ಕೆಎಸ್ಆರ್ ಟಿಸಿ ದರ ಎಷ್ಟು ಹೆಚ್ಚಾಗಿದೆ?

ಡಿಸೇಲ್ ದರ ಏರಿಕೆ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆಯ ಕಾರಣನೀಡಿ, ಹಿಂದಿನ ಬಿಜೆಪಿ ಸರ್ಕಾರ 2012ರ ಅಕ್ಟೋಬರ್ ನಲ್ಲಿ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸಿತ್ತು. ನೂತನ ಕಾಂಗ್ರೆಸ್ ಸರ್ಕಾರ ಶೇ 10.50ಯಷ್ಟು ದರ ಹೆಚ್ಚಳಮಾಡಿ ಆದೇಶ ಹೊರಡಿಸಿದೆ.
ಡೀಸೆಲ್ ದರ ಹೆಚ್ಚಳ ಮತ್ತು ಸಿಬ್ಬಂದಿಯ ವೇತನ ಪರಿಷ್ಕರಣೆಯಿಂದ ವಾರ್ಷಿಕ 222.68 ಕೋಟಿ ರೂ. ನಷ್ಟವನ್ನು ಸಂಸ್ಥೆ ಎದುರಿಸುತ್ತಿದೆ. ಆದ್ದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಸ್‌ಆರ್ ಟಿಸಿ ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದೆ. (ಬಿಎಂಟಿಸಿ ದರ ಎಷ್ಟಾಗಿದೆ)
ನೂತನ ದರದ ಅನ್ವಯ ವೇಗದೂತ ಮತ್ತು ರಾಜಹಂಸ ಪ್ರಯಾಣದರ ಕೆಳಕಂಡಂತಿದೆ.
| ಸ್ಥಳ | ಪ್ರಸ್ತುತ ದರ(ವೇಗದೂತ) | ಪರಿಷ್ಕೃತ ದರ | ಪ್ರಸ್ತುತ ದರ(ರಾಜಹಂಸ) | ಪರಿಷ್ಕೃತ ದರ |
| ಮೈಸೂರು | 110 | 120 | 186 | 209 |
| ಮಂಗಳೂರು | 280 | 307 | 473 | 523 |
| ಹುಬ್ಬಳ್ಳಿ | 325 | 356 | 549 | 610 |
| ಮಂಡ್ಯ | 75 | 83 | 128 | 141 |
| ಧಾರವಾಡ | 340 | 373 | 575 | 638 |
| ಗುಲ್ಬರ್ಗ | 495 | 548 | 844 | 938 |
| ಬಳ್ಳಾರಿ | 250 | 275 | 423 | 469 |
| ದಾವಣಗೆರೆ | 210 | 230 | 356 | 394 |
| ಶಿವಮೊಗ್ಗ | 225 | 247 | 381 | 423 |
| ಬೆಳಗಾವಿ | 400 | 439 | 676 | 751 |
| ಕೋಲಾರ | 55 | 60 | 94 | 105 |
| ತುಮಕೂರು | 55 | 60 | 94 | 105 |
| ಹಾಸನ | 145 | 160 | 246 | 272 |
| ಚಾಮರಾಜನಗರ | 160 | 175 | 271 | 301 |
| ಚಿತ್ರದುರ್ಗ | 160 | 175 | 271 | 301 |
| ಚಿಕ್ಕಮಗಳೂರು | 195 | 214 | 330 | 367 |
| ಮಡಿಕೇರಿ | 205 | 225 | 347 | 385 |
| ದಾವಣಗೆರೆ | 210 | 230 | 356 | 394 |
| ಹಾವೇರಿ | 265 | 291 | 448 | 498 |
| ಮಂಗಳೂರು | 280 | 307 | 473 | 523 |
| ಕೊಪ್ಪಳ | 315 | 346 | 533 | 591 |
| ಗದಗ | 330 | 362 | 558 | 619 |
| ಉಡುಪಿ | 340 | 373 | 575 | 638 |
| ರಾಯಚೂರು | 390 | 433 | 667 | 741 |
| ಬಾಗಲಕೋಟೆ | 420 | 466 | 718 | 797 |
| ಕಾರವಾರ | 420 | 466 | 718 | 797 |
| ವಿಜಾಪುರ | 455 | 504 | 777 | 863 |
| ಬೀದರ್ | 590 | 652 | 1005 | 1116 |












Click it and Unblock the Notifications