ಏಳು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ?

medical college
ಬೆಂಗಳೂರು, ಜೂ.20 : ರಾಜ್ಯದಲ್ಲಿ ನೂತನವಾಗಿ ಏಳು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ನೂತನ ಕಾಲೇಜುಗಳು ಏಳು ಜಿಲ್ಲೆಗಳಲ್ಲಿ ಪ್ರಾರಂಭವಾಗಲಿವೆ. ಈ ಕುರಿತು ಅಂತಿಮ ಒಪ್ಪಿಗೆ ಮಾತ್ರ ದೊರೆಯಬೇಕಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ 2014-15ನೇ ಸಾಲಿನಿಂದಲೇ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಚಿವ ಸಂಪುಟ ಸಭೆ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅನುಮೋದನೆ ದೊರೆತರೆ, ಕಾಮಗಾರಿಗಳು ಪ್ರಾರಭವಾಗಲಿವೆ.

ಹಿಂದಿನ ಬಿಜೆಪಿ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿತ್ತು. ಪ್ರತಿ ಕಾಲೇಜು ಸ್ಥಾಪನೆಗೆ 100 ಕೋಟಿ ರೂ.ಗಳ ಅನುದಾನ ಬೇಕು ಎಂದು ಅಂದಾಜಿಸಿತ್ತು. ಮೊದಲ ವರ್ಷದಲ್ಲಿ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಿ, ನಂತರ ಸ್ನಾತಕೋತ್ತರ ಕೋರ್ಸ್ ಪ್ರಾರಂಭಿಸುವುದಾಗಿ ಚಿಂತನೆ ನಡೆಸಿತ್ತು.

ಯಾವ ಜಿಲ್ಲೆಗಳಲ್ಲಿ ಕಾಲೇಜು : ಸರ್ಕಾರದ ಪ್ರಸ್ತಾವನೆಯಂತೆ ಚಿತ್ರದುರ್ಗ, ಚಾಮರಾಜನಗರ, ಕೊಡಗು, ತುಮಕೂರು, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನೂತನ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿವೆ.

ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಸಂಪುಟದ ಒಪ್ಪಿಗೆಯ ಜೊತೆಗೆ ಸುಮಾರು 700 ಕೋಟಿಗಳ ಅನುದಾನದ ನಿರೀಕ್ಷೆಯಲ್ಲಿದೆ. ಮೊದಲ ಹಂತದಲ್ಲಿ ಸಿಬ್ಬಂದಿ ನೇಮಕಾತಿ ಮತ್ತು ಉಪಕರಣಗಳ ಖರೀದಿಗಾಗಿ 390 ಕೋಟಿ ರೂ.ಗಳ ಅನುದಾನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ 10 ವೈದ್ಯಕೀಯ ಶಿಕ್ಷಣ ಕಾಲೇಜುಗಳಿವೆ. ಆದ್ದರಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡುವುದು ಕಷ್ಟವಾಗಿದೆ. ಸರ್ಕಾರದ ಅನುದಾನ ನೀಡುವ ಭರವಸೆ ನೀಡಿದರೆ, ಮಾತ್ರ ಕಾಲೇಜು ಪ್ರಾರಂಭವಾಗಲಿವೆ. (ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು)

ಕಾಂಗ್ರೆಸ್ ಸರ್ಕಾರ ವೈದ್ಯಕೀಯ ಶಿಕ್ಷಣ ಕಾಲೇಜು ಪ್ರಾರಂಭಿಸಲು ಅನುಮತಿ ನೀಡುತ್ತದೆಯೇ ಎಂದು ಕಾದು ನೋಡಬೇಕು. ಕಾಲೇಜುಗಳು ಪ್ರಾರಂಭವಾದರೆ, ಜಿಲ್ಲೆಯ ಜನರ ಕನಸು ನನಸಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+