ರೈಲ್ವೆ ಟಿಕೆಟ್ ಬೇಕೆ, ಎಸ್ಎಂಎಸ್ ಮಾಡಿ!

ಜುಲೈ 1ರಿಂದ ಎಸ್ಎಂಎಸ್ ಮೂಲಕವೇ ರೈಲ್ವೆ ಟಿಕೆಟ್ ಬುಕ್ ಮಾಡುವ ಯೋಜನೆ ಜಾರಿಗೆ ಬರಲಿದೆ. ಇದರಿಂದಾಗಿ ಗಂಟೆಗಟ್ಟಲೇ ಕ್ಯೂ ನಿಂತು ಟಿಕೆಟ್ ಬುಕ್ ಮಾಡಿಸುವ ತೊಂದರೆಯಿಂದ ಜನರು ಪಾರಾಗಲಿದ್ದಾರೆ. ಈ ಸೇವೆ ಎಲ್ಲಾ ರೀತಿಯ ಮೊಬೈಲ್ ಬಳಕೆದಾರರಿಗೂ ಲಭ್ಯವಾಗಲಿದೆ.
ಬುಕ್ಕಿಂಗ್ ಹೇಗೆ : ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡಲು ಇಚ್ಛಿಸುವ ಗ್ರಾಹಕರು ಮೊದಲು ತಮ್ಮ ಮೊಬೈಲ್ ನಂಬರ್ ಅನ್ನು ಐಆರ್ ಸಿಟಿಸಿಯಲ್ಲಿ ಮತ್ತು ಒಂದು ಬ್ಯಾಂಕ್ನಲ್ಲಿ ನೋಂದಾವಣೆ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾವಣೆ ಆದ ಬಳಿಕ ಬ್ಯಾಂಕ್, ಗ್ರಾಹಕರಿಗೆ ಎಂಎಂಐಡಿ ನಂಬರ್ ಮತ್ತು ಪಾಸ್ವರ್ಡ್ ನೀಡುತ್ತದೆ.
ಬುಕ್ಕಿಂಗ್ ವಿಧಾನ : ರೈಲಿನಲ್ಲಿ ಪ್ರಯಾಣಿಸಬೇಕಾದ ಗ್ರಾಹಕರು, ರೈಲಿನ ನಂಬರ್, ತೆರಳಬೇಕಾದ ಸ್ಥಳ, ಪ್ರಯಾಣದ ದಿನಾಂಕ, ವರ್ಗ, ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಇವುಗಳನ್ನು ಎಸ್ಎಂಎಸ್ ಮೂಲಕ ನಿಗದಿಪಡಿಸಿದ ಸಂಖ್ಯೆಗೆ ಕಳುಹಿಸಬೇಕು.
ನೀವು ಬಯಸಿದ ಮಾರ್ಗದ ಟಿಕೆಟ್ ಲಭ್ಯವಿದ್ದರೆ ತಕ್ಷಣ, ನಿಮಗೆ ಎಸ್ಎಂಎಸ್ ಜೊತೆಗೆ ಟ್ರಾನ್ಸಾಕ್ಷನ್ ಐಡಿ ಬರುತ್ತದೆ. ಬಳಿಕ ಗ್ರಾಹಕರು ಮತ್ತೂಂದು ಎಸ್ಎಂಎಸ್ ಮೂಲಕ ಪೇ ಎಂದು ಟೈಪ್ ಮಾಡಿ - ಟ್ರಾನ್ಸಾಕ್ಷನ್ ಐಡಿ ಮತ್ತು ಎಂಎಂಐಡಿ ನಂಬರ್, ಪಾಸ್ವರ್ಡ್ ಅನ್ನು ಕಳುಹಿಸಬೇಕು.
ಎಷ್ಟು ದರ : ಗ್ರಾಹಕರು ಮೊಬೈಲ್ ಮೂಲಕ ಟಿಕೆಟ್ ಬುಕ್ ಪ್ರತಿ ಎಸ್ಎಂಎಸ್ಗೆ 3 ರೂ. ದರ ನಿಗದಿ ಪಡಿಸಲಾಗಿದೆ. ಹಣ ವರ್ಗಾವಣೆ ವೆಚ್ಚವಾಗಿ 5 ರೂ. ಕಡಿತಗೊಳ್ಳುತ್ತದೆ. ಒಟ್ಟು 8 ರೂ.ಗಳಲ್ಲಿ ಗ್ರಾಹಕರು ಕುಳಿತಲ್ಲಿಂದಲೇ ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ.


Click it and Unblock the Notifications
