ವಿಪ್ರೋಗೆ ಒಂದು ಸಾವಿರ ಟೆಕ್ಕಿಗಳು ಬೇಕಾಗಿದ್ದಾರೆ

recruitment-wipro-to-hire-1000-employees-in-germany
ಬೆಂಗಳೂರು, ಜೂನ್ 12: ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ, ಬೆಂಗಳೂರು ಮೂಲದ ವಿಪ್ರೋಗೆ 1,000 ಮಂದಿ ಟೆಕ್ಕಿಗಳು ಬೇಕಾಗಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ 1,000 ಮಂದಿ ಟೆಕ್ಕಿಗಳನ್ನು ನೇಮಕಾತಿ ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ. ಯುರೋಪಿನಲ್ಲಿ ತನ್ನ ಸೇವೆಗಳನ್ನು ವಿಸ್ತರಿಸಲು ಈ ನೇಮಕಾತಿ ಅಗತ್ಯವಿದ್ದು, ಜರ್ಮನಿಯಲ್ಲಿರುವ ವಿಪ್ರೋ ಘಟಕಕ್ಕೆ ಈ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಕಂಪನಿ ಬುಧವಾರ ತಿಳಿಸಿದೆ.

ಅಂದಹಾಗೆ ಕಳೆದ ವರ್ಷ ಜರ್ಮನಿ ಐಟಿ ಮಾರುಕಟ್ಟೆಯ ಗಾತ್ರ 80 ಶತಕೋಟಿ ಡಾಲರ್ ನಷ್ಟಿತ್ತು. ಪ್ರಸ್ತುತ ಜರ್ಮನಿ ವಿಪ್ರೋ ಘಟಕದಲ್ಲಿ 500 ಮಂದಿ ಉದ್ಯೋಗಿಗಳು ಇದ್ದಾರೆ. ಹಾಗೆಯೇ, ಕಂಪನಿಯ ಗ್ರಾಹಕ ಸಂಸ್ಥೆಗಳ ಸಂಖ್ಯೆ 30ರಷ್ಟಿದೆ.

2013ರ ಮಾರ್ಚ್ 13ಕ್ಕೆ ಅನ್ವಯವಾಗುವಂತೆ ಜಗತ್ತಿನಾದ್ಯಂತ 98 ರಾಷ್ಟ್ರಗಳಲ್ಲಿ ವಿಪ್ರೋ 1,45,000 ಉದ್ಯೋಗಿಗಳನ್ನು ಹೊಂದಿದೆ. ಜರ್ಮನಿಯಲ್ಲಿ ಪ್ರಸ್ತುತ retail, automotive, telecom, healthcare, banking ಮತ್ತು energy and utilities ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+