ನವಿ ಮುಂಬೈ ನಿರ್ಮಾಣಕ್ಕೆ 13 ಸಾವಿರ ಕೋಟಿ ರೂ

ಥಾಣೆ, ಜೂನ್ 1- ಯೆ ಬಂಬೈ ಹೈ ಬಾಬು! ಮೊದಲೇ ಅದು ಮುಂಬೈ. ಅದಕ್ಕೂ ಮುನ್ನ ಬಾಂಬೆ. ವಿಶ್ವಪ್ರಸಿದ್ಧ ಮಾಯಾನಗರಿ. ಈಗ ಇನ್ನೂ 12,882 ಕೋಟಿ ರೂ. ಸುರಿದು ಈಗಿರುವ ನವಿ ಮುಂಬೈ ಅನ್ನು ಮತ್ತಷ್ಟು ಜಗಮಗಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಒಟ್ಟಿನಲ್ಲಿ Navi Mumbai ಅನ್ನು ವಿಶ್ವಮಟ್ಟದ ನಗರವನ್ನಾಗಿ ಪರಿವರ್ತಿಸುವುದು ಇದರ ಗುರಿ.

ಅಂದಹಾಗೆ, ಸಪ್ತ ದ್ವೀಪಗಳ ಅಂದಿನ ಬಾಂಬೆಯನ್ನು ಬ್ರಿಟಿಷ್ ದೊರೆಯೊಬ್ಬನಿಗೆ 1662 ರಲ್ಲಿ ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನುತ್ತದೆ ಬಾಂಬೆಯ ರೋಚಕ ಚರಿತ್ರೆ.

big-plan-to-develop-navi-mumbai-as-global-city

ಈ ಮಹತ್ವದ ಯೋಜನೆ ಪ್ರಸ್ತಾಪವನ್ನು ನವಿ ಮುಂಬೈ ಅಭಿವೃದ್ಧಿ ಮಂಡಳಿಯೆದುರು ಶುಕ್ರವಾರ ಮಂಡಿಸಲಾಗಿದೆ. ಒಟ್ಟು ಯೋಜನಾ ವೆಚ್ಚ 12821.50 ಕೋಟಿ ರೂ. ಇದಕ್ಕೆ Navi Mumbai Corporation 3,733 ಕೋಟಿ ರೂ ನೀಡುತ್ತದೆ. 4,093 ಕೋಟಿ ರೂ ಮೊತ್ತವನ್ನು MMRDA, JNNURM ಭರಿಸುತ್ತದೆ. 4,995.50 ಕೋಟಿ ರೂ. ಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ರೂಪದಲ್ಲಿ ಪಡೆಯಲಾಗುತ್ತದೆ.

ವಿಶಾಲ ರಸ್ತೆಗಳು, ಸೇತುವೆಗಳು, ಮೇಲ್ಸೇತುವೆಗಳು, ಅಂಡರ್ ಪಾಸ್, ಪ್ರವಾಹ ನೀರು ನಿರ್ವಹಣೆ ಯೋಜನೆಗಳಲ್ಲಿ ತೊಡಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+