ಮಹಿಳಾ ಕಾರ್ಪೊರೇಟರ್ ಮೈದುನ ನೇಣಿಗೆ ಶರಣು

ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (NCP) ಕಾರ್ಪೊರೇಟರ್ ರೇಖಾ ಜಾದವ್ ಅವರ ಮೈದುನ ಕಿರಣ್ ಸನೀಲ್ (35) ನೇಣಿಗೆ ಶರಣಾದವರು.
ಘಾಟ್ಕೋಪರ್ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಸನೀಲ್ ನೇಣಿಗೆ ಗೋಣೊಡ್ಡಿದ್ದಾರೆ. ಮೃತರ ಸಂಬಂಧಿ ಕುಮಾರ್ ಅವರು ಸನಿಲ್ ತಮ್ಮ ಮನೆಯ ಫ್ಯಾನಿಗೆ ನೇಣುಹಾಕಿಕೊಂಡು ನೇತಾಡುತ್ತಿರುವುದು ಕಂಡುಬಂದಿತು.
ಒಳಗಿನಿಂದ ಮನೆಗೆ ಬೀಗ ಹಾಕಿಕೊಂಡಿದ್ದರು. ಆದರೆ ತಕ್ಷಣ ನನ್ನ ಬಳಿಯಿದ್ದ ಮತ್ತೊಂದು ಕೀಯಿಂದ ಮನೆ ಬೀಗ ತೆಗೆದು ಒಳಹೋಗಿ ನೋಡಿದಾಗ ಸನಿಲ್ ಮೃತಪಟ್ಟಿರುವುದು ಕಂಡುಬಂದಿತು ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.












Click it and Unblock the Notifications