
ಲಂಡನ್, ಜೂ.20: ಪಿಂಕ್ ಸ್ಲಿಪ್ ಹಾವಳಿ ಸೈನ್ಯವನ್ನೂ ಬಿಟ್ಟಿಲ್ಲ. 200 ವರ್ಷಗಳ ಬ್ರಿಟೀಷ್ ಸೇನಾ ಚರಿತ್ರೆಯಲ್ಲಿ ಮೊದಲ ಬಾರಿಗೆ ಸೈನಿಕರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಥ್ಯಾಂಕ್ಸ್ ಟು ಆರ್ಥಿಕ ಹಿಂಜರಿತ.

ವಿಶ್ವದೆಲ್ಲೆಡೆ ಕಾಡುತ್ತಿರುವ ಆರ್ಥಿಕ ಸಂಕಷ್ಟ ಬ್ರಿಟನ್ ಸೇನೆಯನ್ನೂ ಭಾದಿಸುತ್ತಿದೆ. 2010ರಲ್ಲಿ ರಕ್ಷಣಾ ವೆಚ್ಚ ಮರುಪರಿಶೀಲನೆ ಪ್ರಾರಂಭಿಸಿದ ಬಳಿಕ ನಡೆದ ಮೂರನೆಯ ಹಾಗೂ ಅತಿದೊಡ್ಡ ಮಟ್ಟದ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ ಮೊನ್ನೆ ಮಂಗಳವಾರ ಕಂಡುಬಂದಿದ್ದು, ಸುಮಾರು 5,000 ಸೇನಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ದೇಶದ ಭದ್ರತೆಗೆ ಅಪಾಯ:
ನೆಪೋಲಿಯನ್ ಆಡಳಿತದ ನಂತರ ದೇಶದ ಸೈನಿಕರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಕಳವಳಕಾರಿಯಾಗಿದೆ. ಇದು ವಿವಾದಾತ್ಮಕವೂ ಆಗಿದೆ. ಅತ್ತ ಅಫಘಾನಿಸ್ತಾನ, ಆಫ್ರಿಕಾದಲ್ಲಿ ಭಯೋತ್ಫಾದನೆ ವಿರುದ್ಧ ಬ್ರಿಟನ್ ಸಮರ ಸಾರಿರುವಾಗ ಈ ಸೇನಾ ಕಡಿತ ಅಗತ್ಯವಿರಲಿಲ್ಲ. ಇದ್ದಬದ್ದ ಸೈನಿಕರಿಂದಲೇ ಎಲ್ಲವನ್ನೂ ಮಾಡಿಸಲು ಹೋದರೆ ಅದು ದೇಶದ ಭದ್ರತೆಗೆ ಅಪಾಯಕಾರಿಯಾಗುತ್ತದೆ' ಎಂದು ಮಾಜಿ ಕಮಂಡರ್ ಒಬ್ಬರು ಕಿಡಿಕಾರಿದ್ದಾರೆ.

ಖಾಯಂ ಯೋಧರ ಸಂಖ್ಯೆಯನ್ನು ಶೇ. 20ರಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಸರಕಾರವು ಹಮ್ಮಿಕೊಂಡಿರುವ ಯೋಜನೆಯಡಿ ಉದ್ಯೋಗ ತೊರೆಯುವಂತೆ 4,480 ಯೋಧರಿಗೆ ತಿಳಿಸಲಾಗಿದೆ.

ವಿಆರ್ ಎಸ್ ನಲ್ಲಿ ಸ್ವಯಂ ಆಗಿ ಉದ್ಯೋಗ ತೊರೆಯುವ ಪ್ರಕ್ರಿಯೆ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದ್ದು, ಕಡ್ಡಾಯ ಕಡಿತವು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಫಿಲಿಪ್ ಹಮ್ಮಂಡ್ ಪ್ರಕಟಿಸಿದ್ದಾರೆ.

ಬಹುಕೋಟಿ ಪೌಂಡ್ ಮೊತ್ತದ ಆರ್ಥಿಕ ಕೊರತೆಯನ್ನು ಎದುರಿಸುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತವು ಆವಶ್ಯಕವಾಗಿದೆ ಹಾಗೂ ಇದರಿಂದ ರಕ್ಷಣಾ ಬಜೆಟ್‌ನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಅಭಿಪ್ರಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+