ಮುಂಬೈ : 43 ಕೋಟಿಗೆ ಮಾರಾಟವಾಯ್ತು ಮನೆ!

ವರ್ಲಿ ಪ್ರದೇಶದಲ್ಲಿ ಸಮುದ್ರದ ಕಡೆ ಮುಖಮಾಡಿ ನಿಂತಿದ್ದ ಸಮುದ್ರ ಮಹಾಲ್ ಮನೆಯ ಮೌಲ್ಯ ಪ್ರತಿ ಚದರ ಅಡಿಗೆ 1.18 ಲಕ್ಷ ರೂ. ಆಗಿತ್ತು. ಇದು ದೇಶದಲ್ಲಿಯೇ ಎರಡನೇ ಅತಿ ದುಬಾರಿ ರಿಯಲ್ ಎಸ್ಟೇಟ್ ಡೀಲ್ ಎಂದು ವಿಶ್ಲೇಷಿಸಲಾಗುತ್ತಿದೆ.
ಬೋರೊಸಿಲ್ ಕಂಪನಿಯ ಉಪಾಧ್ಯಕ್ಷರಾದ ಪ್ರದೀಪ್ ಖೇರುಕಾ ಸಮುದ್ರ ಮಹಾಲ್ ನ ಮನೆಯನ್ನು 43 ಕೋಟಿ ರೂ.ನ ದುಬಾರಿ ಮೌಲ್ಯಕ್ಕೆ ಖರೀದಿಸಿದ್ದಾರೆ. ಸಮುದ್ರ ಮಹಾಲ್ ಅಪಾರ್ಟ್‌ಮೆಂಟ್‌ನ 9 ಮತ್ತು 10ನೇ ಮಹಡಿಗಳ ನಡುವಿನ ಈ ಡ್ಯೂಪ್ಲೆಕ್ಸ್ ಫ್ಲಾಟ್ 3,638 ಚದರ ಅಡಿ ವಿಸ್ತೀರ್ಣ ಹೊಂದಿತ್ತು.
ಬುಷ್ ಕಂಪನಿಯ ಮಾಲೀಕರ ಆಪ್ತರಾದ ಸೋನ್ಯಾ ಜೇಠ್‌ಮಲ್ ಈ ಮನೆಯ ಒಡೆಯರಾಗಿದ್ದರು. ಅವರು ಅಮೆರಿಕದಲ್ಲಿ ನೆಲಸಿರುವ ಕಾರಣ ಐದು ವರ್ಷಗಳಿಂದ ಫ್ಯಾಟ್‌ನ ಮಾರಾಟಕ್ಕೆ ಯತ್ನಿಸಿದ್ದರು. ದುಬಾರಿ ದರವಾಗಿದ್ದರಿಂದ ವಿಳಂಬವಾಗಿದರೂ ಮನೆ ಮಾರಾಟವಾಗಿದೆ.
ಮುಂಬೈ ದಾಖಲೆ : ಮುಂಬೈನ ನೇಪಿಯನ್ ಸೀ ರೋಡ್‌ನಲ್ಲಿರುವ ಥಾಣೆ ಹೈಟ್ಸ್' ಅಪಾರ್ಟ್‌ಮೆಂಟ್‌ನಲ್ಲಿನ ಮನೆಯೊಂದನ್ನು ಚದರ ಅಡಿಗೆ 1.20 ಲಕ್ಷ ರೂ.ನಂತೆ ಕೊಟ್ಟು ಖರೀದಿಸಲಾಗಿತ್ತು. ಸಮುದ್ರ ಮಹಾಲ್ 1.18 ಚದರ ಅಡಿಗೆ ಮಾರಾಟವಾಗಿದ್ದು, ಎರಡನೇ ಸ್ಥಾನ ಗಳಿಸಿದೆ.
ಬೋರೊಸಿಲ್ ಬಗ್ಗೆ : ಲ್ಯಾಬೊರೇಟರಿ ಗ್ಲಾಸ್‌ವೇರ್, ಶೀಟ್ ಗ್ಲಾಸ್ ಮತ್ತು ಕಿಚನ್‌ವೇರ್ ಗಳ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಬೊರೋಸಿಲ್ ಕಂಪನಿ ಗುಜರಾತ್‌ನ ಬರೂಚನ್‌ನಲ್ಲಿ ಪ್ರಧಾನ ತಯಾರಿಕಾ ಘಟಕ ಹೊಂದಿದೆ.
ಕಂಪನಿಯು ಮುಂಬಯಿಯ ಅಂದೇರಿ ಪ್ರದೇಶದಲ್ಲಿ ಹೊಂದಿದ್ದ 18 ಎಕರೆ ಫ್ಯಾಕ್ಟರಿಯನ್ನು 2010ರಲ್ಲಿ 830 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಈ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ ದುಬಾರಿ ಬೆಲೆ ಕೊಟ್ಟು ಮನೆ ಖರೀದಿಸಲಾಗಿದೆ ಎಂದು ಬೊರೋಸಿಲ್ ಕಂಪನಿ ಹೇಳಿದೆ.












Click it and Unblock the Notifications