ಟೆಕ್ಕಿಗಳಿಗೆ ಉಂಡೆನಾಮ ತಿಕ್ಕಿದ ಅಮೆರಿಕ ಐಟಿ ಕಂಪನಿ

ಇಂತಹ ಜಾತಕದ ಕಂಪನಿಯ ಹೆಸರು Powerwave Technologies. ಮಾಧಾಪುರದ ಸೈಬರ್ ಪರ್ಲ್ ನಲ್ಲಿದ್ದ ಸದರಿ ಕಂಪನಿ ದಿವಾಳಿಯೆದ್ದು ಉದ್ಯೋಗಿಗಳನ್ನು ಪೋಷಿಸಲಾಗದೆ 300 ಮಂದಿಗೆ ಗುಡ್ ಬೈ ಹೇಳಿ ಅಮೆರಿಕಕ್ಕೆ ವಾಪಸಾಗಿದೆ. 2G ಮತ್ತು 3G hardware ಉತ್ಪಾದಿಸುವ ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿ ಇದು.
ಅಮೆರಿಕದಲ್ಲಿ ಕಳೆದ ಜನವರಿಯಲ್ಲಿ ದಿವಾಳಿ ಕೋರಿ ಅರ್ಜಿ ಸಲ್ಲಿಸಿದ್ದ ಕಂಪನಿ ಅದಕ್ಕೆ ಮಾನ್ಯತೆ ಸಿಗುತ್ತಿದ್ದಂತೆ ಕಳೆದ ತಿಂಗಳು ಭಾರತದಲ್ಲಿ ಜಾಗ ಖಾಲಿ ಮಾಡಿದೆ. ಕಳೆದ ತಿಂಗಳು ಗುರುವಾರ ಎಲ್ಲ ಉದ್ಯೋಗಿಗಳಿಗೂ ಒಂದು ಈ-ಮೇಲ್ ಕಳಿಸಿದ ಕಂಪನಿ, ಶುಕ್ರವಾರ ಮತ್ತು ಶನಿವಾರ ಕಂಪನಿಗೆ ರಜೆಯಿರುತ್ತದೆ. ಹಾಗಾಗಿ ಸೋಮವಾರ ಡ್ಯೂಟಿಗೆ ಜಾಯಿನ್ ಆಗಿ ಸಾಕು ಎಂದು ಹೇಳಿತ್ತು.
ಆದರೆ ಶುಕ್ರವಾರ ಬೆಳಗ್ಗೆ ಒಬ್ಬೊಬ್ಬರಾಗಿ ಉದ್ಯೋಗಿಗಳಿಗೆ ಕರೆ ಮಾಡಿದ ಕಂಪನಿಯ ಅಧಿಕಾರಿಗಳು ಕಂಪನಿ ಮುಚ್ಕೊಂಡು ಹೋಗ್ತಿದೆ. ತಕ್ಷಣ ಬಂದು ನಿಮ್ಮ ಲೆಕ್ಕವನ್ನು ಸೆಟ್ಲ್ ಮಾಡಿಕೊಂಡು ಹೋಗಿ ನಿರ್ಭಾವುಕವಾಗಿ ಹೇಳಿ ಕೈತೊಳೆದುಕೊಂಡಿದೆ.
'2000ನೇ ಇಸ್ವಿಯಿಂದಲೂ ಹೈದರಾಬಾದಿನಲ್ಲಿ ತಳವೂರಿದ್ದ ಕಂಪನಿ 1 ತಿಂಗಳಿಂದ ಸರಿಯಾಗಿ ಸಂಬಳ ಕೊಟ್ಟಿರಲಿಲ್ಲ. ಈಗ ನೋಡಿದರೆ ದಿಢೀರನೆ ಮುಚ್ಚಿಕೊಂಡು ಹೋಗುತ್ತಿದೆ' ಎಂದು ಉದ್ಯೋಗಿಗಳು ಮ್ಲಾನವದನರಾಗಿ ಅಲವತ್ತುಕೊಂಡಿದ್ದಾರೆ. ಹಾಗೆ ನೋಡಿದರೆ ಮೂರು ತಿಂಗಳ ಮುನ್ನವೇ ಕಂಪನಿ ನೋಡಿಸ್ ನೀಡಬೇಕಿತ್ತು. ಜತೆಗೆ ಮೂರು ತಿಂಗಳ ಸಂಬಳವನ್ನೂ ನೀಡಬೇಕಿತ್ತು. ಆದರೆ ಎಲ್ಲ ಕನ್ನಡಿಯೊಳಗಿನ ಗಂಟು.











Click it and Unblock the Notifications