ಅಜ್ಜಿಗೆ 590 ಮಿಲಿಯನ್ ಲಾಟರಿ ಬಂದಿದ್ದು ಗೊತ್ತೇ ಇರಲಿಲ್ಲ!
ವಾಷಿಂಗ್ಟನ್,
ಜೂನ್ 7- ಆಕೆಗೆ 84 ವರ್ಷದ ಇಳಿವಯಸ್ಸಿನಲ್ಲಿ ಭಾಗ್ಯದ ಲಕ್ಷ್ಮಿ ಒಲಿದಿದ್ದಾಳೆ. ಅಂದರೆ ಫ್ಲೋರಿಡಾದ ಗ್ಲೋರಿಯಾ ಹೆಸರಿನ ಅಜ್ಜಿ ಬರೋಬ್ಬರಿ 3,336 ಕೋಟಿ ರೂ. ಪವರ್ ಬಾಲ್ ಲಾಟರಿ ಗೆದ್ದುಬಿಟ್ಟಿದ್ದಾರೆ. ಆದರೆ ಸುಮಾರು ಮೂರು ದಿನಗಳಾದರೂ ಅದು ಆಕೆಯ ಗಮನಕ್ಕೆ ಬಂದಿರಲಿಲ್ಲ. id="toptextpromo"> id='are-slot-1' class='oiad oi-axt oiadv'>ಬಂದ್ರೆ
ಕೋಟಿ, ಇಲ್ಲಾಂದ್ರೆ ... ಹೋಯ್ತು ಎಂಬ ಧಾಟಿಯಲ್ಲಿ Gloria C Mackenzie ಹೆಸರಿನ ಅಜ್ಜಿಯೆನೋ ಸಮೀಪದ ಸೂಪರ್ ಮಾರ್ಕೆಟ್ಟಿನಲ್ಲಿ ಆ ಲಾಟರಿ ಟಿಕೆಟನ್ನು ಖರೀದಿಸಿದ್ದರು. ಅದೂ ಅಂಗಡಿಯವನ ಬಲವಂತಕ್ಕೆ ಮಣಿದು. ಅಷ್ಟೇ. ವಯೋಸಹಜ ಮರೆವು ಆವರಿಸಿತೋ ಅಥವಾ ಈ ವಯಸ್ಸಿನಲ್ಲಿ ನನಗ್ಯಾಕೆ ಲಾಟರಿ ಚಿಂತೆ ಎಂದೋ, ಅಂತೂ ಆ ಲಾಟರಿ ವಿಚಾರವನ್ನು ಮರೆತೇ ಬಿಟ್ಟಿದ್ದರು. ಆದರೆ ಟಿಕೆಟ್ ಅನ್ನು ಭದ್ರವಾಗಿ ಎತ್ತಿಟ್ಟಿದ್ದರು.id='are-slot-2' class='oiad oi-axt oiadv'>

$590 million Powerball jackpot
ಇತ್ತ ಲಾಟರಿ ಎತ್ತಿದ ಮಂದಿ ಅದೃಷ್ಟಶಾಲಿಗಾಗಿ ಕಾದುಕುಳಿತರು. ಏಕೆಂದರೆ ಮೇ 19ರಂದೇ ಲಾಟರಿ ಫಲಿತಾಂಶ ಹೊರಬಿದ್ದಿದೆ. ಆದರೆ ಜಯಶಾಲಿ ಮಾತ್ರ ಟಿಕೆಟ್ ಹಿಡಿದು ಬಂದಿರಲಿಲ್ಲ. ಪವರ್ ಬಾಲ್ ಲಾಟರಿ ಅದೇ ಕಣ್ರೀ ನಮ್ಮ ಬೆಂಗಳೂರಿನಲ್ಲೂ ಒಂದಷ್ಟು ಕಾಲ ವಿಜೃಂಭಿಸಿ, ಯಾರಯಾರನ್ನೋ ಕೋಟ್ಯಧಿಪತಿಗಳನ್ನಾಗಿಸಿ ಯಾರಯಾರನ್ನೂ ಮತ್ತಷ್ಟು ನಿರ್ಗತಿಕರನ್ನಾಗಿ ಮಾಡಿಸಿತಲ್ಲಾ ಲೊಟ್ಟೋ (ಪ್ಲೇ ವಿನ್) ಎಂಬ ಲಾಟರಿ. ಅದೇ ತರಹದ್ದು ಈ ಅಜ್ಜಿ ಗೆದ್ದಿರುವ $590 million Powerball jackpot.

ಅಜ್ಜಿಗೆ ಲಾಟರಿ ಬಂದಿದ್ದು ಗೊತ್ತೇ ಇರಲಿಲ್ಲ
ಲಾಟರಿ ಗೆದ್ದ ವ್ಯಕ್ತಿ ಬರಲಿಲ್ಲ ಅಂತ ಲಾಟರಿ ಕಂಪನಿಯವರು ಅವರೆಲ್ಲೋ ಸತ್ತು ಹೋಗಿರಬೇಕು ಅಥವಾ ಅವರ ಮನೆಯಲ್ಲಿ ಟಿವಿ ಸಹ ಇಲ್ವಾ ಫಲಿತಾಂಶ ತಿಳಿಯಲು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಮೊನ್ನೆ 84 ವರ್ಷದ ಅಜ್ಜಿ ಹುರ್ರೆ ನಾನೇ ಕಣ್ರಿ ಆ ಅದೃಷ್ಟಶಾಲಿ ಎಂದು ಮೆಲ್ಲಗೇ ಒಂದೊಂದೇ ಹೆಜ್ಜೆ ಹಾಕುತ್ತಾ ಲಾಟರಿ ಅಂಗಡಿಯತ್ತ ಬಂದಾಗ ಕಂಪನಿಯವರು ನಿಜಕ್ಕೂ ನಿರಾಳರಾದರು.

