ರಾಜೀ ಪ್ರಹಸನ: ನರೇಂದ್ರ ಮೋದಿ ಮತ್ತಷ್ಟು ಬಲಿಷ್ಠ

ಬೆಂಗಳೂರು, ಜೂನ್ 12: ಕೊನೆಗೂ ಅಡ್ವಾಣಿಯ ಕೈಬಿಟ್ಟು ಬಿಜೆಪಿ ಮುಂದಡಿಯಿಟ್ಟಿದೆ. ಯಡಿಯೂರಪ್ಪ ಹೇಳಿದಂತೆ ಸ್ವಯಂಕೃತಾಪರಾಧದಿಂದ ಬಿಜೆಪಿಯಲ್ಲಿ ಏಕಾಂಗಿಯಾದ ಅಡ್ವಾಣಿ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಮತ್ತು ಅದರಲ್ಲೇ ನರೇಂದ್ರ ಮೋದಿಯ ಭವಿಷ್ಯವೂ ಅಡಗಿದೆ.

ಅಡ್ವಾಣಿ ತಾವು 6 ತಿಂಗಳ ಕಾಲ ಪ್ರಧಾನಿಯಾಗಬೇಕು ಎಂಬ ಹಿಡನ್ ಅಜೆಂಡಾದೊಂದಿಗೆ ಸದ್ಯಕ್ಕೆ ಬಿಜೆಪಿಯ ಹೊಸ ಶಕ್ತಿ ಮತ್ತು ಆರೆಸೆಸ್ಸಿಗೆ ಮಣಿದಂತೆ ಕಾಣುತ್ತಿದ್ದಾರೆ. ಆದರೆ ನಿಸ್ಸಂಶಯವಾಗಿ ಇಡೀ ರಾಜೀನಾಮೆ ಪ್ರಹಸನದಲ್ಲಿ ಮೋದಿಯದ್ದೇ ಮೇಲುಗೈ ಆಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. [ಓದುಗರ ಅಭಿಮತ]

ಒಂದು ವೇಳೆ ಖಡಾಖಂಡಿತವಾಗಿ ಮೋದಿಯನ್ನು ಪ್ರಚಾರ ಸಮಿತಿ ಸಾರಥ್ಯದಿಂದ ಕೆಳಗಿಳಿಸಿ, ಅಡ್ವಾಣಿ ಸೂಚನೆಯಂತೆ ಸುಷ್ಮಾ ಸ್ವರಾಜ್, ಅನಂತ ಕುಮಾರ್ ವಗೈರೆಗಳು ಪ್ರತಿಷ್ಠಾಪನೆಗೊಂಡಿದ್ದರೆ ಅಥವಾ ಖುದ್ದು ಅಡ್ವಾಣಿ ಅವರ ಕೈಗೇ ಪ್ರಚಾರ ಸಮಿತಿ ಚುಕ್ಕಾಣಿ ಹೋಗಿದ್ದರೆ ಅದು ಮೋದಿಗೆ ಮುಳುವಾಗಿ ಅವರು ಬಲಹೀನರಾದರು ಎಂದೇ ಅರ್ಥೈಸಬಹುದಿತ್ತು. ಆದರೆ ಅಡ್ವಾಣಿ ರಾಜೀನಾಮೆ ಪ್ರಹಸನ ಕಾಮಿಡಿಯಾಗಿದ್ದರಿಂದ (ಆದರೆ ಪಕ್ಷ ಹೇಳುವಂತೆ ಸುಖಾಂತ್ಯ) ಮೋದಿ ಬಲವೃದ್ಧಿಯಾಗಿದೆ.

