ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತವಾಗಿ ಹಲ್ಲು ಸೆಟ್ ಕೊಡ್ತೀವಿ : ಯು.ಟಿ.ಖಾದರ್

|
Google Oneindia Kannada News

U.T. Khader
ಬೆಂಗಳೂರು, ಜೂ.12 : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಪಡೆದ ನಂತರ ಹೊಸ-ಹೊಸ ಯೋಜನೆಗಳನ್ನು ಘೋಷಿಸುತ್ತಿದೆ. ಗುಟ್ಕಾ ಮತ್ತು ಪಾನ್‌ ಮಸಾಲ ನಿಷೇಧಿಸುವ ಮೂಲಕ ಚರ್ಚೆ ಹುಟ್ಟು ಹಾಕಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್, ಹಿರಿಯ ನಾಗರಿಕರಿಗೆ ಉಚಿತ ಕೃತಕ ದಂತಪಂಕ್ತಿ (ಹಲ್ಲಿನ ಸೆಟ್‌) ವಿತರಿಸುವುದಾಗಿ ಹೇಳಿದ್ದಾರೆ.

ಮಂಗಳವಾರ ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆ ಆವರಣದಲ್ಲಿ ಇಲಾಖೆಯು ನಿರ್ಮಿಸುತ್ತಿರುವ ಆರೋಗ್ಯ ಸೌಧ ಕೇಂದ್ರದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಆರೋಗ್ಯ ಸಚಿವರು, ಹಲ್ಲಿಲ್ಲದ ಹಿರಿಯ ನಾಗರಿಕರು ಆಹಾರದ ರುಚಿ ಸವಿಯಲು ಆಗುತ್ತಿಲ್ಲ.

ವೃದ್ಧರಿಗೆ ಬಾಯಿತುಂಬಾ ನಗಲೂ ಹಿಂಜರಿಕೆ ಉಂಟಾಗುತ್ತದೆ. ಆದ್ದರಿಂದ, 65 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲ್ಲಿನ ಸೆಟ್‌ಗಳನ್ನು ನೀಡುತ್ತದೆ ಎಂದು ಪ್ರಕಟಿಸಿದರು.

ಸರ್ಕಾರ ಉಚಿತವಾಗಿ ಹಲ್ಲಿನ ಸೆಟ್ ನೀಡಿರೆ, ಹಿರಿಯ ನಾಗರಿಕರು ತಮಗಿಷ್ಟವಾದ ಊಟವನ್ನು ಸೇವಿಸಬಹುದು. ಇಳಿ ವಯಸ್ಸಿನಲ್ಲಿ ಹಾಯಾಗಿರಬಹುದು ಎಂದು ತಮ್ಮ ವಿಶಿಷ್ಟ ಯೋಜನೆ ಬಗ್ಗೆ ಸಚಿವರು ಸಮರ್ಥನೆ ನೀಡಿದರು.

ಅನೇಕ ಹಿರಿಯ ನಾಗರಿಕರು ಹಲ್ಲಿನ ತೊಂದರೆಗಳಿಂದ ಬಳಲುತ್ತಿದ್ದಾರೆ. ಆದರೆ, ಆರ್ಥಿಕ ಸಮಸ್ಯೆಯಿಂದ ಹಲ್ಲಿನ ಸೆಟ್‌ ಹಾಕಿಸಿಕೊಳ್ಳಲು ಆಗುವುದಿಲ್ಲ. ಇಂತಹ ಜನರಿಗೆ ಆರೋಗ್ಯ ಇಲಾಖೆ ಉಚಿತವಾಗಿ ಹಲ್ಲಿನ ಸೆಟ್‌ ವಿತರಿಸಲು ಉದ್ದೇಶಿಸಿದೆ ಎಂದರು.

ತಾವು ಕೇವಲ ಈ ಯೋಜನೆಯನ್ನು ಘೋಷಣೆ ಮಾಡುತ್ತಿಲ್ಲ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ರಾಜ್ಯದಲ್ಲಿ ಬರಲಿದೆ ಎಂದು ಭರವಸೆ ನೀಡಿದರು. ಆದರೆ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ನೀಡಲು ಖಾದರ್ ನಿಕಾಕರಿಸಿದರು.

ಯಾವ ವೃದ್ಧರಿಗೆ ಹಲ್ಲು ಸೆಟ್ ದೊರೆಯುತ್ತದೆ. ಈ ವಿಶಿಷ್ಟ ಯೋಜನೆಯನ್ನು ಸರ್ಕಾರ ಹೇಗೆ ಜಾರಿಗೆ ತರುತ್ತದೆ ಎಂದು ಕಾದು ನೋಡಬೇಕು. ಸಚಿವರ ಈ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸುತ್ತದೆಯೋ ಅಥವ ವೃದ್ಧರ ಬಾಯಿಗೆ ಉಚಿತ ಹಲ್ಲುಸೆಟ್ ದೊರಕುತ್ತದೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

English summary
Health Minister U.T. Khader announced that health department has planed to distribute free denture for 65 year old peoples. In Magadi road, on, June, 11, Tuesday, minister addressed media and said, because of financial problem old age persons couldn't buy denture. so health department planed to distribute free denture. this program will implement in state soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X