ಚಿನ್ನದ ನಾಣ್ಯ ಬೇಕೇ? ಅಂಚೆ ಕಚೇರಿಯಲ್ಲಿ ಲಭ್ಯ

India Post offers 7% discount on gold coins
ಬೆಂಗಳೂರು, ಜೂ.12: ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟಕ್ಕೆ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರು ನಿರ್ಬಂಧ ಹೇರಿದ ಮೇಲೆ ಇದರ ನೇರ ಲಾಭ ಅಂಚೆ ಕಚೇರಿಗಳಿಗೆ ಆಗುತ್ತಿದೆ.

ಭಾರತೀಯ ಅಂಚೆ ಇಲಾಖೆ ಚಿನ್ನದ ನಾಣ್ಯಗಳಿಗೆ ಎಂಆರ್ ಪಿ ದರದಲ್ಲಿ ಶೇ 7 ರಷ್ಟು ವಿನಾಯತಿ ನೀಡುತ್ತಿದೆ. ಈ ಸೌಲಭ್ಯ ಜೂ.30ರ ತನಕ ಇರುತ್ತದೆ ಎಂದು ಅಂಚೆ ಇಲಾಖೆ ಹೇಳಿದೆ.

ಬಂಗಾರದ ನಾಣ್ಯಗಳು 24 ಕ್ಯಾರೆಟ್ ಹೊಂದಿದ್ದು ಶೇ 99 ರಷ್ಟು ಪರಿಶುದ್ಧವಾದ ಸ್ವಿಸ್ ಚಿನ್ನವಾಗಿರುತ್ತದೆ. 1 ಗ್ರಾಂ, 5 ಗ್ರಾಂ, 10ಗ್ರಾಂ, 20 ಗ್ರಾಂ ಮತ್ತು 50 ಗ್ರಾಂಗಳಲ್ಲಿ ಚಿನ್ನದ ನಾಣ್ಯಗಳು ದೊರೆಯುತ್ತವೆ. ಸ್ವಿಟ್ಜರ್ಲೆಂಡ್ ನಿಂದ ಚಿನ್ನದ ನಾಣ್ಯಗಳನ್ನು ಆಮದು ಮಾಡಿಕೊಳ್ಳಲಾಗಿದೆ. ವಿಶೇಷ ಪ್ಯಾಕ್ ಗಳಲ್ಲಿ ಇವು ಲಭ್ಯವಿದ್ದು, ಬಹುಕಾಲ ಹಾಳಾಗದಂತೆ ನೋಡಿಕೊಳ್ಳಲಾಗಿದೆ.

ಭಾರತೀಯ ಅಂಚೆ ಇಲಾಖೆಯ ಕರ್ನಾಟಕದ 60 ಅಂಚೆ ಕಚೇರಿಗಳಲ್ಲಿ ಚಿನ್ನದ ನಾಣ್ಯಗಳು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲೂ ಚಿನ್ನದ ನಾಣ್ಯ ಮಾರಾಟ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಚಿನ್ನದ ಕಾಯಿನ್/ ಬಾರ್ ಗಳ ಮಾರಾಟ: ಚಿನ್ನದ ನಾಣ್ಯ ಹಾಗೂ ಬಾರ್ ಈಗಿನ ಟ್ರೆಂಡ್ ಗೆ ಬಂಡವಾಳ ಹೂಡಲು ಉತ್ತಮ ವಿಧಾನ. 10 ಗ್ರಾಮ್, 20 ಗ್ರಾಮ್ ಮುಂತಾದ ತೂಕದಲ್ಲಿ ಚಿನ್ನದ ನಾಣ್ಯಗಳು ಈಗ ಅಂಚೆ ಕಚೇರಿಯಲ್ಲೂ ಲಭ್ಯವಿದೆ.

ಗೋಲ್ಡ್ ಬಾರ್ ಗಳು ಕೂಡಾ 1 ಗ್ರಾಂ, 2 ಗ್ರಾಂ..10ಗ್ರಾಂ ಹೀಗೆ ಲಭ್ಯವಿದೆ. ವಿವಿಧೆಡೆ ಬೆಲೆಯಲ್ಲಿ ಕೊಂಚ ಏರುಪೇರು ಆದರೂ, ಚಿನ್ನದ ನಾಣ್ಯದ ಮೇಲೆ ಹಣ ಹೂಡುವುದು ಜಾಣರ ಲಕ್ಷಣ. ಆದರೆ, ಅಧಿಕೃತ ಡೀಲರ್ ಗಳು, ಅಪ್ಪಟ ಚಿನ್ನ ಪರೀಕ್ಷೆಯಲ್ಲಿ ಕೆಲವೊಮ್ಮೆ ಮೋಸ ಹೋಗುವ ಸಂಭವವಿರುತ್ತದೆ. ಉಳಿದಂತೆ ಇದು ಬಂಡವಾಳ ಹೂಡಿಕೆಯ ಸರಳ, ಸುಲಭ ವಿಧಾನ. ಅಂಚೆ ಕಚೇರಿಗಳಲ್ಲೂ ಚಿನ್ನದ ಕಾಯಿನ್ ಗಳು ಲಭ್ಯವಿರುವುದರಿಂದ ಸುರಕ್ಷಿತವಾಗಿ ವ್ಯವಹಾರ ಸಾಧ್ಯ.

ಅಂಚೆ ಕಚೇರಿಗೆ ಅನುಮತಿ ಏಕೆ? : ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ, ಅಂಚೆ ಕಚೇರಿಯಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ನೀಡಿರುವುದು ಏಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ. 58ರ ಗಡಿಯಲ್ಲೇ ಇನ್ನೂ ತೂಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಚಿನ್ನದ ನಾಣ್ಯ ಮಾರಾಟ ಎಷ್ಟು ಸರಿ?

ಚಿನ್ನ ಆಮದು ಸುಂಕ ಹೆಚ್ಚಳ ಮಾಡಿ ವಿತ್ತೀಯ ಕೊರತೆ ನೀಗಿಸಲು ಪ್ರಯತ್ನಿಸುತ್ತಿರುವ ವಿತ್ತ ಸಚಿವಾಲಯ, ಚಿನ್ನದ ಮೇಲಿನ ಹೂಡಿಕೆ ಸದ್ಯಕ್ಕೆ ಬೇಡ ಎಂಬ ಸಲಹೆಯನ್ನು ನೀಡುತ್ತಿದೆ. ಜೊತೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಅಂಚೆ ಕಚೇರಿಯಲ್ಲಿ ಚಿನ್ನದ ನಾಣ್ಯ ಖರೀದಿಗೆ ವಿನಾಯಿತಿ ನೀಡಿ ಪ್ರೋತ್ಸಾಹಿಸುತ್ತಿದೆ. [ಚಿನ್ನದ ಮೇಲಿನ ಹೂಡಿಕೆ ಈಗ ಬೇಡ ಏಕೆ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+