ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ ನಿರೀಕ್ಷಿಸಿ

ಹೌದು ಇತ್ತೀಚೆಗೆ ಒಂದೇ ಸಮನೆ ಚಿನ್ನದ ಬೆಲೆ ಕುಗ್ಗುತ್ತಾ ಸಾಗಿದೆ. ಅದು ಇನ್ನೂ ಮುಂದುವರಿಯುತ್ತದೆ. ಮಧ್ಯೆ ಮಧ್ಯೆ ಸ್ವಲ್ಪ ಜಾಸ್ತಿಯಾಗಬಹುದು ಆದರೆ ಒಟ್ಟಾರೆಯಾಗಿ ಚಿನ್ನದ ಬೆಲೆಗಳು 10 ಗ್ರಾಂಗೆ ಕನಿಷ್ಠ 2000 ರೂ ತಗ್ಗುವುದು ಗ್ಯಾರಂಟಿ ಎಂದು ಚಿನ್ನದ ವ್ಯಾಪಾರಿಗಳನ್ನು ಉಲ್ಲೇಖಿಸಿ ಆಸೋಚಾಮ್ ಹೇಳುತ್ತಿದೆ.
ಬೆಲೆ ಕಡಿಮೆಯಾಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಕುದುರುತ್ತಿದೆ. ಆದಾಗ್ಯೂ ಚಿನ್ನದ ಬೆಲೆ 10 ಗ್ರಾಂಗೆ 25,000 ರೂಗೆ ಇಳಿಯುವುದು ಖಚಿತ ಎಂದು ಉದ್ಯಮ ರಂಗದ ಆಸೋಚಾಮ್ ಹೇಳಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಗ್ಗುತ್ತಿರುವುದೂ ಆತಂಕಕಾರಿಯಾಗಿದೆ. ಹಾಗಾಗಿ ಚಿನ್ನದ ಮೇಲೆ ಹೂಡಿಕೆಯಾಗುತ್ತಿದೆ. ಇದರಿಂದ ಬೆಲೆಗಳು ಮತ್ತಷ್ಟು ಕುಸಿಯಲಿದೆ ಎಂಬುದು ಆಸೋಚಾಮ್ ಲೆಕ್ಕಾಚಾರ.
ಕಳೆದ ಏಪ್ರಿಲ್ ತಿಂಗಳಲ್ಲಿ 10 ಗ್ರಾಂಗೆ 33000 ಗಡಿ ತಲುಪಿದ್ದ ಚಿನ್ನದ ಬೆಲೆ ಈಗ 27 ಸಾವಿರಕ್ಕೆ ಬಂದು ನಿಂತಿದೆ. ಸದ್ಯದಲ್ಲೇ ಚಿನ್ನದ ಬೆಲೆ 25000 ರೂ ಗೆ ಕುಸಿದಾಗ ಜನ ಖರೀದಿಗೆ ಮುಗಿ ಬೀಳುತ್ತಾರೆ. ಆಗ ತನ್ನಷ್ಟಕ್ಕೆ ತಾನೇ ಚಿನ್ನಕ್ಕೆ ಬೆಲೆ ಬರುತ್ತದೆ. ಅಲ್ಲಿಂದ ಮುಂದಕ್ಕೆ ಚಿನ್ನದ ಬೆಲೆ ಕುಸಿಯುವುದಿಲ್ಲ ಎಂದು ಆಸೋಚಾಮ್ ವಿಶ್ಲೇಷಿಸಿದೆ.
ವಿಶ್ವದ ಅತ್ಯಧಿಕ ಚಿನ್ನದ ಆಮದು ರಾಷ್ಟ್ರವಾದ ಭಾರತ 2013ರಲ್ಲಿ 900 ಟನ್ ಚಿನ್ನ ಆಮದು ಮಾಡಿಕೊಳ್ಳುವ ಅಂದಾಜಿದೆ.
ಮೇ 31 ಶುಕ್ರವಾರ ಚಿನ್ನದ ಧಾರಣೆ ಹೀಗಿತ್ತು. ಆವರಣದಲ್ಲಿರುವುದು ಮೇ 29ರ ದರ.
22 carat Gold:
ಬೆಂಗಳೂರು: 10 ಗ್ರಾಂಗೆ ರೂ 25,400 (25,100)
ದೆಹಲಿ: 10 ಗ್ರಾಂಗೆ ರೂ 25,129 (24,880)
ಮುಂಬೈ: 10 ಗ್ರಾಂಗೆ ರೂ 25,120 (24,810)
ಚೆನ್ನೈ: 10 ಗ್ರಾಂಗೆ ರೂ 25,360 (24,900)
ಕೋಲ್ಕೊತ್ತಾ: 10 ಗ್ರಾಂಗೆ ರೂ 24,956 (24,950)
ಹೈದರಾಬಾದ್: 10 ಗ್ರಾಂಗೆ ರೂ 25,550 (25,100)


Click it and Unblock the Notifications
