'ಕೊಳ್ಳುಬಾಕ' ಪತ್ನಿಗೆ ಲಿಯಾಂಡರ್ ಪೇಸ್ ಸೋಡಾಚೀಟಿ

paes-to-end-live-in-relationship-with-spendthrift-rhea
ಮುಂಬೈ, ಮೇ 15: ಯಾಕೇ ಹೀಗಾಯ್ತೋ... ಭಾರತದ ಕಂಡ ಅದ್ಭುತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು 7 ವರ್ಷಗಳ ತಮ್ಮ ದಾಂಪತ್ಯಕ್ಕೆ ಮಂಗಳ ಹಾಡಲು ನಿರ್ಧರಿಸಿದ್ದಾರೆ. ಅಂದಹಾಗೆ ರಿಯಾ ಪಿಳ್ಳೈ ಜತೆ ಲಿಯಾಂಡರ್ ಅವರು 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 7 ವರ್ಷದ ಅಯಾನ್ ಎಂಬ ಮುದ್ದಾದ ಹೆಣ್ಣು ಮಗುವಿದೆ.

'ನನ್ನ ಪತ್ನಿ ರಿಯಾ ಪಿಳ್ಳೈ ಕೊಳ್ಳುಬಾಕ ಮನಸ್ಥಿತಿಯವಳು. ಕಂಡಿದ್ದನ್ನೆಲ್ಲಾ ಖರೀದಿಸಬೇಕು ಎನ್ನುತ್ತಾಳೆ. ಅದನ್ನು ಇನ್ನು ನನ್ನ ಕೈಯಲ್ಲಿ ಸಹಿಸಿಕೊಳ್ಳಳು ಆಗದು. ಹಾಗಾಗಿ ಅವಳೊಂದಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದೇನೆ' ಎಂದು ಲಿಯಾಂಡರ್ ಹೇಳಿಕೊಂಡಿದ್ದಾರೆ.

ರಿಯಾ ಪಿಳ್ಳೈ, 2008ರಲ್ಲಿ ಸಂಜಯ್ ದತ್ ಜತೆ ವಿಚ್ಛೇದನ ಪಡೆದಿದ್ದರು. ರಿಯಾ ಜತೆ live in ಸಂಬಂಧ ಕುದುರುವ ಮುನ್ನ ಲಿಯಾಂಡರ್, ನಟಿ ಮಹಿಮಾ ಚೌಧರಿ ಜತೆ dating ಮಾಡುತ್ತಿದ್ದರು.

Spendthrift ರಿಯಾಗೆ ಸೋಡಾಚೀಟಿ ನೀಡಲು ಲಿಯಾಂಡರ್ ಕಳೆದ ಒಂದು ವರ್ಷದಿಂದ ಆಲೋಚಿಸುತ್ತಿದ್ದರಂತೆ. ವಾಸ್ತವವಾಗಿ, ಲಿಯಾಂಡರ್ ಮತ್ತು ರಿಯಾ ಪಿಳ್ಳೈ ಅವರು ಮದುವೆಯೇ ಆಗಿಲ್ಲ. ಅವರದು ಕೇವಲ ಲಿವ್-ಇನ್ ಸಂಬಂಧವಷ್ಟೇ ಎಂದು ಲಿಯಾಂಡರ್ ಪೇಸ್ ಅವರ ವಕ್ತಾರರು ತಿಳಿಸಿದ್ದಾರೆ.

ಆದರೆ ಒಂದು ಮೂಲದ ಪ್ರಕಾರ 2006ರಲ್ಲಿ ಸರಳ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ರಿಯಾ ಪಿಳ್ಳೈ Art of Livingನಲ್ಲಿ ಬೋಧಕಿಯಾಗಿದ್ದಾರೆ.

ಇಬ್ಬರೂ ಪರಸ್ಪರ ಸಹಮತದ ವಿಚ್ಛೇದನಕ್ಕೆ ಮುಂದಾಗಿದ್ದು, ಖ್ಯಾತ ನ್ಯಾಯವಾದಿ ಮೃಣಾಲಿನಿ ದೇಶಮುಖ್ ಅವರನ್ನು ಒಟ್ಟಿಗೇ ಭೇಟಿಯಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+