ಆತ್ಮಹತ್ಯೆ ಹಾದಿ ತುಳಿದ ಪಾಪ್ ತಾರೆ ಜಾಕ್ಸನ್ ಪುತ್ರಿ

ಪಾಪ್ ಸಂಗೀತಲೋಕದ ದಿಗ್ಗಜ ದಿವಂಗತ ಜಾಕ್ಸನ್ ಅವರ ಪುತ್ರಿ 15 ವರ್ಷದ ಪ್ಯಾರಿಸ್ ಜಾಕ್ಸನ್ ಬುಧವಾರ ಬೆಳಗಿನ ಜಾವ (ಜೂನ್ 5) ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಆಸ್ಪತ್ರೆಗೆ ದಾಖಲಾಗಿರುವ ಪ್ಯಾರಿಸ್, ಪ್ರಾಣಾಪಾಯದಿಂದ ದೂರವಾಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಆದರೆ ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. 2009ರಲ್ಲಿ ಮೃತಪಟ್ಟ ಪಾಪ್ ದೊರೆ ಜಾಕ್ಸನ್ ಅವರಿಗೆ ಪ್ಯಾರಿಸ್ ಅಲ್ಲದೆ ಪ್ರಿನ್ಸ್ ಮತ್ತು ಬ್ಲಾಂಕೆಟ್ ಎಂಬಿಬ್ಬರು ಪುತ್ರರು ಇದ್ದಾರೆ.
ಪ್ಯಾರಿಸ್ ತಂಗಿರುವ Calabasas ಮನೆಯಿಂದ ಆಕೆಯನ್ನು ಸ್ಟ್ರೆಚರ್ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಯಾರಿಸ್ ಅಧಿಕ ಪ್ರಮಾಣದಲ್ಲಿ ನಿದ್ದೆ ಮಾತ್ರೆ ಸೇವಿಸಿದ್ದು, ಕೈ ನರನಾಡಿಗಳನ್ನು ಕತ್ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾರಿಸ್ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ Twitter ಮೂಲಕ ಈ ಸಂದೇಶ ಕಳಿಸಿದ್ದಾರೆ-
REPORT: @parisjackson rushed to hospital after possible suicide attempt. Read on: iheartradio.com/go/news/sectio…
— iHeartRadio (@iHeartRadio) June 5, 2013
yesterday , all my troubles seemed so far awaynow it looks as though they're here to stay
— Paris Jacksoη (@ParisJackson) June 5, 2013












Click it and Unblock the Notifications