ಛತ್ರಿ ಆಶ್ರಯದಲ್ಲಿ ಸಾಮೂಹಿಕ ಅತ್ಯಾಚಾರ, ಹತ್ಯೆ

school-girl-gang-rape-murder-under-umbrella-shelter
ನಾಡಿಯಾ (ಪಶ್ಚಿಮ ಬಂಗಾಲ), ಜೂನ್ 12: ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಕಾಮಪಿಶಾಚಿಗಳು ಮುಗಿಬಿದ್ದು, ದಾಹ ತೀರಿದ ಮೇಲೆ ಆ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ್ದಾರೆ.

ಏನಾಯಿತೆಂದರೆ 7ನೇ ತರಗತಿಯ ವಿದ್ಯಾರ್ಥಿನಿ ಸೋಮವಾರ ಶಾಲೆಯಿಂದ ಮರಳುತ್ತಿದ್ದಳು. ಮಳೆ ಬೀಳುತ್ತಿದ್ದರಿಂದ ಬಾಲಕಿ ಜಿಲ್ಲೆಯ ಗೆಡೆ ಪ್ರದೇಶದಲ್ಲಿರುವ ರೈಲ್ವೆ ಶೆಡ್ ನಲ್ಲಿ ಆಶ್ರಯ ಪಡೆದಳು. ಆದರೆ ಅದೆಲ್ಲಿದ್ದನೋ ನೆರೆಮನೆಯ ಯುವಕ ಬಿಮಲ್ ಸರ್ದಾರ್ ದಿಢೀರನೆ ಅಲ್ಲೇ ವಿದ್ಯಾರ್ಥಿನಿಯ ಪಕ್ಕದಲ್ಲೇ ಬಂದಿ ನಿಂತಿದ್ದಾನೆ. 'ನನ್ನ ಬಳಿ ಛತ್ರಿ ಇದೆ. ಬಾ ಮನೆ ತನಕ ಕರೆದುಕೊಂಡು ಹೋಗುವೆ' ಎಂದು ಪುಸಲಾಯಿಸಿದ್ದಾನೆ.

ಇದೇ ವೇಳೆ ಬಿಮಲ್ ಸರ್ದಾರ್ ತನ್ನ ಜತೆಗೆ ಇನ್ನೂ ಇಬ್ಬರನ್ನು ಕರೆದೊಯ್ದಿದ್ದಾನೆ. ಆದರೆ ಮಾರ್ಗ ಮಧ್ಯೆ ಬಾಲಕಿಯನ್ನು ಹುಣಸೆಮರದ ಕೆಳಕ್ಕೆ ಕರೆದೊಯ್ದು, ಅಲ್ಲಿ ಮೂವರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅದಾಗುತ್ತಿದ್ದಂತೆ ದುರುಳರು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿಬಿಟ್ಟಿದ್ದಾರೆ.

ಮಂಗಳವಾರ ಬೆಳಗ್ಗೆ ವಿದ್ಯಾರ್ಥಿನಿಯ ಶವವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬಿಮಲ್ ಸರ್ದಾರ್ ಜತೆಗೂಡಿ ಸದರಿ ವಿದ್ಯಾರ್ಥಿನಿ ರೈಲ್ವೆ ಶೆಡ್ ನಿಂದ ಹೋಗಿದ್ದನ್ನು ಸ್ಥಳೀಯರು ನೋಡಿದ್ದರು. ಇದರಿಂದ ಅನುಮಾನಗೊಂಡು ಅವನನ್ನೇ ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಿಮಲ್ ಸರ್ದಾರನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ಪಾಪಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಜತೆಗೆ, ಇತರೆ ಇಬ್ಬರ ಹೆಸರನ್ನೂ ಹೇಳಿದ್ದಾನೆ. ಆದರೆ ಅವರಿಬ್ಬರೂ ಪರಾರಿಯಾಗಿದ್ದಾರೆ.

ಮತ್ತೊಂದು ಘಟನೆ ಬೆಳಕಿಗೆ :
ನಾಡಿಯಾದ ಶಾಂತಿಪುರ ಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಸಾಯಿಸಿ, ಶವ ಹೂತು ಹಾಕಿರುವುದು ಮಂಗಳವಾರ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+