ಓಡಿಬರಲು ಒಪ್ಪದ ಪ್ರಿಯಕರನ ಹತ್ಯೆ ಮಾಡಿದ ಮಹಿಳೆ

woman-kills-boyfriend-for-refusing-to-elope-with-her
ವಡೋದರಾ, ಜೂನ್ 1: ತನ್ನ ಜತೆ ಓಡಿಬರಲು ಒಪ್ಪದ ಪ್ರಿಯಕರನ್ನು ವಿವಾಹಿತ ಮಹಿಳೆ ಹತ್ಯೆ ಮಾಡಿದ್ದಾಳೆ. ಗುಜರಾತಿನ ಖೇಡಾ ಜಿಲ್ಲೆಯ ಮೆಹಮದವಾಡಾ ತಾಲೂಕಿನ ಪಹಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಂಪಾಬೆನ್ ಚಿಮ್ಮನಬಾಯಿ ತಳಪದ್ ಎಂಬ 30 ವರ್ಷದ ಮಹಿಳೆ 40 ವರ್ಷದ ಅದೇ ಗ್ರಾಮದ ಮೇಳಾಬಾಯಿ ಥಾಕೋರ್ ಜತೆ ಸುಮಾರು ದಿನಗಳಿಂದ ಲವ್ವಡವ್ವಿ ಹೊಂದಿದ್ದಳು. ಇತ್ತೀಚೆಗೆ ಓಡಿಹೋಗಾಣ ಬಾ ಎಂದು ಆತನನ್ನು ಚಂಪಾಬೆನ್ ಪುಸಲಾಯಿಸಿದ್ದಾಳೆ. ಆದರೆ ಅದನ್ನು ಪುರಸ್ಕರಿಸದೆ ತಿರಸ್ಕಾರ ಮಾಡಿದ್ದಾನೆ.

ಇದರಿಂದ ಕೆರಳಿದ ಮಹಿಳೆ 'ಆಯ್ತು, ಎಂದಿನಂತೆ ಊರ ಹೊರಗೆ ಸೇತುವೆ ಕೆಳಗೆ ಸಿಗೋಣ ಬಾ' ಎಂದು ಮೇ 25ಕ್ಕೆ ಸ್ಥಳ/ ಮುಹೂರ್ತ ನಿಗದಿಪಡಿಸಿ, ಆಹ್ವಾನವಿತ್ತಿದ್ದಾಳೆ. ಹರಕೆಯ ಕುರಿಯಾದ ಥಾಕೋರ್ ಸೀದಾ ಅಲ್ಲಿಗೇ ಹೋಗಿದ್ದಾನೆ. ಅಷ್ಟೇ...

ಚಂಪಾಬೆನ್ ಮತ್ತು ಅವಳ ಗೆಳೆಯರು ಪೂರ್ವಯೋಜಿತ ಸಂಚಿನಂತೆ ಕಲ್ಲು ಎತ್ತಿಹಾಕಿ ಸಾಯಿಸಿದ್ದಾರೆ. ಸೇತುವೆ ಕೆಳಗೆ ಹರಿಯುತ್ತಿದ್ದ ವತ್ರಕ್ ನದಿಯಲ್ಲಿ ಥಾಕೋರ್ ಹೆಣ ಬಿಸಾಡಿ ಹೋಗಿದ್ದಾರೆ. ನಂತರ ಅಲ್ಲಿದ್ದ ಸಾಕ್ಷ್ಯವನ್ನು ಹಾಳು ಮಾಡಿ, ಜಾಗ ಖಾಲಿ ಮಾಡಿದ್ದಾರೆ.

ಥಾಕೋರ್ ಸೋದರ ವಿಠ್ಠಲ ಥಾಕೋರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+