ಟೆಕ್ಕಿ ಪತ್ನಿಗೆ ಇ-ಮೇಲ್‌ ಕಿರುಕುಳ: ಟೆಕ್ಕಿಗೆ ತಕ್ಕ ಶಾಸ್ತಿ

chennai-techie-to-pay-techie-wife-rs-1-lakh-for-e-abuse
ಚೆನ್ನೈ, ಮೇ 21: ವಿದೇಶದಲ್ಲಿ ಉದ್ಯೋಗ ಮಾಡುತ್ತಾ ತನ್ನ ಪತ್ನಿಯನ್ನು ಇಮೇಲ್‌ ಮತ್ತು ಎಸ್‌ಎಂಎಸ್‌ ಮೂಲಕ ನಿಂದಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರನನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ತಕ್ಕ ಶಾಸ್ತಿ ಮಾಡಿದೆ. ಜತೆಗೆ, 1 ಲಕ್ಷ ರೂ ಪರಿಹಾರ ನೀಡುವಂತೆಯೂ ಆದೇಶಿಸಿದೆ.

ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ತನ್ನ ಪತಿ ರಾಜನ್‌ (34) ನನ್ನನ್ನು ಅನುಮಾನದಿಂದ ನೋಡುತ್ತಾರೆ. ಯಾವುದೇ ಕಾರಣವಿಲ್ಲದೆ ನನಗೆ ಕರೆ ಮಾಡಿ, ಚಾಟ್‌ ಮಾಡಿ, ಇ-ಮೇಲ್‌ ಮಾಡಿ ನಿಂದಿಸಿದ್ದಾರೆ ಎಂದು 30 ವರ್ಷದ ಮಹಿಳೆಯೊಬ್ಬರು (ಈಕೆಯೂ ಟೆಕ್ಕಿಯಾಗಿ ಉದ್ಯೋಗದಲ್ಲಿದ್ದರು) ಕೋರ್ಟಿಗೆ ಅಲವತ್ತುಕೊಂಡಿದ್ದರು. ಕೌಟುಂಬಿಕ ಹಿಂಸೆ ಕಾಯ್ದೆಯಡಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪತ್ನಿಗೆ ಪರಿಹಾರ ನೀಡುವಂತೆ ರಾಜನ್ ಗೆ ಸೂಚಿಸಿದೆ.

ಪತಿರಾಯ ರಾಜನ್‌ ನನ್ನನ್ನು ಸಂಶಯದಿಂದ ನೋಡುವುದೂ ಅಲ್ಲದೆ ನನಗೆ ಕಿರುಕುಳ ನೀಡುತ್ತಿದ್ದಾರೆ. ರಾಜನ್‌ ಅವರೊಂದಿಗೆ ಸಂಸಾರ ಮಾಡಲು ತಿರಸ್ಕರಿಸಿದ್ದಕ್ಕೆ ಆತ ನನ್ನನ್ನು ಚೆನ್ನೈನಿಂದ ಬೆಂಗಳೂರಿಗೆ ಅಪಹರಿಸಿದ್ದರು. ಇದಕ್ಕೆ ರಾಜನ್‌ ಪೋಷಕರು ಸಹ ಸಹಕಾರ ನೀಡಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದರು. ದಂಪತಿ, 2009ರ ನವೆಂಬರಿನಲ್ಲಿ ಇವರ ಮದುವೆಯಾಗಿದ್ದರು.

ಬಾಂಬೆ ಹೈಕೋರ್ಟ್ ವರದಿ:
ಈ ಮಧ್ಯೆ, ಪತಿ-ಪತ್ನಿಗೆ ಸಂಬಂಧಿಸಿದಂತೆ ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಪತ್ನಿಯ ನಗ್ನ ಚಿತ್ರ ಬಿಡಿಸಿದ ಪತಿರಾಯನನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನಗ್ನ ಚಿತ್ರ ಬಿಡಿಸುವುದು ಅಪರಾಧ ಎಂದು ಬಾಂಬೆ ಹೈಕೋರ್ಟ್‌ ಸಾರಿದೆ. ಪರಿತ್ಯಕ್ತ ಪತ್ನಿಯ ನಗ್ನಚಿತ್ರ ಬಿಡಿಸಿದ ಕಲಾವಿದನೊಬ್ಬ, ಅದನ್ನು ತನ್ನ ಶಯನಕೋಣೆಯಲ್ಲಿ ನೇತುಹಾಕಿಕೊಂಡಿದ್ದ. ಇದರ ವಿರುದ್ಧ ಆತನ ಪತ್ನಿ ದೂರನ್ನು ದಾಖಲಿಸಿದ್ದರು.

ಕಲಾವಿದ ಚಿಂತನ್‌ ಉಪಾಧ್ಯಾಯ ಅವರ ಪತ್ನಿ ಗಂಡನ ವಿರುದ್ಧ ಮಹಿಳಾ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆಯಡಿ Indecent Representation of Women (Prohibition) Act ದೂರು ದಾಖಲಿಸಿದ್ದರು. 1998ರಲ್ಲಿ ಮದುವೆಯಾಗಿದ್ದ ಈ ದಂಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+