ಕಚೇರಿಯಲ್ಲಿ ಸರಸವಾಡಿದ್ದು ಫೆಸ್ ಬುಕ್ ನಲ್ಲಿ ಬಹಿರಂಗ!

ಇಲ್ಲಿನ ಮಾಡೆಲ್ ಟೌನಿನಲ್ಲಿರುವ ಸ್ಪೀಡ್ ರೆಕಾರ್ಡ್ ಎಂಬ ಕಂಪನಿಯಲ್ಲಿ ಇಂತಹ ಲವ್, ಸೆಕ್ಸ್ ಕಥೆ ಬೆತ್ತಲಾಗಿದೆ. ಮೊದಲೇ ಸಂಗೀತ ಕಂಪನಿ. ಕಂಪನಿಯ ಗಾಯಕಿ ಮತ್ತು ಬರಹಗಾರ ಈ ಕಥಾನಕದ ಹೀರೋ-ಹೀರೋಯಿನ್. ನಿಜಜೀವನದಲ್ಲೂ ಅವರು ದಂಪತಿ. ಆದರೆ ಸದರಿ ಜೋಡಿ ಕಚೇರಿಯಲ್ಲೇ ಕಾಮಕೇಳಿಯಲ್ಲಿ ತೊಡಗಿದೆ.
ದಂಪತಿ ಸರಸಲ್ಲಾಪದಲ್ಲಿರುವುದು ಅದು ಹೇಗೋ ಫೆಸ್ ಬುಕ್ ನಲ್ಲಿ ಕಾಣಿಸಿಕೊಂಡಿದೆ! ಅದೀಗ ಕಾಡ್ಗಿಚ್ಚಿನಂತೆ ಹರಡತೊಡಗಿದೆ. ಫೋಟೋಗಳ ಜತೆಗೆ ಘಟನೆಗೆ ಮತ್ತಷ್ಟು ಬಣ್ಣಕಟ್ಟಿ ಫೆಸ್ ಬುಕ್ ನಲ್ಲಿ ಇಡೀ ಕಥಾನಕವನ್ನು ಹರಿಯಬಿಡಲಾಗಿದೆ.
ಕಂಪನಿ ಈಗ IT Act ಮೂಲಕ ಪೊಲೀಸರ ಮೊರೆಹೋಗಿದೆ. ಕಂಪನಿಯ ಅನ್ಯೋನ್ಯ ದಂಪತಿಗೆ ಇರುಸುಮುರುಸು ತರಲು ಕಿಡಿಗೇಡಿಗಳು ಮಾಡಿರುವ ಕುಕೃತ್ಯ ಇದಾಗಿದೆ ಎಂದು ಕಂಪನಿ ಅಲವತ್ತುಕೊಂಡಿದೆ. ಹೊಟ್ಟೆಕಿಚ್ಚಿನಿಂದ ಗಾಯಕಿಯೊಬ್ಬರು ಈ ಕೃತ್ಯಕ್ಕೆ ಕೈಹಾಕಿರುವ ಶಂಕೆಯಿದೆ ಎಂದು ಕಂಪನಿ ವ್ಯಸವ್ಥಾಪಕ ನಿರ್ದೇಶಕ ಸತ್ವಿಂದರ್ ಸಿಂಗ್ ಸೋನು ಹೇಳಿದ್ದಾರೆ.


Click it and Unblock the Notifications