84ರ ಇಳಿವಯಸ್ಸಿನಲ್ಲಿ ಭಾಗ್ಯದ ಬಾಗಿಲು ತೆರೆಯಿತು!
ಅಷ್ಟೇ ಅಲ್ಲ. ಅನಾಯಾಸವಾಗಿ ಅವರಿಗೂ ಅದೃಷ್ಟದ ಬಾಗಿಲು ತೆರೆಯಿತು. ಆನಪ್ಪಾ ಅಂದ್ರೆ ಇನ್ನು ಮುಂದಿನ ದಿನಗಳಲ್ಲಿ ಈ ಅಜ್ಜಿ ಲಾಟರಿ ಗೆದ್ದಿದ್ದನ್ನೇ ಮುಂದಿಟ್ಟುಕೊಂಡು, ನೋಡ್ರೀ, ನಮ್ಮ ಲಾಟರಿ ಎಷ್ಟು ಪ್ರಾಮಾಣಿಕತೆಯಿಂದ ಕೂಡಿದೆ ಎಂದು ಹೇಳುತ್ತಾ ಯಾವ ವಯಸ್ಸಿನಲ್ಲಿ ಹೇಗೋ ಹೇಳೋಕ್ಕಾಗೊಲ್ಲ. ಹಾಗಾಗಿ 84ರ ಅಜ್ಜಿಯಿಂದ ಹಿಡಿದು ಯಾರು ಬೇಕಾದರೂ ನಮ್ಮ ಲಾಟರಿ ಖರೀದಿಸಿ, ಗೆಲ್ಲಬಹುದು ಎಂದು ಜಾಹೀರಾತು ನೀಡಲೂ ಬಹುದು.

ಏನು ಅದೃಷ್ಟಾರೀ ಈ ಅಜ್ಜಮ್ಮನದು
ಅಂದಹಾಗೆ ಸಂಧ್ಯಾಕಾಲದಲ್ಲಿ ತನಗೆ ದಿಕ್ಕಾಗಿರುವ ಏಕೈಕ ಪುತ್ರನ ಜತೆ ಈ ಹಣ ಹಂಚಿಕೊಳ್ಳುವುದಾಗಿ ಆಕೆ ಸಂತೃಪ್ತ ಭಾವದಿಂದ ಹೇಳಿದ್ದಾರೆ. ಅಕ್ಷರಶಃ ತಗಡು ಡಬ್ಬಗಳಲ್ಲಿ ಕಟ್ಟಿದ್ದ ಜೋಪಡಿಯಲ್ಲಿ ವಾಸವಾಗಿದ್ದ ಈ ಅಜ್ಜಿ ಈಗ ಫ್ಲೋರಿಡಾದ ಗವರ್ನರ್ ಬಂಗಲೆಯನ್ನೇ ಖರೀದಿಸಬಹುದು. ಏಕೆಂದರೆ ಅಮೆರಿಕದ ಎರಡನೆಯ ಅತಿ ದೊಡ್ಡ ಮೊತ್ತದ ಲಾಟರಿ ಇದಾಗಿದೆ. ಸದರಿ ಲಾಟರಿ ಕಂಪನಿ 21 ವರ್ಷಗಳಲ್ಲಿ ಕೊಡಮಾಡಿರುವ ಅತಿ ದೊಡ್ಡ ಲಾಟರಿ ಮೊತ್ತ ಇದಾಗಿದೆ. ಏನು ಇದನ್ನು ಕೇಳಿ, ನಿಮ್ಮಲ್ಲೂ ಜೀವನೋತ್ಸಾಹ ಇಮ್ಮಡಿಸಿತೇ!

ನಿಮ್ಮಲ್ಲೂ ಜೀವನೋತ್ಸಾಹ ಇಮ್ಮಡಿಸಿತೇ!
ಅಂದಹಾಗೆ ಈ ಲಾಟರಿ ಟಿಕೆಟಿನ ಬೆಲೆ ಕೇವಲ 2 ಡಾಲರ್. ಅಮೆರಿಕದ 42 ಸಂಯುಕ್ತ ರಾಜ್ಯಗಳಲ್ಲಿ ಈ ಲಾಟರಿಯನ್ನು ಮಾರಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ ಅಮೆರಿಕದಲ್ಲಿ ಸಿಡಿಲು ಬಡಿಯುವ ಸಾಧ್ಯತೆ 2,80,000 ಅವಕಾಶಗಳಲ್ಲಿ 1 ಆಗಿದ್ದರೆ ಈ ಲಾಟರಿ ಕಂಪನಿಯವರು 175,223,510 ಅವಕಾಶಗಳಲ್ಲಿ 1 ಆಗಬಹುದು ಎಂದು ಎಣಿಕೆ ಮಾಡಿದ್ದರು. ಹಾಗಾಗಿ ಈ ಬಾರಿಯೂ ಯಾರಿಗೂ ಈ ಲಾಟರಿ ಒಲಿಯುವುದಿಲ್ಲ ಎಂದೇ ಭಾವಿಸಿದ್ದರು. ಆದರೆ ಅಜ್ಜಮ್ಮ ...












Click it and Unblock the Notifications