ಆಸ್ತಿ ಘೋಷಣೆ : ಪತ್ನಿಗಿಂತ ಕೇಜ್ರಿವಾಲ ಬಡವರಂತೆ

ನವದೆಹಲಿ, ಜೂ.9: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಮಾರನೆ ದಿನವೇ ಆಮ್ ಆದ್ಮಿ ಪಕ್ಷ(ಎಎಪಿ)ದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಒಟ್ಟು 71 ಲಕ್ಷ ರುಪಾಯಿ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ರಾಜಕಾರಣಿ ಅರವಿಂದ್ ಕೇಜ್ರಿವಾಲ್ ಅವರು, ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಪಡೆಯುವ ಸಂಬಂಧ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ಇಂಗ್ಲಿಷ್ ಮಾಧ್ಯಮ ವರದಿ ಮಾಡಿದೆ.

ಕೇಜ್ರಿವಾಲ್ ಅವರು ದೆಹಲಿಯ ಇಂದಿರಾಪುರಂನಲ್ಲಿ 70 ಲಕ್ಷ ರುಪಾಯಿ ಬೆಲೆ ಬಾಳುವ ಒಂದು ನಿವೇಶನ ಹಾಗೂ ತಮ್ಮ ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ರುಪಾಯಿ ನಗದು ಹೊಂದಿದ್ದಾರೆ.

Arvind Kejriwal owns assets worth Rs 71 lakh, wife owns Rs 1 crore flat

ಅವರು ತಮ್ಮ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಸಹ ಘೋಷಿಸಿದ್ದು, ಗುರಗಾಂವ್‌ನಲ್ಲಿ 1 ಕೋಟಿ ರುಪಾಯಿ ಬೆಲೆ ಬಾಳುವ 1 ಫ್ಲಾಟ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೇಜ್ರಿವಾಲ್ ಅವರ ಆಸ್ತಿಯ ವಿವರನ್ನು ಎಎಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಭ್ಯರ್ಥಿಗಳ ಪಟ್ಟಿ ಘೋಷಣೆ: ಆಮ್ ಆದ್ಮಿ ಪಾರ್ಟಿ ಪಕ್ಷ ತನ್ನ ಎರಡನೇ ಪಟ್ಟಿಯನ್ನು ಹೊರ ಹಾಕಿದೆ. ಪಕ್ಷದ ಪ್ರಮುಖ ನಾಯಕ ಗೋಪಾಲ್ ರೈ, ದಿನಗೂಲಿ ನೌಕರ ಸೇರಿದಂತೆ 44 ಅಭ್ಯರ್ಥಿಗಳನ್ನು 10 ಕ್ಷೇತ್ರಗಳಿಗೆ ಹೆಸರಿಸಲಾಗಿದೆ. ಅಂತಿಮ ಪಟ್ಟಿ ಇನ್ನೂ ಹೊರ ಹಾಕಲಾಗಿಲ್ಲ.

ಬವಾನಾ, ಚಾತರ್ ಪುರ್, ಗೋಕುಲ್ ಪುರ, ಕೃಷ್ಣನಗರ, ಲಕ್ಷ್ಮಿ ನಗರ, ಬಾಬರ್ ಪುರ್, ಮುಸ್ತಾಫಾಬಾದ್, ರಜೌರಿ ಗಾರ್ಡನ್, ಶಾಲಿಮಾರ್ ಬಾಗ್, ವಿಶ್ವಾಸ ನಗರಗಳಿಗೆ ಅಭ್ಯರ್ಥಿಗಳನ್ನು ನಿರ್ಣಯ ಮಾಡಲಾಗಿದೆ.ಅಭ್ಯರ್ಥಿಗಳ ಪೈಕಿ ದಿನಗೂಲಿ ನೌಕರ, ವೈದ್ಯ, ಉದ್ಯಮಿ ಸೇರಿದಂತೆ ವಿವಿಧ ಕ್ಷೇತ್ರದವರು ಸ್ಪರ್ಧೆಗಿಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+