ಮುಗಿದ ಅಧ್ಯಾಯ; ಮೋದಿಯದ್ದೇ ಹೊಸ ಅಧ್ಯಾಯ

ಮುಗಿದ ಅಧ್ಯಾಯ; ಮೋದಿಯದ್ದೇ ಹೊಸ ಅಧ್ಯಾಯ

ಮೋದಿ ಬಲವರ್ಧನೆಯಾಯಿತು ಅಂದರೆ ಬಲಹೀನರಾಗಿದ್ದು ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೆ ಉತ್ತರವಾಗಿ ಅಡ್ವಾಣಿ ಕ್ಯಾಂಪ್ ಪೇಲವವಾಗಿ ಕಾಣಿಸಿಕೊಳ್ಳುತ್ತದೆ. ಭವಿತವ್ಯದಲ್ಲಿ ಸತ್ವಹೀನ ಅಡ್ವಾಣಿ ಕ್ಯಾಂಪಿನಿಂದ ಯಾವುದೇ ಅಡೆತಡೆಯಿಲ್ಲದೆ ಮೋದಿ ಮುನ್ನುಗ್ಗಬಹುದು ಎಂಬುದು ಮೋದಿ ಬೆಂಬಲಿಗರ ಎಣಿಕೆಯಾಗಿದೆ.
ಗಮನಾರ್ಹವೆಂದರೆ ಹೀಗೆ ಮೋದಿ ವಿರೋಧಿ ಪಾಳಯದಲ್ಲಿ ಕಾಣಿಸಿಕೊಳ್ಳುವವರು ತಾವೇ ತಾವಾಗಿ ಪರದೆಯ ಹಿಂದೆ ಸರಿದಿದ್ದಾರೆ. ಶಂಕರ್ ಸಿಂಗ್ ವಾಘೇಲ, ಕೇಶೂಭಾಯಿ ಪಟೇಲ್, ಹರೇನ್ ಪಾಂಡ್ಯಾ ಈ ಸಾಲಿನಲ್ಲಿ ಕಾಣಿಸುತ್ತಾರೆ.

ಪಟೇಲ ಉಕ್ಕಿನ ಪ್ರತಿಮೆ ಸಕಾಲಿಕ ಮತ್ತು ಸಾಂಕೇತಿಕ

ಪಟೇಲ ಉಕ್ಕಿನ ಪ್ರತಿಮೆ ಸಕಾಲಿಕ ಮತ್ತು ಸಾಂಕೇತಿಕ

ಮೋದಿಯ ಈ ಯಶಸ್ಸಿನ ಕಥೆಯಲ್ಲಿ ಬಿಜೆಪಿಯ ಬದಲಾವಣೆ ಪರ್ವ ಎದ್ದುಕಾಣುತ್ತಿರುವುದು ದಾಖಲಾರ್ಹ. ಭಾರತದ ನಿಜವಾದ ಉಕ್ಕಿನ ಮನುಷ್ಯ ಸಕಾಲದಲ್ಲಿ ಮೋದಿಯ ಕೈಹಿಡಿದಿದ್ದಾರೆ. ಸರದಾರ್ ವಲ್ಲಭಬಾಯಿ ಪಟೇಲರ ಬೃಹತ್ ಪ್ರತಿಮೆಯನ್ನು ಉಕ್ಕಿನಿಂದಲೇ ನಿರ್ಮಿಸಿ, ಸ್ಥಾಪಿಸಲು ಮೋದಿ ಮುಂದಾಗಿರುವುದು ಕಾತಾಳೀಯವಾಗಿದ್ದರೂ ಸಕಾಲಿಕ ಮತ್ತು ಸಾಂಕೇತಿಕ ಎನಿಸಿದೆ.

ಕಟ್ಟಾಳುಗಳ ಸಮ್ಮುಖದಲ್ಲಿಯೇ 'ಅಡ್ವಾಣಿ ಶರಣಾಗತಿ'

ಕಟ್ಟಾಳುಗಳ ಸಮ್ಮುಖದಲ್ಲಿಯೇ 'ಅಡ್ವಾಣಿ ಶರಣಾಗತಿ'

