ಫೇಸ್ ಬುಕ್ ಪ್ರೇಮ-ಕಾಮದ ಮಧ್ಯೆ ಮರಾಮೋಸ

ಆದರೆ ಈಗ ಅವಳು ಅಲವತ್ತುಕೊಂಡಿದ್ದಾಳೆ. ಅವನ ವಿರುದ್ಧ ಪೊಲೀಸರಿಗೆ ದೂರು ನೀಡಿ ನನ್ನನ್ನು ಮದುವೆಯಾಗುತ್ತೀನಿ ಎಂದು ಹೇಳಿ ಕೈಕೊಟ್ಟಿದ್ದಾನೆ. ನನ್ನ ಶೀಲ ಸೇರಿದಂತೆ ಸರ್ವಸ್ವವನ್ನೂ ದೋಚಿದ್ದಾನೆ. ಅವನನ್ನು ಸುಮ್ಮನೆ ಬಿಡಬೇಡಿ ಎಂದು ಗೋಗರೆದಿದ್ದಾಳೆ.
2012ರ ಆಗಸ್ಟಿನಲ್ಲಿ ಅಹಮದಾಬಾದಿಗೆ ಬಂದವಳು ಎಚ್ಆರ್ ಮ್ಯಾನೇಜರ್ ಆಗಿ ನೇಮಕಗೊಂಡಳು. ಹಾಗೆ ಮುಂಬೈನಿಂದ ಅಹಮದಾಬಾದಿಗೆ ಹಾರಿ ಬಂದವಳು ತರಬೇತಿ ಅವಧಿಯಲ್ಲಿ ಕಂಪನಿಯ ಗೆಸ್ಟ್ ಹೌಸಿನಲ್ಲಿ ಬಿಡಾರ ಹೂಡಿದಳು. ಇವನೂ ಅಲ್ಲಿ ಅವಳನ್ನು ಆಗಾಗ್ಗೆ ಸಂಧಿಸಲು ಶುರು ಮಾಡಿದ.
ಹೀಗೆ ಸಂಧಿ ಕಾಲದಲ್ಲಿರುವಾಗಲೇ ಪರಸ್ಪರ ಪ್ರೀತಿಗೆ ಬಿದ್ದಿದ್ದಾರೆ. ಸರಿ ಅವಳು ತರಬೇತಿ ಮುಗಿದಾದ ಬಳಿಕ ಕಂಪನಿಯ ಗೆಸ್ಟ್ ಹೌಸಿನಿಂದ ಹೊರಬಿದ್ದಳು. ಸೇಲ್ಸ್ ಮ್ಯಾನೇಜರ್ ಆಗಿದ್ದ ಅವನು ಅವಳಿಗಾಗಿ ಒಂದು ಮನೆ ಮಾಡಿಸಿಕೊಟ್ಟು ಅಲ್ಲಿ ಬಿಟ್ಟುಬಂದ.
ಆದರೆ ಮತ್ತೆ ಮತ್ತೆ ಆ ಮನೆಗೆ ಭೇಟಿ ಕೊಡುವ ಚಟ ಬೆಳೆಸಿಕೊಂಡ. ಸರಿಯಾಗಿ ಆ ಸಮಯದಲ್ಲೇ ಅದ್ಯಾವುದೋ ಮಾಯದಲ್ಲಿ ಅವಳನ್ನು ಮದುವೆಯೆಂಬ ಮಾಯಾಲೋಕಕ್ಕೆ ಕೊಂಡೊಯ್ದು ಮಾಡಬಾರದ್ದನ್ನು ಮಾಡಿಬಿಟ್ಟ.
ಅದಾದ ಬಳಿಕ ಅವಳು ಮದುಯವೆಯಾಗು ಎಂದು ಅವನ ಬೆನ್ನು ಹತ್ತಿದಳು. ನಿಮ್ಮ ಅಪ್ಪ-ಅಮ್ಮನಿಗೆ ನಮ್ಮ ಪ್ರೇಮ ವ್ಯವಹಾರದ ಬಗ್ಗೆ ತಿಳಿಸಿಬಿಡು. ಬೇಗ ಮದುವೆಯಾಗೋಣ ಎಂದು ಅವನ ಕಿವಿಯಲ್ಲಿ ತನ್ನ ಉಸಿರು ಹಾಕಿದಳು.
ಆದರೆ ಅವನು ವಿಮುಖನಾಡಗತೊಡಗಿದ. ಅನುಮಾನಗೊಂಡ ಅವಳು ಅವನ ಮನೆಯವರ ಬಗ್ಗೆ ವರದಿ ತರಿಸಿಕೊಂಡಳು. ಆಗ ಅವಳಿಗೆ ಆಘಾತ ಕಾದಿತ್ತು. ಅವನಿಗೆ ಮನೆಯವರು ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತಿದ್ದಾರೆ ಎಂದು ತಿಳಿದುಬಂತು.
ಅವಳೀಗ ಪೊಲೀಸರಿಗೆ ದೂರು ನೀಡಿದ್ದಾಳೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಒಂದು ವರ್ಷದಿಂದ ಅವನು ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಅಳು ತೋಡಿಕೊಂಡಿದ್ದಾಳೆ. ಅವನು ಈಗ ನವರಂಗಪುರ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ವಿಚವಾರಣೆ ನಡೆಸುತ್ತಿದ್ದಾರೆ. ಇದನ್ನೇ love, sex aur dhoka ಅನ್ನುವುದು.


Click it and Unblock the Notifications
