ಬೆಂಗಳೂರಿನಲ್ಲಿ ಪತ್ನಿ ಕೊಂದು ಪತಿರಾಯ ಪರಾರಿ

ಹೊಸೂರು ಬಂಡೆ ನಿವಾಸಿಯಾದ ಪ್ರಿಯಾ (23) ಕೊಲೆಯಾದ ದುರ್ದೈವಿ. ಮಂಗಳವಾರ ದಂಪತಿಗಳು ವಾಸಿಸುತ್ತಿದ್ದ ಶೆಡ್ ನಲ್ಲಿ ಪ್ರಿಯಾ ಮೃತದೇಹ ಪತ್ತೆಯಾಗಿದೆ. ಸೀರೆ ಅಥವ ಹಗ್ಗದಿಂದ ಕುತ್ತಿಗೆಗೆ ಬಿಗಿದು ಪ್ರಿಯಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲತಃ ತಮಿಳುನಾಡಿನವರಾದ ಪ್ರಿಯಾ ಮತ್ತು ವಿಶ್ವೇಶ್ವರ ದಂಪತಿ ಹೊಸೂರು ಬಂಡೆಯಲ್ಲಿ ಕಳೆದ ಒಂದು ವರ್ಷದಿಂದ ನೆಲೆಸಿದ್ದರು. ದೇವಾಲಯ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ದೇವಾಲಯದವರು ಮಾಡಿಕೊಟ್ಟ ತಾತ್ಕಾಲಿಕ ಶೆಡ್ ಗಳಲ್ಲಿ ವಾಸವಾಗಿದ್ದರು.
ವಿಶ್ವೇಶ್ವರ ಮದ್ಯವ್ಯಸನಿಯಾಗಿದ್ದ ಕುಡಿದು ಬಂದು ಹೆಂಡತಿಗೆ ದಿನಲೂ ಹೊಡೆಯುತ್ತಿದ್ದ ಎಂದು ಸಹ ಕಾರ್ಮಿಕರು ಹೇಳಿದ್ದಾರೆ. ಮಂಗಳವಾರವೂ ಕೆಲಸಕ್ಕೆ ತೆರಳದೆ, ಬೆಳಗ್ಗಿನಿಂದ ಶೆಡ್ ನಲ್ಲಿ ಕುಡಿಯುತ್ತಾ ಕುಳಿತಿದ್ದ. ಸಂಜೆ ಪ್ರಿಯಾ ಕೆಲಸದಿಂದ ಬಂದ ಕೂಡಲೇ ಅವಳೊಂದಿಗೆ ಜಗಳ ಪ್ರಾರಂಭಿಸಿದ್ದಾನೆ.
ಇಬ್ಬರ ಮಧ್ಯೆ ಜಗಳ ಜೋರಾದಾಗ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ಶೆಡ್ ನವರು ರಾತ್ರಿವೇಳೆಗೆ ಪ್ರಿಯಾ ಶೆಡ್ ಗೆ ಆಗಮಿಸಿದಾಗ ಅವರ ಮೃತದೇಹ ಪತ್ತೆಯಾಗಿದೆ. ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪರಾರಿಯಾಗಿರುವ ಪತಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. ಕೆಲಸ ಕೊಟ್ಟಿದ್ದ ಮೇಸ್ತ್ರಿ ಬಳಿಯೂ ಸರಿಯಾಗಿ ಹಣ ನೀಡದಿದ್ದರೆ, ಕೊಲೆ ಮಾಡುವುದಾಗಿ ವಿಶ್ವೇಶ್ವರ್ ಬೆದರಿಕೆ ಹಾಕಿದ್ದ ಎಂದು ಸಹ ಕಾರ್ಮಿಕರು ಆರೋಪಿಸಿದ್ದಾರೆ.


Click it and Unblock the Notifications
