ಶಾಂತಿ ರಹಿತ ದೇಶಗಳಲ್ಲಿ ಭಾರತಕ್ಕೂ ಸ್ಥಾನ!
ಮುಂಬೈ, ಜೂ.12: ಜಗತ್ತಿನ ವಿವಿಧ ದೇಶಗಳಲ್ಲಿ 1 (ನಡೆಯುವ ಹಿಂಸಾಚಾರ ಕೃತ್ಯಗಳ ಸಂಬಂಧ ಜಾಗತಿಕ ಶಾಂತಿ ಸೂಚ್ಯಂಕ (ಜಿಪಿಐ) ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಶಾಂತಿ ರಹಿತ, ಹಿಂಸಾತ್ಮಕ ದೇಶಗಳ ಪಟ್ಟಿಯಲ್ಲಿ ಭಾರತಕ್ಕೂ ಸ್ಥಾನ ಸಿಕ್ಕಿದೆ. ಭಾರತಕ್ಕಿಂತ ಪಾಕಿಸ್ತಾನ ಮುಂದಿದೆ ಎಂಬುದಷ್ಟೇ ಸಮಾಧಾನಕರ ಸಂಗತಿ.
ಪ್ರತಿ ವರ್ಷದಂತೆ ಈ ಬಾರಿಯೂ ಜಿಪಿಐ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಹಿಂಸಾಚಾರ ಕೃತ್ಯಗಳ ಆಧಾರದ ಮೇಲೆ ಅತಿ ಹೆಚ್ಚು ಹಿಂಸಾ ಕೃತ್ಯಗಳು ನಡೆಯುವ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ಜಿಪಿಐ 2013ನೇ ಸಾಲಿನಲ್ಲಿ ಒಟ್ಟು 162 ರಾಷ್ಟ್ರಗಳನ್ನು ಗಣನೆಗೆ ತೆಗೆದುಕೊಂಡು ಸಮೀಕ್ಷೆ ನಡೆಸಿತ್ತು. ಅದರಲ್ಲಿ ಭಾರತ 141 ಸ್ಥಾನ ಪಡೆದಿದ್ದು, ಪಾಕಿಸ್ತಾನ 150ನೇ ಸ್ಥಾನದಲ್ಲಿದೆ. ಭಾರತದಲ್ಲಿ 2012ರಲ್ಲಿ ಒಟ್ಟು 799 ಮಂದಿ ಹಿಂಸಾಚಾರ ಕೃತ್ಯಗಳಿಂದಾಗಿ ಮೃತಪಟ್ಟಿದ್ದಾರೆ. ಪ್ರತಿ ದಿನ ಇಬ್ಬರಂತೆ ಹಿಂಸಾಚಾರಕ್ಕೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಮಾಹಿತಿ ಜಿಪಿಐನ ಸಮೀಕ್ಷೆಯಿಂದ ತಿಳಿದುಬಂದಿದೆ.

ಜಿಪಿಐನ 2013ನೇ ಸಾಲಿನ ಸಮೀಕ್ಷೆಯಲ್ಲಿ ಮಧ್ಯ ಆಫ್ರಿಕಾ ಗಣರಾಜ್ಯ ಹಿಂಸಾಚಾರ ಕೃತ್ಯ ಅಧಿಕವಾಗಿದೆ. ನಂತರದ ಸ್ಥಾನಗಳನ್ನು ಪಾಕಿಸ್ತಾನ, ಇರಾಕ್, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಸುಡಾನ್ ಪಡೆದಿವೆ. ಹಿಂಸಾಚಾರ ಕೃತ್ಯಗಳಲ್ಲಿ ಭಾರತ 20ನೇ ಸ್ಥಾನದಲ್ಲಿದೆ. ಶಾಂತಿಯುತ ಹಾಗೂ ಸುಭದ್ರ ರಾಷ್ಟ್ರಗಳ ಪಟ್ಟಿಯಲ್ಲಿ ಐಸ್ ಲ್ಯಾಂಡ್ ಪ್ರಥಮ ಸ್ಥಾನದಲ್ಲಿದೆ.
ಜಿಪಿಐ ಸಂಸ್ಥೆ ಪ್ರತಿ ವರ್ಷ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಲ್ಲಿ ಯಾವ ದೇಶಗಳು ಶಾಂತಿಯುತ ಜೀವನಕ್ಕೆ ಯೋಗ್ಯವಾಗಿವೆ ಎಂಬ ಅಂಶಗಳನ್ನು ಪ್ರಧಾನವಾಗಿಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸುತ್ತಿದೆ.
ಹಿಂಸಾತ್ಮಕ ರಾಷ್ಟ್ರಗಳ ಪೈಕಿ 162ನೇ ಸ್ಥಾನ ಪಡೆದಿರುವ ಅಫ್ಘಾನಿಸ್ತಾನ ಅತ್ಯಂತ ಅಪಾಯಕಾರಿ ದೇಶ ಎನಿಸಿದೆ. ನಂತರದ ಸ್ಥಾನದಲ್ಲಿ ಸೋಮಾಲಿಯಾ, ಸಿರಿಯಾ, ಇರಾಕ್ ಇದೆ.
ಶಾಂತಿಯುತ, ಸುರಕ್ಷಿತ ದೇಶಗಳ ಪೈಕಿ ಐಸ್ ಲ್ಯಾಂದ್ ಮೊದಲ ಸ್ಥಾನ, ಡೆನ್ಮಾರ್ಕ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೀಯಾ ನಂತರದ ಸ್ಥಾನಗಳಲ್ಲಿದೆ.


Click it and Unblock the Notifications
