ಬಿಎಸ್ವೈ ವಾಪಸ್: ರಹಸ್ಯ ಸಭೆಯ ಮಾತುಕತೆ ಏನು?

Post-Advani resignation- BJP leaders discuss BS Yeddyurappa's return,
ಬೆಂಗಳೂರು, ಜೂನ್ 12: ಅಂತೂ ಮಾಜಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಸೇರಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಮನಸು ಮಾಡಿದಂತಿದೆ.

ಈ ಸಂಬಂಧ ಶೆಟ್ಟರ್ ಒಬ್ಬರೇ ಅಲ್ಲ ಸದಾನಂದ ಗೌಡ ಹಾಗೂ ಅಶೋಕ್ ಅವರುಗಳೆಲ್ಲ ಮಂಗಳವಾರ ರಹಸ್ಯ ಸಭೆ ನಡೆಸಿ, ಯಡಿಯೂರಪ್ಪರನ್ನು ಪಕ್ಷಕ್ಕೆ ವಾಪಸ್ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಮಾತುಕತೆ ಏನು?: ಯಡಿಯೂರಪ್ಪ ಪಕ್ಷ ಕಟ್ಟಿದ್ದರಿಂದ ಮತ ಹಂಚಿಕೆಯಾಗಿ ಬಿಜೆಪಿ ಸೋಲು ಅನುಭವಿಸಿತು. ಬಿಜೆಪಿಯ ಶೇ. 20, ಕೆಜೆಪಿಯ ಶೇ. 10 ಹಾಗೂ ಬಿಎಸ್‌ಆರ್‌ ಶೇ. 3 ರಷ್ಟು ಮತ ಕೂಡಿಸಿದರೆ, 2008ರಲ್ಲಿ ಪಡೆದ ಶೇ. 33ರಷ್ಟು ಮತ ಆಗಲಿದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋಗದಿದ್ದರೆ, ನಿರೀಕ್ಷಿತ ಫಲ ಸಿಗದು. ಹೀಗಾಗಿ ಯಡಿಯೂರಪ್ಪರನ್ನು ಪಕ್ಷಕ್ಕೆ ಕರೆತರಬೇಕೆಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ.

ಯಡಿಯೂರಪ್ಪ ಪಕ್ಷ ಬಿಡುವಾಗ 4-5 ತಿಂಗಳು ಸಾರ್ವಜನಿಕ ಚರ್ಚೆ ನಡೆದಿದ್ದರಿಂದ ಪಕ್ಷಕ್ಕೆ ಹಾನಿಯಾಗಿತ್ತು. ಪಕ್ಷಕ್ಕೆ ಕರೆತರುವುದಾದರೆ, ತಕ್ಷಣ ಈ ಪ್ರಕ್ರಿಯೆ ಮುಗಿಸಬೇಕು. ಉಭಯೇತರರೂ ಸಮ್ಮತಿಸಿದರೆ ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಳಿಸಬೇಕೆಂಬ ಇಂಗಿತ ಸಭೆಯಲ್ಲಿ ಕೇಳಿ ಬಂತು ಎಂದು ತಿಳಿದುಬಂದಿದೆ.

ಯಡಿಯೂರಪ್ಪರಿಗೆ ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತಿಲ್ಲ. ಅದರ ಬದಲು ರಾಷ್ಟ್ರೀಯ ಮಟ್ಟಕ್ಕೆ ಅವರನ್ನು ಕಳಿಸುವುದು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂಸದ ಅಥವಾ ರಾಜ್ಯಸಭೆಗೆ ಚುನಾಯಿಸಿ ಸಚಿವ ಪದವಿ ನೀಡುವ ಪ್ರಸ್ತಾಪವೂ ಚರ್ಚೆ ಆಗಿದೆ.

ಪ್ರತಿಪಕ್ಷ ಸ್ಥಾನವೂ ಸ್ವಾಹಾ: ಕೆಜೆಪಿ, ಬಿಜೆಪಿ ವಿಲೀನದಿಂದ ಶಾಸಕ ಬಲ 46ಕ್ಕೆ ಏರಿ, ಪ್ರತಿಪಕ್ಷ ಸ್ಥಾನವೂ ದಕ್ಕುತ್ತದೆ. ಶ್ರೀರಾಮುಲು ಅವರನ್ನು ಮುಂದಿನ ದಿನಗಳಲ್ಲಿ ಕರೆ ತಂದರೆ ಪಕ್ಷಕ್ಕೆ ಆನೆಬಲ ಬಂದಂತಾಗುತ್ತದೆ ಎಂಬ ತರ್ಕವೂ ನಡೆದಿದೆ.

ಉಭಯ ಬಣಗಳು ಅನಿವಾರ್ಯ ವಿಲೀನದ ಮನಃಸ್ಥಿತಿಗೆ ಬಂದು ತಲುಪಿದ್ದರೂ, ಎರಡೂ ಕಡೆಯ ನಾಯಕರು ಮುಖಾಮುಖಿಯಾಗಿಲ್ಲ. ಸಂಧಾನಕಾರರನ್ನೂ ಇನ್ನೂ ಗುರುತಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+