ಅಡ್ವಾಣಿಯ ಕಟ್ಟಾಳುಗಳು ಎಂದೇ ಗುರುತಿಸಿಕೊಂಡಿರುವ ಸುಷ್ಮಾ, ಉಮಾ, ಜಸ್ವಂತ್, ವೆಂಕಯ್ಯ. ಷಹನವಾಜ್, ಅನಂತ್ ಅವರ ಸಮ್ಮುಖದಲ್ಲಿಯೇ ಸಿಂಹದ ಗುಹೆಯೆದುರೇ 'ಅಡ್ವಾಣಿ ಶರಣಾಗತಿ' ಘೋಷಣೆಯಾಗಿರುವುದು ಮೋದಿಗೆ ನೈತಿಕ ಬಲವನ್ನೂ ತಂದಿತ್ತಿದೆ.
ರಾಜನಾಥ್, ಅಮಿತ್ ಷಾ, ಅರುಣ್ ಜೇಟ್ಲಿ ಮುಂತಾದ ಬಲಾಢ್ಯ ನಾಯಕರು ಹೆಗಲು ಕೊಡಲು ಸಿದ್ಧರಿರುವುದು ಮತ್ತು ಆರೆಸೆಸ್ಸಿನ ಕೃಪಾಶೀರ್ವಾದ ಬೆನ್ನಿಗಿರುವುದು ಮೋದಿ ಮುನ್ನಡೆಗೆ ಸಹಕಾರಿಯಾಗಲಿದೆ.

ಸಹಬಾಳ್ವೆ ಅನುಮಾನ; ಕರಡಿಯಪ್ಪುಗೆ ದೂರ

ಸಹಬಾಳ್ವೆ ಅನುಮಾನ; ಕರಡಿಯಪ್ಪುಗೆ ದೂರ

ಮೋದಿಗೆ ಬೇರೊಬ್ಬರು ಹಾಕಿಕೊಟ್ಟ ಮಾರ್ಗದಲ್ಲಿ ಹೆಜ್ಜೆಹಾಕುವ ಅಭ್ಯಾಸವಿಲ್ಲ. 2002ರಲ್ಲಿ ವಾಜಪೇಯಿ ಅವರೇ ಮೋದಿ ಮುಂದೆ ಗೋವಾ ಹವೆಯಲ್ಲಿ ಮಂಕಾಗಿದ್ದರು. ಇನ್ನು ಅನಂತ್ ಕುಮಾರ್ ಅವರಂಥ ನಾಯಕರು ಮೋದಿಯತ್ತ ಸುಳಿದಾಡಲು ಯತ್ನಿಸಿದರೆ ಮೋದಿ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವವರಲ್ಲ. ಅವರದ್ದೇನಿದ್ದರೂ ಗೋವಾದಲ್ಲಿ ಕಂಡಂತೆ ಎಡಗೈನಲ್ಲಿ ಮುಕ್ತ hand shakeಗೆ ಸೀಮಿತವಾಗುತ್ತದೆ. ಕರಡಿಯಪ್ಪುಗೆ ದೂರ ದೂರ!

ಮೋದಿ ಹಾದಿ ಅಷ್ಟು ಸುಲಭವಲ್ಲ

ಮೋದಿ ಹಾದಿ ಅಷ್ಟು ಸುಲಭವಲ್ಲ

ಇದರ ಹೊರತಾಗಿ ಹೇಳುವುದಾದರೆ ಹಳೆಯ ತಲೆಗಳನ್ನು ಎದುರುಹಾಕಿಕೊಂಡು ದಾಪುಗಾಲು ಹಾಕುವುದು ಮೋದಿ ಹಾದಿ ಅಷ್ಟು ಸುಲಭವಲ್ಲ. ಗಮನಿಸಿ ಎನ್ ಡಿಎ ಮೈತ್ರಿಕೂಟದ ಚುಕ್ಕಾಣಿ ಇನ್ನೂ ಅಡ್ವಾಣಿ ಕೈಯಲ್ಲೇ ಇದೆ. ಜತೆಗೆ, ಅವರು ತಮ್ಮ ರಾಜಕೀಯ ಪ್ರಹಸನದಿಂದ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಮಾಡಿಟ್ಟಿದ್ದಾರೆ. ಅದನ್ನೆಲ್ಲ ಮೆಟ್ಟಿ ನಿಲ್ಲಬೇಕು. ಸದ್ಯಕ್ಕೆ ಕಾರ್ಮೋಡದಲ್ಲಿ ಬೆಳ್ಳಿಬೆಡಗಾಗಿ ಕಾಣುತ್ತಿರುವುದು ಮೋದಿಯೊಬ್ಬರೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+