ವಿಂದೂ ಯಾಕೆ ಸಾಕ್ಷಿ ಧೋನಿ ಜತೆಗಿದ್ದ?
ಬೆಂಗಳೂರು, ಮೇ.22: ಹಿಂದಿ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಂದೂ ರಾಂಧ್ವ ಯಾರು ಎಂದರೆ ಎಲ್ಲರೂ ಕುಸ್ತಿಪಟು ದಾರಾ ಸಿಂಗ್ ಅವರ ಪುತ್ರ ಎಂದು ಥಟ್ಟನೆ ಹೇಳುತ್ತಿದ್ದರು. ಆದರೆ, ಈಗ ವಿಂದೂ ದಾರಾಸಿಂಗ್ ಎಂದರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬಾಲಿವುಡ್ ನ ಮೊದಲ ಲಿಂಕ್ ಆಗಿ ಎಲ್ಲೆಡೆ ಕುಖ್ಯಾತಿ ಗಳಿಸಿದ್ದಾನೆ.
ಇದರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಭಾರತ ತಂಡದ ನಾಯಕ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಜೊತೆ ವಿಂದೂ ಸಿಂಗ್ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ ಫಿಕ್ಸಿಂಗ್ ನಲ್ಲಿ ಧೋನಿ ಪಾತ್ರವೂ ಇದೆಯೇ? ಎಂಬ ಕೆಟ್ಟ ಅನುಮಾನ ಕೂಡಾ ಅಭಿಮಾನಿಗಳಲ್ಲಿ ಮೂಡಿದ್ದು ಇದೆ.
ಆದರೆ, ಅಭಿಮಾನಿಗಳು Vindoo Dara Singh is in a photo with Dhoni. Means: Dhoni fixes matches. Fact: I went to Germany. Means: I'm Hitler ಎಂದು ನಗೆಯಾಡಿ ಸುಮ್ಮನಾಗಿದ್ದಾರೆ.

ಆದರೆ, ಫಿಕ್ಸರ್ ಗಳ ಜೊತೆ ಸಾಕ್ಷಿ ಗೆಳೆತನ ಇರುವುದು ನಿಜವಾದರೂ ಅದು ಆಕೆ ತಪ್ಪಲ್ಲ ಎನ್ನಬಹುದು. ವಿಂದೂ ದಾರಾ ಸಿಂಗ್ ಹಾಗೂ ಸಾಕ್ಷಿ ಒಟ್ಟಿಗೆ ಪಂದ್ಯ ವೀಕ್ಷಿಸಿದ್ದಾರೆ ಎಂಬುದರ ಜೊತೆಗೆ ಶ್ರೀಶಾಂತ್ ಜೊತೆ ಕೂಡಾ ಸಾಕ್ಷಿ ಗೆಳೆತನ ಇದೆ.
ಪ್ಯಾಲೆಸ್ ಆನ್ ವೀಲ್ಸ್ ನ ಸಹಾಯಕ ವ್ಯವಸ್ಥಾಪಕ ಅತುಲ್ ಜಾಲ ಅವರು ಶ್ರೀಶಾಂತ್ ಗೆ ಸ್ನೇಹವಿದೆ. ಅತುಲ್ ಅವರ ಪುತ್ರಿ ಹಾಗೂ ಸಾಕ್ಷಿ ಒಂದೇ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದಿದ್ದಾರೆ. ಅತುಲ್ ಪುತ್ರಿಯನ್ನು ಶ್ರೀಶಾಂತ್ ಗೆ ಪರಿಚಯಿಸಿದ್ದೇ ಸಾಕ್ಷಿ ಎಂಬುದರ ಬಗ್ಗೆ ಪೊಲೀಸರು ವಶಪಡಿಸಿಕೊಂಡ ಬ್ಲಾಕ್ ಬೇರಿ ಮೊಬೈಲ್ ಫೋನ್ ಮಾಹಿತಿ ನೀಡಿದೆ.
ಆದರೆ, ಇದರಿಂದ ಸಾಕ್ಷಿಯನ್ನು ಆರೋಪಿಯಾಗಿ ಕಾಣಲು ಸಾಧ್ಯವಿಲ್ಲ ಎಂದು ಪೊಲೀಸ್ ಮೂಲಗಳೇ ಸ್ಪಷ್ಟಪಡಿಸಿವೆ.
ವಿಂದೂ ಯಾರು? : ವಿಶ್ವ ಕುಸ್ತಿ ವಿಜೇತ, ನಟ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾ ಸಿಂಗ್ ರಾಂಧ್ವ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ.
ಕಿರುತೆರೆ, ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದ, ಪಂಜಾಬಿ ಚಿತ್ರದಲ್ಲೂ ನಟನೆ. 2004ರಲ್ಲಿ ಕರಣ್ ಎಂಬ ಚಿತ್ರ, ಕಂಬಕ್ತ್ ಇಶ್ಕ್, ಜೋಕರ್, ಹೌಸ್ ಫುಲ್, ಸನ್ ಆಫ್ ಸರ್ದಾರ್ ನಲ್ಲಿ ನಟನೆ. ಸಲ್ಮಾನ್ ಖಾನ್ ಚಿತ್ರಗಳಲ್ಲಿ ಹೆಚ್ಚು ನಟನೆ ಮಾಡಿ ಜನಪ್ರಿಯತೆ ಗಳಿಸಲು ಯತ್ನಿಸಿದ್ದ.
ತಂದೆ ದಾರಾಸಿಂಗ್ ಅವರು ಟಿವಿ ಸಿರಿಯಲ್ ರಾಮಾಯಣ ದಲ್ಲಿ ಹನುಮಾನ್ ಪಾತ್ರದಲ್ಲಿ ಮಿಂಚಿದಂತೆ ವಿಂದೂ ಕೂಡಾ ಜೈ ಶ್ರೀ ಹನುಮಾನ್ ಧಾರಾವಾಹಿಯಲ್ಲಿ ಹನುಮಾನ್ ಪಾತ್ರ ನಿರ್ವಹಿಸಿದ್ದ.
49 ವರ್ಷ ವಯಸ್ಸಿನ ವಿಂದೂ ಎರಡು ಬಾರಿ ಮದುವೆಯಾಗಿದ್ದು, ಫರಾ ನಟಿಯಾಗಿದ್ದಾರೆ. ಒಬ್ಬ ಮಗ ಫತೆಹ್ ರಾಂಧ್ವಾನ ಇದ್ದಾರೆ. ಪುನಃ ಡೀನಾ ಉಮರೊವಾ ಅವರನ್ನು ವರಿಸಿದ ವಿಂದೂ ಅವರಿಗೆ ಪುತ್ರಿಯನ್ನು ಪಡೆದರು. ಬಾಲಿವುಡ್ ಇತರೆ ತಾರೆಗಳಂತೆ ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಂದೂ ಗೆ ವ್ಯಾಸ್ ಪರಿಚಯವಾಗಿದ್ದು ಮುಳುವಾಯಿತು.












Click it and Unblock the Notifications